ರಿಪ್ಪನ್ ಪೇಟೆಯ ಯುವಕ ಚನ್ನಪಟ್ಟಣದಲ್ಲಿ ರೈಲಿಗೆ ತಲೆ ಕೊಟ್ಟು ಸಾವು

ರಿಪ್ಪನ್ ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ನಿವಾಸಿ ಬೆಂಗಳೂರಿನಲ್ಲಿ ಚಲಿಸುತಿದ್ದ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ರಸ್ತೆಯ ನಿವಾಸಿ ರಾಮನಾಥ್ (28) ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಶಬರೀಶ ನಗರದ ಸಾಯಿನಾಥ್ ಭಂಡಾರಿಯವರ ಪುತ್ರನಾದ ರಾಮನಾಥ್ ಬೆಂಗಳೂರಿನಲ್ಲಿ ಕಳೆದ ಐದಾರು ವರ್ಷಗಳಿಂದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡಿಕೊಂಡಿದ್ದನು. ಚನ್ನಪಟ್ಟಣದಿಂದ ಮದ್ದೂರಿಗೆ ತೆರಳುವ ಮಾರ್ಗದ ನಿಡಗುಂಟೆ ರೈಲ್ವೆ ನಿಲ್ದಾಣದ ಗೇಟ್ ಬಳಿ ದ್ವಿಚಕ್ರ ವಾಹನವನ್ನು(KA 15 ED 9437) ನಿಲ್ಲಿಸಿ ಮೊಬೈಲ್ ನ್ನು ಸ್ವಿಚ್ ಆಫ಼್ ಮಾಡಿ…

Read More

ರಿಪ್ಪನ್‌ಪೇಟೆಯಲ್ಲಿ ಕಾನೂನು ಬಾಹಿರ ಟ್ಯಾಕ್ಸಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹ :

ರಿಪ್ಪನ್‌ಪೇಟೆ : ಸರ್ಕಾರಕ್ಕೆ ತೆರಿಗೆಯನ್ನು ವಂಚಿಸುತ್ತಿರುವ ಪಟ್ಟಣದ ವೈಟ್ ಬೋರ್ಡ್ ಕಾನೂನು ಬಾಹಿರ ಟ್ಯಾಕ್ಸಿಗಳು ಪ್ರವಾಸಿ ಸ್ಥಳಗಳಿಗೆ ಬಾಡಿಗೆ ಹೋಗುವುದರ ಬಗ್ಗೆ ಕಾನೂನು ರೀತಿಯ ಕ್ರಮಗಳನ್ನು ಕೈಗೊಂಡು ಅವುಗಳನ್ನು ನಿಷೇಧಿಸಬೇಕೆಂದು ಕರ್ನಾಟಕ ಪ್ರವಾಸಿ ವಾಹನ ಚಾಲಕರ ಸಂಘದ ವತಿಯಿಂದ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಪಿಎಸ್ ಐ ಶಿವಾನಂದ್ ಕೋಳಿ ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಪ್ರವಾಸಿ ವಾಹನಗಳ ಸಂಘದ ಜಿಲ್ಲಾಧ್ಯಕ್ಷರಾದ ಕಾರ್ತಿಕ್ ಶೆಟ್ಟಿ ಪ್ರವಾಸಿ ವಾಹನಗಳ ನಿಲ್ದಾಣಗಳಲ್ಲಿ ವೈಟ್‌ಬೋರ್ಡ್ ಖಾಸಗಿ ಲಘು ವಾಹನಗಳನ್ನು ತಂದು…

