ಅವ್ಯವಸ್ಥೆಯ ಆಗರ,ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾದ ರಿಪ್ಪನ್ ಪೇಟೆ ಬಸ್ ಪ್ರಯಾಣಿಕರ ತಂಗುದಾಣ !!
ರಿಪ್ಪನ್ ಪೇಟೆ : ತಾಲೂಕಿನಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯತ್, ಸ್ವಚ್ಚ ಭಾರತ್ ಅಭಿಯಾನದಲ್ಲಿ ಪ್ರಶಸ್ತಿ ಪಡೆದ ಪಂಚಾಯತಿ,ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ರಿಪ್ಪನ್ ಪೇಟೆ ಯಲ್ಲಿರುವ ಒಂದೇ ಒಂದು ಪ್ರಯಾಣಿಕರ ತಂಗುದಾಣ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ. ರಿಪ್ಪನ್ ಪೇಟೆ ಜನತೆಯ ದಶಕದ ಬೇಡಿಕೆ ಬಸ್ ನಿಲ್ದಾಣ ರಾಜಕಾರಣಿ ಗಳ ಇಚ್ಚ ಶಕ್ತಿ ಕೊರತೆಯಿಂದ ಆಗದೆ ರಾಜಕಾರಣಿ ಗಳಿಗೆ ತಮ್ಮ ಎಲೆಕ್ಷನ್ ಸಮಯದ ಪ್ರಚಾರದ ಅಸ್ತ್ರಕ್ಕೆ ಸೀಮಿತ ವಾಗಿದೆ. ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು…