January 11, 2026

ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಾಖವಳ್ಳಿ ಶಾಲೆಯ ಮುಖ್ಯ ಶಿಕ್ಷಕ ಹರೀಶ್

ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಾಖವಳ್ಳಿ ಶಾಲೆಯ ಮುಖ್ಯ ಶಿಕ್ಷಕ ಹರೀಶ್

ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಖವಳ್ಳಿ ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠ ಶಾಲೆ ಮುಖ್ಯ ಶಿಕ್ಷಕ ಹರೀಶ್ ಪಿ. ರವರಿಗೆ 2024-2025ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಹೊಸನಗರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ದಿನದಂದು ಪ್ರದಾನ ಮಾಡಲಾಯಿತು.

2007ರ ಫೆಬ್ರವರಿ 2 ರಂದು ಹೊಸನಗರ ತಾಲ್ಲೂಕಿನ ಸ.ಕಿ.ಪ್ರಾ ಶಾಲೆ ಬಾಳೆಕೊಪ್ಪದಲ್ಲಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದ ಇವರು 2016ರ ಸೆ.12 ರಿಂದ 2022ರ ಡಿ.14ರ ವರೆಗೆ ಮುಗುಡ್ತಿ ಕ್ಲಸ್ಟರ್ ನ ಕ್ರಿಯಾಶೀಲಾ ಸಿ.ಆರ್.ಪಿಯಾಗಿ ಕರ್ತವ್ಯ ನಿರ್ವಹಿಸಿ ನಂತರ 2022ರ ಡಿ.15 ರಂದು ಹೊಸನಗರ ತಾಲ್ಲೂಕಿನ ಸ.ಕಿ.ಪ್ರಾ. ಶಾಲೆ ಶಾಖವಳ್ಳಿಗೆ ವರ್ಗಾವಣೆಗೊಂಡು ಮುಖ್ಯ ಶಿಕ್ಷಕರಾಗಿ ಜವಾಬ್ದಾರಿ ವಹಿಸಿಕೊಂಡು ಎಸ್.ಡಿ.ಎಂ.ಸಿ. ಜೊತೆಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ ‘ನಮ್ಮ ಶಾಲೆ ನಮ್ಮ ಕೊಡುಗೆ’ ಎನ್ನುವ ಅಭಿಯಾನದಡಿ ಒಂದು ಸಮಿತಿ ರಚನೆ ಮಾಡಿ ಸಮುದಾಯದ ಸಹಾಭಾಗಿತ್ವದೊಂದಿಗೆ ದಾಖಲಾತಿ ಹೆಚ್ಚಳ, ಶೈಕ್ಷಣಿಕ ಗುಣಮಟ್ಟ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮಾಡುವಲ್ಲಿ ಗಣನೀಯ ಪಾತ್ರವನ್ನು ನಿರ್ವಹಿಸಿ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ನೆಚ್ಚಿನ ಶಿಕ್ಷಕರಾಗಿದ್ದಾರೆ.

ಪ್ರಶಸ್ತಿ ಶಿಫಾರಸ್ಸು ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಆಯ್ಕೆ ಮಂಡಳಿಯ ಪದಾಧಿಕಾರಿಗಳಿಗೆ ಮತ್ತು ಕಾರ್ಯಕ್ರಮದ ಆಯೋಜಕರಿಗೆ, ನಮ್ಮ ಶಾಲೆ ನಮ್ಮ ಕೊಡುಗೆ ಸಮಿತಿ, ಹಳೆಯ ವಿದ್ಯಾರ್ಥಿ ವೃಂದಕ್ಕೆ ಎಸ್.ಡಿ.ಎಂ.ಸಿ ಮತ್ತು ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

About The Author

Leave a Reply

Your email address will not be published. Required fields are marked *