w
Headlines
Home » ಮದ್ಯಪಾನ ಮಾಡಬೇಡಿ ಎಂಬ ಪತ್ನಿಯ ಬುದ್ಧಿಮಾತಿಗೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ

ಮದ್ಯಪಾನ ಮಾಡಬೇಡಿ ಎಂಬ ಪತ್ನಿಯ ಬುದ್ಧಿಮಾತಿಗೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ

ವಿಪರೀತ ಕುಡಿತದ ದಾಸನಾಗಿದ್ದ ಪತಿಗೆ ಪತ್ನಿ ಬುದ್ದಿ ಮಾತು ಹೇಳಿದ್ದಾಳೆ.
ಇದನ್ನೆ ಮನಸ್ಸಿಗೆ ಹಚ್ಚಿಕೊಂಡ ಪತಿರಾಯ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸಾಗರ ತಾಲೂಕಿನ ಅಡೂರು ಗ್ರಾಮದ 40 ವರ್ಷದ ಸುಬ್ರಹ್ಮಣ್ಯನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು,ಈ ಸಂಬಂಧ ಮೃತನ ಪತ್ನಿ ಯಶೋಧ ಸಾಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

 ಯಶೋಧ ತನ್ನ ಗಂಡ ಸುಬ್ರಹ್ಮಣ್ಯನಿಗೆ ಕುಡಿಯೋದನ್ನು ಬಿಟ್ಟು ಬಿಡು ಎಂದು ಬುದ್ದಿ ಮಾತು ಹೇಳಿದ್ದಾಳೆ.ಪತ್ನಿ ಬುದ್ದಿ ಮಾತಿಗೆ ಮನನೊಂದ ಸುಬ್ರಹ್ಮಣ್ಯ, ಮನೆಯಲ್ಲಿ ಯಾರು ಇಲ್ಲದ ಸಂಧರ್ಭದಲ್ಲಿ ಕಳೆನಾಶಕ ಸೇವಿಸಿದ್ದಾನೆ.

ತಕ್ಷಣ ಆತನನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕರೆದುಕೊಂಡು ಬಂದಿದ್ದಾರೆ.ಹೆಚ್ಚಿನ ಚಿಕಿತ್ಸೆಗಾಗಿ  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು.ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಸುಬ್ರಹ್ಮಣ್ಯ ಮೃತ ಪಟ್ಟಿದ್ದಾನೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.