ಸಮುದಾಯ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ರಿಪ್ಪನ್ ಪೇಟೆಯಲ್ಲಿ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಪಾದಯಾತ್ರೆ ಮತ್ತು ಬೃಹತ್ ಪ್ರತಿಭಟನೆ:

ರಿಪ್ಪನ್ ಪೇಟೆ :  ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಇಂದು ಪಾದಯಾತ್ರೆ ಮತ್ತು ಬೃಹತ್ ಪ್ರತಿಭಟನೆ ನಡೆಸಲಾಯಿತು.


ಗವಟೂರು ಗ್ರಾಮದಲ್ಲಿ ಸಮುದಾಯ ಆಸ್ಪತ್ರೆಗೆ ಕಾಯ್ದಿರಿಸಿರುವ ಸ್ಥಳದಿಂದ ರಿಪ್ಪನ್ ಪೇಟೆ ವಿನಾಯಕ ವೃತ್ತದವರೆಗೂ ಭಾರಿ ಮಳೆಯ ನಡುವೆ ಪಾದಯಾತ್ರೆ ನಡೆಸಿ ನಂತರ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು.

ನಂತರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವಂತೆ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪರವರ ಅವಧಿಯಲ್ಲಿ ಸಮುದಾಯ ಆಸ್ಪತ್ರೆಗೆ 5 ಎಕರೆ ಜಾಗ ಕಾಯ್ದಿರಿಸಲಾಗಿತ್ತು.ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 10 ಗ್ರಾಪಂ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು ಸಮುದಾಯ ಆಸ್ಪತ್ರೆಯು ಅತ್ಯವಶ್ಯಕವಾಗಿದೆ.ಆದರೆ ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಶಾಸಕರು ಆಸ್ಪತ್ರೆಯ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಪ್ರಕ್ರೀಯೆ ನಡೆಸದೇ ಜಾಣಕುರುಡರಾಗಿದ್ದು ಸಭೆ ಸಮಾರಂಭಗಳ ವೇದಿಕೆಯಲ್ಲಿ ಅಭಿವೃದ್ಧಿ ವಿಚಾರಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುತ್ತಾರೆ ಎಂದು ಆರೋಪಿಸಿದರು.ಒಂದು ತಿಂಗಳೊಳಗಾಗಿ ಸಮುದಾಯ ಆಸ್ಪತ್ರೆಯ ನಿರ್ಮಾಣದ ಪ್ರಕ್ರಿಯೆ ಅನುಷ್ಠಾನಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಶಿಕ್ಷಣ ಸಚಿವ  ಕಿಮ್ಮನೆ ರತ್ನಾಕಾರ  ಮಾತನಾಡಿ ಆರೋಗ್ಯ. ಶಿಕ್ಷಣ  ಮತ್ತು ಯುವ ಸಮೂಹ ದ ಮೇಲೆ ಕಾಳಜಿ  ಇಲ್ಲದ  ಕೇಂದ್ರ ಹಾಗೂ ರಾಜ್ಯದ  ಬಿಜೆಪಿ ನೇತೃತ್ವದ  ಸರಕಾರ ಬರಿ ಸುಳ್ಳು ಭರವಸೆಗಳನ್ನು ನೀಡುತ್ತಾ ದೇಶದ ನಾಗರಿಕರನ್ನು  ಮತ್ತು ಯುವ ಸಮೂಹವನ್ನು ದಿಕ್ಕು ತಪ್ಪಿಸುತ್ತಿದೆ ಇಂತಹ ಸರಕಾರಕ್ಕೆ ದೇಶದ ಜನತೆ ತಕ್ಕಪಾಠವನ್ನು ಕಲಿಸ ಬೇಕು,ಜಿಲ್ಲೆಯಲ್ಲಿಯೇ ಅತಿದೊಡ್ಡ ಗ್ರಾಪಂ ರಿಪ್ಪನ್‌ಪೇಟೆಗೆ ಕೂಡಲೇ ಸಮುದಾಯ ಆಸ್ಪತ್ರೆ ಮಂಜೂರು ಮಾಡಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕರಾದ ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ತನ್ನ ಅಸ್ತಿತ್ವಕ್ಕೆ ಆಪರೇಷನ್ ಮಾಡುತ್ತಿದೆ ಈ ಸರ್ಕಾರಗಳಿಗೆ ದೇಶದ ಅಭಿವೃದ್ಧಿ, ಜನಸಾಮಾನ್ಯರ ಆರೋಗ್ಯದ ಕಿಂಚಿತ್ತು ಕಾಳಜಿ‌ ಇಲ್ಲ,ಜಾತಿ ಧರ್ಮ ಮತ್ತು ರೈತರ ಮೇಲೆ ಸವಾರಿ ಮಾಡಿ ಎಲ್ಲಾರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ.ರಿಪ್ಪನ್‌ಪೇಟೆಯಂತಹ ಪಟ್ಟಣಕ್ಕೆ ಸಮುದಾಯ ಆಸ್ಪತ್ರೆ ಅನಿವಾರ್ಯವಾಗಿದ್ದು ಕೂಡಲೇ ಮಂಜೂರು ಮಾಡುವಂತೆ ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೀರ್  ಹಂಜಾ ಮಾತನಾಡಿ ಪ್ರತಿಯೊಬ್ಬರಿಗೂ ಆರೋಗ್ಯ ಅತ್ಯವಶ್ಯಕವಾಗಿದ್ದು ಗ್ರಾಮೀಣ ಪ್ರದೇಶದಲ್ಲಿನ ಬಡ ಜನರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸಿದರೆ ಮಾತ್ರ ಉತ್ತಮ ಆರೋಗ್ಯವನ್ನು ಪಡೆಯಬಹುದು.ಸರ್ಕಾರಗಳು ಜಾತಿ ಧರ್ಮಕ್ಕೆ ಹೆಚ್ಚಿನ ಆಸಕ್ತಿ ನೀಡದೇ ಆರೋಗ್ಯದ ಕಡೆ ಗಮನಿಸಬೇಕು.
ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆಯನ್ನು ರಾಷ್ಟ್ರದ ಇಡೀ ಮುಸ್ಲಿಂ ಸಮುದಾಯ ಖಂಡಿಸುತ್ತದೆ ಹಾಗೆಯೇ ಕಾನೂನಿನ ಅಡಿಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಹೇಳಿದರು.