Read More

ರಿಪ್ಪನ್‌ಪೇಟೆ : ಒಂಟಿ ಸಲಗನ ದಾಳಿಗೆ ಕಂಗಾಲಾದ ರೈತರು|Wild

ರಿಪ್ಪನ್‌ಪೇಟೆ : ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬೆಳ್ಳೂರು ಗ್ರಾಮ ಪಂಚಾಯ್ತಿಯ ಹಲವು ಗ್ರಾಮಗಳಲ್ಲಿ ಒಂಟಿ ಸಲಗನ ದಾಳಿಯಿಂದಾಗಿ ಭತ್ತ ಅಡಿಕೆ ತೋಟ ದ್ವಂಸಗೊಂಡಿದ್ದು ರೈತರನ್ನು ಕಂಗಾಲಾಗಿಸಿದೆ.   ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಬ್ಬಿಗಾ ಗುಳಿಗುಳಿಶಂಕರದ ಅವಡೆ ಶಿವಪ್ಪ ಎಂಬುವರ ಭತ್ತದ ಗದ್ದೆ ಹಾಗೂ ಕಳಸೆ ಗಂಗಾಧರಗೌಡ ದೇವೇಂದ್ರಪ್ಪಗೌಡರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಮರಗಳನ್ನು ದ್ವಂಸಗೊಳಿಸಿದ್ದು ರೈತರಲ್ಲಿ ಭಯ ಬೀತರನ್ನಾಗಿದೆ.  ಸಿರಿಗೆರೆ ಮತ್ತು ಮೂಗುಡ್ತಿ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಗೆ ಬರುವ ಕಳಸೆ ನರ‍್ಲಿಗೆ ಬೆಳ್ಳೊರು ಗುಬ್ಬಿಗಾ,ಗುಳುಗುಳಿ…

Read More

PU RESULTS | ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿಯ ದೀಕ್ಷಾ ಆರ್ ರಾಜ್ಯಕ್ಕೆ ಪ್ರಥಮ

PU RESULTS | ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿಯ ದೀಕ್ಷಾ ರಾಜ್ಯಕ್ಕೆ ಪ್ರಥಮ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣಾ ಸಂಸ್ಥೆಯ  ವಿದ್ಯಾರ್ಥಿನಿ ದೀಕ್ಷಾ ಆರ್​ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ  ಪ್ರಥಮ ಸ್ಥಾನ ಪಡೆದಿದ್ದಾರೆ. ದೀಕ್ಷಾ ತೀರ್ಥಹಳ್ಳಿಯ ಬೆಟ್ಟಮಕ್ಕಿಯ ನಿವಾಸಿ ರಾಘವೇಂದ್ರ ಕಲ್ಕೂರ್​ ಹಾಗೂ ಉಷಾ ದಂಪತಿಯ ಪುತ್ರಿಯಾಗಿದ್ದಾರೆ. ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಬಾಗದಲ್ಲಿ 600 ಕ್ಕೆ 599 ಅಂಕ ಗಳಿಸಿ ತೀರ್ಥಹಳ್ಳಿ ತಾಲೂಕಿಗೆ ಪ್ರಥಮ ಹೆಮ್ಮೆಯನ್ನು ತಂದಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿ…

Read More

ಬಟ್ಟೆಮಲ್ಲಪ ಕರವೇ ವತಿಯಿಂದ ರಿಪ್ಪನ್ ಪೇಟೆಯಲ್ಲಿ ಪುನೀತ್ ರಾಜ್‍ಕುಮಾರ್ ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ :

  ಕರ್ನಾಟಕ ರಕ್ಷಣಾ ವೇದಿಕೆ ಬಟ್ಟೆಮಲ್ಲಪ್ಪ ಘಟಕದಿಂದ ರಿಪ್ಪನ್ ಪೇಟೆ ಕುಕ್ಕಳಲೆ ಸಂಪರ್ಕ ರಸ್ತೆಗೆ ಅಳವಡಿಸಿದ್ದ ಕನ್ನಡದ ಮೇರು ನಟ ಪುನೀತ್ ರಾಜಕುಮಾರ ನಾಮಫಲಕಕ್ಕೆ ಮಸಿ ಬಳಿದಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಶಾಂತಿಯುತ ಹೋರಾಟವನ್ನು ನಡೆಸಲಾಯಿತು. ಪುನೀತ್ ನಾಮಫ಼ಲಕಕ್ಕೆ  ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಈ ಸಂಧರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಹೆಚ್ ಆರ್ ರಾಘವೇಂದ್ರ. ಘಟಕದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ನಾಗರಾಜ್…

