ತೀರ್ಥಹಳ್ಳಿ: ಸಹಕಾರಿ ಕ್ಷೇತ್ರದ ನಾಯಕ ಕಟ್ಟೆಗದ್ದೆ ಹಾಲಪ್ಪ ಅವರ ಪುತ್ರ ಆಕರ್ಷ ರಾಜ್ ಅವರ ಶವ ಮಂಗಳವಾರ ತಾಲೂಕಿನ ಕವಲೇದುರ್ಗ ಕೆರೆಯಲ್ಲಿ ಪತ್ತೆಯಾಗಿದೆ.
ಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದ ಬಿಇ ಪದವೀಧರ ಕಟ್ಟೆಗದ್ದೆ ಆಕರ್ಷ ರಾಜ್ (26) ಮೃತದೇಹ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗಾ ಕ್ರಾಸ್ ಸಮೀಪದ ಕೆರೆಯಲ್ಲಿ ಮುಂಜಾನೆ ಪತ್ತೆಯಾಗಿದ್ದು ಇದೀಗ ಹಲವು ಅನುಮಾನ ವ್ಯಕ್ತವಾಗುತ್ತಿದೆ.
ಗುತ್ತಿಗೆದಾರರಾಗಿದ್ದ ಆಕರ್ಷ ರಾಜ್ ಬೆಂಗಳೂರಿನಲ್ಲಿ ಬಿಇ ಪದವಿ ಪಡೆದಿದ್ದರು. ಭಾನುವಾರ ಸಂಜೆ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗ ಹೋಗುವ ಮಾರ್ಗ ಮಧ್ಯೆ ದುರ್ಗಾ ಕ್ರಾಸ್ ಬಳಿ ಅವರು ತೆಗೆದುಕೊಂಡು ಹೋಗಿದ್ದ ಬ್ರಿಜ್ಜಾ ಕಾರು ವಿದ್ಯುತ್ ಕಂಬಕ್ಕೆ ತಗಲಿ ಅಪಘಾತವಾಗಿತ್ತು. ಅದೇ ದಿನ ಸಂಜೆಯಿಂದ ಆಕರ್ಷ ರಾಜ್ ಕಾಣೆಯಾಗಿದ್ದರು. ಮಂಗಳವಾರ ಬೆಳಿಗ್ಗೆ ಮೃತದೇಹ ಸಮೀಪದ ಕೆರೆಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಆದರೆ ಅದಕ್ಕೂ ಮೊದಲು ಕಾರು ಅಪಘಾತವಾದ ಸ್ಥಿತಿಯಲ್ಲಿಯೇ ಕಂಡು ಬಂದಿರುವುದು ಹಲವು ಅನುಮಾನಕ್ಕೂ ಕಾರಣವಾಗಿದೆ.
ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.