“ನಾಗೇಂದ್ರಸ್ವಾಮಿಯ ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಜಗದ್ಗುರು ಶಂಕರಾಚಾರ್ಯರ ಜಯಂತಿ ಮಹೋತ್ಸವ ಸಂಪನ್ನ’’
ರಿಪ್ಪನ್‌ಪೇಟೆ;-ಸಮೀಪದ ಇತಿಹಾಸ ಪ್ರಸಿದ್ದ ಶ್ರೀನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಿ ನಾಗೇಂದ್ರ ಸ್ವಾಮಿಯ ಹನ್ನೆರಡನೇ ವರ್ಷದ ಪ್ರತಿಷ್ಟಾವಧಂತಿ ಉತ್ಸವ ಮತ್ತು ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತೋತ್ಸವ ಕಾರ್ಯಕ್ರಮವು ಶ್ರದ್ದಾಭಕ್ತಿಯಿಂದ ಜರುಗಿತು.
ನಾಗೇಂದ್ರಸ್ವಾಮಿಯ ಸನ್ನಿಧಿಯಲ್ಲಿ ದೇವತಾ ಪ್ರಾಥನೆ ಪೂಜೆ, ದೇವನಾಂದಿ,ಪ್ರಧಾನ ಸಂಕಲ್ಪ,ಮಹಾಗಣಪತಿ ಹವನ, ಸಪರಿವಾರ ಗಣಗಳಿಗೆ ಮೂಲಮಂತ್ರ ಹವನ ಹಾಗೂ ಪ್ರಾಯಶ್ಚಿತ್ತ ಹವನಗಳು ಶ್ರೀಸ್ವಾಮಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ,ಸಂಜೆ ಪ್ರಾಸಾದ ಶುದ್ಧಿ,ವಾಸ್ತು ,ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಗುರುವಂದನೆ ಗಣಪತಿ ಪೂಜಾ ನಾಗ ಮೂಲಮಂತ್ರ ಹವನ,ಸರ್ವ ಸೂಕ್ತ ಹವನ,ಕಲಾತತ್ವ ಹವನ,ಮಹಾಪೂರ್ಣಾಹುತಿ,ಬ್ರಹ್ಮ ಕಳಶಾಭಿಷೇಕ ಮಹಾಪೂಜೆ ವಿಪ್ರಾಋಆಧನೆ ಮಹಾಮಂತ್ರಾಕ್ಷತೆ ಮಹಾಮಂಗಳಾರತಿ ಶ್ರೀ ಸ್ವಾಮಿಯ ಮಹಾಅನ್ನ ಪ್ರಸಾದ ಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಸತೀಶ ಗೇರುಗಲ್ಲು,ಹೆಚ್.ಎಂ.ವರ್ತೇಶ್,ಇನ್ನಿತರ ಧರ್ಮದರ್ಶಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.