w
Headlines
Home » ಚಲಿಸುತ್ತಿದ್ದ ಕಾರಿನ ಚಾಲಕ ಹೃದಯಾಘಾತದಿಂದ ಸಾವು : ನಿಯಂತ್ರಣ ತಪ್ಪಿ ಸರಣಿ ಅಪಘಾತ

ಚಲಿಸುತ್ತಿದ್ದ ಕಾರಿನ ಚಾಲಕ ಹೃದಯಾಘಾತದಿಂದ ಸಾವು : ನಿಯಂತ್ರಣ ತಪ್ಪಿ ಸರಣಿ ಅಪಘಾತ

ಕಾರು ಚಲಾಯಿಸುವಾಗಲೇ ಚಾಲಕ ಹೃದಯಾಘಾತಕ್ಕೊಳಗಾದ ಹಿನ್ನಲೆಯಲ್ಲಿ ಎದುರುಗಡೆ ಇದ್ದ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದಿದೆ.ನಂತರ ಕಾಂಪೌಂಡ್ ಗೋಡೆಗೆ ವಾಹನ ಅಪ್ಪಳಿಸಿ ನಿಂತಿದೆ.ಅಷ್ಟರಲ್ಲಾಗಲೇ ಕಾರು ಚಾಲಕ ಮೃತಪಟ್ಟಿದ್ದಾನೆ.

ಶಿವಮೊಗ್ಗ ಗೋಪಾಳದ ಚಾಲುಕ್ಯನಗರದಲ್ಲಿ ಈ ಘಟನೆ ಸಂಭವಿಸಿದೆ.

ಮಲವಗೊಪ್ಪ ನಿವಾಸಿ ಬಾಬು ಯಾನೆ ಕ್ರೇನ್ ಬಾಬು (58) ಎಂಬ ವ್ಯಕ್ತಿ ಸಾವಿಗೀಡಾಗಿದ್ದು, ಅವರು ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತವಾಗಿದ್ದರಿಂದ ಈ ದುರಂತ ಸಂಭವಿಸಿದೆ.

ಚಾಲಕ ಚಲಿಸುತಿದ್ದ ಹೊಂಡಾ ಸಿಟಿ ಕಾರು ನಾಲ್ಕಾರು ವಾಹನಗಳಿಗೆ ಡಿಕ್ಕಿ ಹೊಡೆದು, ಗೋಡೆಯೊಂದಕ್ಕೆ ಡಿಕ್ಕಿಯಾಗಿ ನಿಂತಿದೆ.

ಸ್ಥಳೀಯರು ಅಪಘಾತ ಗಮನಿಸಿ ಕಾರು ಬಾಗಿಲು ತರೆದು ನೋಡಿದಾಗ ಚಾಲಕ‌ ಮೃತನಾಗಿರುವುದು ಕಂಡುಬಂದಿದೆ.ಕೂಡಲೇ ಮೆಗ್ಗಾನ್ ಗೆ ಶವವನ್ನು ಸಾಗಿಸಲಾಗಿದೆ.

ಎದುರುಗಡೆ ಇದ್ದ ವಾಹನದವರು ಅದೃಷ್ಟಾವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಶಿವಮೊಗ್ಗ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದೆ. .

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.