ಶ್ರಮ ಸಂಸ್ಕೃತಿಯ ಪ್ರತೀಕ ವಿಶ್ವಕರ್ಮರು : ಡಾ.ಕೆ.ಶ್ರೀಪತಿ ಹಳಗುಂದ
ರಿಪ್ಪನ್ ಪೇಟೆ; ವಿಶ್ವಕರ್ಮ ಜನಾಂಗವು ಸೃಷ್ಟಿಯ ಪ್ರತಿನಿಧಿಯಾಗಿ ದೇವಶಿಲ್ಪಿ ಎಂದು ಕರೆಸಿ ಕೊಳ್ಳುವ ಮೂಲಕ ಶ್ರಮ ಸಂಸ್ಕೃತಿಯ ಪ್ರತೀಕವಾಗಿ ತಮ್ಮದೇ ಆದ ವೃತ್ತಿಯನ್ನು ಅವಲಂಬಿಸಿ ರುವುದು ಶ್ಲಾಘನೀಯ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕನ್ನಡ ಉಪನ್ಯಾಸಕ ಶ್ರೀಪತಿ ಹಳಗುಂದ ಅಭಿಪ್ರಾಯಪಟ್ಟರು . ಕೆರೆಹಳ್ಳಿ ಹೋಬಳಿಯ ವಿಶ್ವಕರ್ಮ ಸಮಾಜದ ವತಿಯಿಂದ ಶನಿವಾರ ರಾಮಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಮ್ಮಾರ. ಅಕ್ಕಸಾಲಿಗ, ಬಡಿಗ, ಎರಕ ಸೇರಿದಂತೆ ಪಂಚಲೋಹಗಳ ಮೂಲಕವೇ ಬಗೆ ಬಗೆಯ ವಸ್ತುಗಳನ್ನು ತಯಾರಿಸಿ…