Read More

KSRTC ಬಸ್ ಹಾಗೂ ಓಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ – ಮೂವರು ಸಾವು ,ಹಲವರು ಗಂಭೀರ

KSRTC ಬಸ್ ಹಾಗೂ ಓಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ – ಮೂವರು ಸಾವು ,ಹಲವರು ಗಂಭೀರ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಒಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ – ಶಿಕಾರಿಪುರ ಮಾರ್ಗದಲ್ಲಿ ನಡೆದಿದೆ. ಶಿವಮೊಗ್ಗ-ಶಿಕಾರಿಪುರ ಮಾರ್ಗದ ಚಿನ್ನಿಕಟ್ಟೆ ಬಿದರಳ್ಳಿ ಗ್ರಾಮದ ಬಳಿ KSRTC ಬಸ್ ಒಮಿನಿ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಓಮಿನಿ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದು ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ. ಒಮಿನಿ ಕಾರಿನಲ್ಲಿ ಸೂರಗೊಂಡನಕೊಪ್ಪದಿಂದ ನಾಲ್ವರು…

Read More

ಶಿವಮೊಗ್ಗದ ಮೊದಲ ಎಫ್.ಎಂ ರೇಡಿಯೋ ಆರಂಭ; ಉತ್ತಮ ಸ್ಪಂದನೆ

ದಶಕದಿಂದ ಮಲೆನಾಡಿಗೊಂದು ಎಫ್.ಎಂ. ರೇಡಿಯೋ ಬೇಕು ಎಂಬ ಬೇಡಿಕೆ ಇತ್ತು. ಜನರ ಬೇಡಿಕೆ ತಣಿಸುವ ಸಲುವಾಗಿ ಶಿವಮೊಗ್ಗ ರೇಡಿಯೋ ಎಫ್.ಎಂ. 90.8 ಕೊಡುಗೆಯಾಗಿ ಸಿಕ್ಕಿದೆ. ಸದ್ಯ ಎಫ್.ಎಂ. ರೇಡಿಯೋ ಟೆಸ್ಟಿಂಗ್ ಹಂತದಲ್ಲಿದ್ದು, ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ. ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆ ಶಿವಮೊಗ್ಗ ರೇಡಿಯೋ ಎಫ್.ಎಂ. 90.8 ಆರಂಭಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಈ ರೇಡಿಯೋಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗ ಬೆಳಗ್ಗೆ 9…

Read More

ಮಿನಿ ಒಲಿಂಪಿಕ್ ಕಬ್ಬಡಿ ತಂಡಕ್ಕೆ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆ | mini Olympics

ಮಿನಿ ಒಲಿಂಪಿಕ್ ಕಬ್ಬಡಿ ತಂಡಕ್ಕೆ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆ | mini Olympics ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯದ ಮೂರನೇ ಒಲಿಂಪಿಕ್ ನ ಕಬ್ಬಡಿ ತಂಡಕ್ಕೆ ಪಟ್ಟಣದ ರಾಮಕೃಷ್ಣ ವಿದ್ಯಾಲಯದ ಐವರು ವಿದ್ಯಾರ್ಥಿಗಳು ಹಾಗೂ ಆನಂದಪುರ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯ ಓರ್ವ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 17/07/2024 ರಂದು ನಡೆದ ರಾಜ್ಯ ಒಲಿಂಪಿಕ್ಸ್ ಚಾಂಪಿಯನ್ ಶಿಪ್ ಗೆ ತಂಡಗಳ ಅಯ್ಕೆ ಪ್ರಕ್ರಿಯೆಯಲ್ಲಿ ಕಬ್ಬಡಿ ತಂಡಕ್ಕೆ ಪಟ್ಟಣದ ರಾಮಕೃಷ್ಣ ವಿದ್ಯಾಲಯದ ಐವರು ವಿದ್ಯಾರ್ಥಿಗಳು ಹಾಗೂ…

Read More

Ripponpete | ಅರ್ಧಕ್ಕೆ ನಿಂತ ರಸ್ತೆ ಅಗಲೀಕರಣ ಕಾಮಗಾರಿ – ನಾಗರೀಕರಿಗೆ ಕಿರಿಕಿರಿ | ಖಾಸಗಿ ವ್ಯಕ್ತಿಯ ಪ್ರಭಾವಕ್ಕೆ ಶರಣಾಯಿತಾ ಗ್ರಾಮಾಡಳಿತ..!!??