ಪ್ರತಿಭಟನಾ ಸಭೆಯ ನಂತರ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಪ್ರತಿಭಟನಾ ಸಭೆಯಲ್ಲಿ ,ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ರಾಜನಂದಿನಿ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್,ಜಿಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ ಹಾಗೂ ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್, ಅರಸಾಳು ಗ್ರಾಪಂ ಅಧ್ಯಕ್ಷರಾದ ಉಮಾಕರ್,ಕೆಂಚನಾಲ ಗ್ರಾಪಂ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್ ,ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಎಂ ಪರಮೇಶ್ ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು ಸೂಡೂರು ,ಎಪಿಎಂಸಿ ಮಾಜಿ ಅಧ್ಯಕ್ಷರಾದ ಈಶ್ವರಪ್ಪ ಗೌಡ ,ಶ್ವೇತಾ ಆರ್ ಬಂಡಿ,
ಗ್ರಾಪಂ ಸದಸ್ಯರಾದ ಮಧುಸೂಧನ್ ,ಗಣಪತಿ ,ಧನಲಕ್ಷ್ಮಿ,ವೇದಾವತಿ ಪರಮೇಶ್,ಸಾರಾಬಿ ,ಶ್ರೀಮಂತ್, ಮತ್ತು ಮುಖಂಡರಾದ ಅಶೋಕ್ ಬೇಳೂರು, ಉಲ್ಲಾಸ್ ,ನಾಗೇಂದ್ರ,ಫ್ಯಾನ್ಸಿ ರಮೇಶ್,ಚಿನ್ಮಯ್, ಚಿಗುರು ಶ್ರೀಧರ್ ಹಾಗೂ ಇನ್ನಿತರರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *