ಭದ್ರಾವತಿ ನಗರದ ಅಪ್ಪಾಜಿ ಗೌಡ ಪೆಟ್ರೋಲ್ ಪಂಪ್ ಹಿಂಭಾಗದಲ್ಲಿರುವ ರೈಲ್ವೆ ಹಳಿಯಲ್ಲಿ 30 ಕ್ಕೂ ಹೆಚ್ಚು ಕುರಿಗಳ ಮಾರಣ ಹೋಮ ನಡೆದಿದೆ. ರೈಲಿಗೆ ಸಿಲುಕಿ ಕುರಿಗಳು ಸಾವನ್ನಪ್ಪಿವೆ.
ತಾಳಗುಪ್ಪ ಮೈಸೂರು ರೈಲು ಬರುವ ವೇಳೆ ಹಳಿ ದಾಟುವಾಗ ಕುರಿಗಳ ಮೇಲೆ ರೈಲು ಹರಿದಿದೆ. 30ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿಯೇ ಸತ್ತಿದ್ದು, ಕೆಲ ಕುರಿಗಳು ಜೀವನ್ಮರಣಗಳ ನಡುವೆ ಬಿದ್ದು ಒದ್ದಾಡುತ್ತಿದ್ದವು.
ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ಎಕ್ಸಪ್ರೆಸ್ ರೈಲಿಗೆ ಕುರಿಗಳು ಸಿಲುಕಿವೆ.ಹಾವೇರಿ ಸವಣೂರಿನ ವ್ಯಕ್ತಿಯೋರ್ವರಿಗೆ ಈ ಕುರಿಗಳು ಸೇರಿದ್ದು ಎನ್ನಲಾಗಿದೆ.