ಆರ್ಧಕ್ಕೆ ನಿಂತ ರಸ್ತೆ ಅಗಲೀಕರಣ ಕಾಮಗಾರಿ ನಾಗರೀಕರಿಗೆ ಕಿರಿಕಿರಿ ರಿಪ್ಪನ್‌ಪೇಟೆ;-ಸಾಗರ-ತೀರ್ಥಹಳ್ಳಿ ಮಾರ್ಗದ ತಲಾ ಒಂದು ಕಿ.ಮೀ. ರಸ್ತೆ ಆಗಲೀಕರಣ ಕಾಮಗಾರಿ ಅರಂಭವಾಗಿ ವರ್ಷಗಳಾಗುತ್ತಾ ಬಂದರೂ ಕೂಡಾ ಕಾಮಗಾರಿ ಆರ್ಧಕ್ಕೆ ನಿಂತು ಸಾರ್ವಜನಿಕರಿಗೆ ಕಿರಿಕಿರಿಯಂತಾಗಿದೆ. ಕಳೆದ 2022 ನವಂಬರ್ ಡಿಸಂಬರ್ ತಿಂಗಳಲ್ಲಿ ರಸ್ತೆ ಸಾಗರ ಎಪಿಎಂಸಿ ಯಾರ್ಡ್ ಬಳಿಯಿಂದ ಸುಮಾರು 1 ಕಿ.ಮೀ. ದೂರದ ರಸ್ತೆ ಆಗಲೀಕರಣ ಮತ್ತು ಬಾಕ್ಸ್ ಚರಂಡಿ ವಿದ್ಯುತ್ತ ಕಂಬ ಸ್ಥಳಾಂತರ ಹೀಗೆ ಆಭಿವೃದ್ದಿ ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷಗಳಾಗುತ್ತಾ ಬಂದರೂ ಕಾಮಗಾರಿ ಆರ್ಧಂಬರ್ಧವಾಗಿಯೇ…

Read More

ಮಧ್ಯ ರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದ ಕಾರು|fire

ತೀರ್ಥಹಳ್ಳಿಯ ತಲ್ಲೂರಂಗಡಿ ಬಳಿ ಹೊತ್ತಿ ಉರಿದ ಕಾರು ತೀರ್ಥಹಳ್ಳಿ : ಕಾರೊಂದು ನೋಡ ನೋಡುತ್ತಿದ್ದಂತೆ ಸಂಪೂರ್ಣ ಹೊತ್ತಿ ಉರಿದಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ತಲ್ಲೂರಂಗಡಿ ಸಮೀಪ ನೆಡೆದಿದೆ. ಕಾರಿನ ಇಂಜಿನ್ ಅತಿಯಾಗಿ ಬಿಸಿಯಾಗಿದ್ದ ಕಾರಣ ಬೆಂಕಿ ಹತ್ತಿಕೊಂಡಿರಬಹುದು ಎನ್ನಲಾಗಿದೆ. ಆದರೆ ಬೆಂಕಿ ಸಂಪೂರ್ಣ ಕಾರನ್ನು ಹೊತ್ತಿಕೊಂಡು  ಉರಿದಿದ್ದು ತೀರ್ಥಹಳ್ಳಿ – ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮದ್ಯೆ  ಈ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು ಈ ಅವಘಡದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ಎಲ್ಲಿಯದ್ದು ಎಂಬ ಮಾಹಿತಿ…

Read More