PU RESULTS | ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿಯ ದೀಕ್ಷಾ ರಾಜ್ಯಕ್ಕೆ ಪ್ರಥಮ

ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣಾ ಸಂಸ್ಥೆಯ ವಿದ್ಯಾರ್ಥಿನಿ ದೀಕ್ಷಾ ಆರ್ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ದೀಕ್ಷಾ ತೀರ್ಥಹಳ್ಳಿಯ ಬೆಟ್ಟಮಕ್ಕಿಯ ನಿವಾಸಿ ರಾಘವೇಂದ್ರ ಕಲ್ಕೂರ್ ಹಾಗೂ ಉಷಾ ದಂಪತಿಯ ಪುತ್ರಿಯಾಗಿದ್ದಾರೆ. ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಬಾಗದಲ್ಲಿ 600 ಕ್ಕೆ 599 ಅಂಕ ಗಳಿಸಿ ತೀರ್ಥಹಳ್ಳಿ ತಾಲೂಕಿಗೆ ಪ್ರಥಮ ಹೆಮ್ಮೆಯನ್ನು ತಂದಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿ ಶಿವಮೊಗ್ಗ ಜಿಲ್ಲೆ ಶೇಕಡಾ 77.91 ಫಲಿತಾಂಶದ ಮೂಲಕ ರಾಜ್ಯಕ್ಕೆ 7 ನೇ ಸ್ಥಾನ ಪಡೆದುಕೊಂಡಿದೆ.

