ಶಿವಮೊಗ್ಗ ಜಿಲ್ಲಾ ಜೆಡಿಎಸ್ ರಾಯಭಾರ ಮತ್ತೆ ಎಂ.ಶ್ರೀಕಾಂತ್ ಹೆಗಲಿಗೆ, ಜಿಲ್ಲಾಧ್ಯಕ್ಷರು ಜೆಡಿಎಸ್ ಗೆಲುವಿಗೆ ರೂಪಿಸಿರುವ ಕಾರ್ಯತಂತ್ರಗಳೇನು!!! ಕಾರ್ಯಕರ್ತರು ಇದರ ಬಗ್ಗೆ ಏನನ್ನುತ್ತಾರೆ.?
ಶಿವಮೊಗ್ಗ: ಜಿಲ್ಲೆಯಲ್ಲಿ ಜೆಡಿಎಸ್ ಮತ್ತೆ ಪುನಶ್ಚೇತನಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಈ ಹಿಂದೆ ಜಿಲ್ಲಾಧ್ಯಕ್ಷರಾಗಿ ಜೆಡಿಎಸ್ ನಲ್ಲಿ ಸಂಚಲನ ಮೂಡಿಸಿದ್ದ ಎಂ. ಶ್ರೀಕಾಂತ್ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಿಂದ ಸ್ವಲ್ಪ ದೂರವೇ ಉಳಿಸಿದ್ದರು. ಆದರೆ, ಮೊನ್ನೆ ನಡೆದ ಜೆಡಿಎಸ್ ವಿಷನ್-2021ರ ಸಮಾವೇಶದಲ್ಲಿ ಪಕ್ಷದ ವರಿಷ್ಟರು ಜಿಲ್ಲಾ ಜೆಡಿಎಸ್ ನ ನಾಯಕತ್ವವನ್ನು ಮತ್ತೆ ಶ್ರೀಕಾಂತ್ ಹೆಗಲಿಗೆ ಹೊರಿಸಿದ್ದಾರೆ. ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಂ. ಶ್ರೀಕಾಂತ್ 20 ಸಾವಿರಕ್ಕೂ ಹೆಚ್ಚು ಮತಗಳಿಸುವ…