w
Headlines
Home » ರಿಪ್ಪನ್ ಪೇಟೆ ಗುಡ್ ಶೆಫರ್ಡ್ ಚರ್ಚ್ ಬಳಿ ಭೀಕರ ರಸ್ತೆ ಅಪಘಾತ : ಬೈಕ್ ಸವಾರನ ಸಾವು

ರಿಪ್ಪನ್ ಪೇಟೆ ಗುಡ್ ಶೆಫರ್ಡ್ ಚರ್ಚ್ ಬಳಿ ಭೀಕರ ರಸ್ತೆ ಅಪಘಾತ : ಬೈಕ್ ಸವಾರನ ಸಾವು

ರಿಪ್ಪನ್ ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶಫರ್ಡ್ ಶಾಲೆಯ ಸಮೀಪ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.


ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿ ಕೊಪ್ಪ ಗ್ರಾಮದ ದಿನೇಶ್ ಪಿಸಾಳೆ (42) ಮೃತಪಟ್ಟ ದುರ್ಧೈವಿಯಾಗಿದ್ದಾರೆ.

ಮೃತರು ಇಂದು ಸಂಜೆ ರಿಪ್ಪನ್ ಪೇಟೆ ಪಟ್ಟಣದಿಂದ ತನ್ನ ಸ್ವಗ್ರಾಮ ತಮ್ಮಡಿಕೊಪ್ಪ  ಹೋಗುತ್ತಿರುವಾಗ ಕ್ಯಾಂಟರ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. 


ರಾಜ್ಯ ಹೆದ್ದಾರಿ 1ರಲ್ಲಿನ ಗುಡ್ ಶಫರ್ಡ್ ಶಾಲೆಯ ಮುಂಭಾಗ ಅಪಘಾತ ನಡೆದಿದ್ದು  ಕ್ಯಾಂಟರ್ ಡಿಕ್ಕಿಯ ರಭಸದಿಂದ ದ್ವಿಚಕ್ರ ವಾಹನ ನುಜ್ಜು ಗುಜ್ಜಾಗಿದ್ದು ಬೈಕ್ ಸವಾರನ ಬಲಗೈ ತುಂಡಾಗಿ,ಕ್ಯಾಂಟರ್ ಮೈ ಮೇಲೆ ಹರಿದ ಪರಿಣಾಮ ತೀವ್ರ ರಕ್ತಸ್ರಾವವಾಗುತ್ತಿತ್ತು.


ಸ್ಥಳಕ್ಕೆ ಪೊಲೀಸರು ಆಗಮಿಸಿ ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.