ಮೂಲೆಗದ್ದೆ ಶ್ರೀಗಳ ಅಶೀರ್ವಾದ ಪಡೆದ ಪಕ್ಷೇತ್ರರ ಅಭ್ಯರ್ಥಿ ಶಿವಕುಮಾರ್ ವಿ.ಪಾಟೀಲ್
ರಿಪ್ಪನ್‌ಪೇಟೆ;- ಮೇ 10 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಸಾಗರ-ಹೊಸನಗರ ಕ್ಷೇತ್ರದ ಪಕ್ಷೇತರ ಆಭ್ಯ್ಯರ್ಥಿ ಶಿವಕುಮಾರ್ ವಿ.ಪಾಟೀಲ್ ಇಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀಗಳನ್ನು ಭೇಟಿ ಮಾಡಿ ಆಶಿರ್ವಾದ ಪಡೆದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಾಗರ ಹೊಸನಗರ ತಾಲ್ಲೂಕ್ ವ್ಯಾಪ್ತಿಯಲ್ಲಿ ವೀರಶೈವ ಲಿಂಗಾಯ್ತಿ ಮತದಾರರು ಹೆಚ್ಚು ಇದ್ದರೂ ಕೂಡಾ ಯಾವುದೇ ರಾಷ್ಟ್ರೀಯ ಪಕ್ಷದವರು ನಮ್ಮ ಜನಾಂಗವನ್ನು ಗುರುತಿಸದೇ ನಿರ್ಲಕ್ಷಿö್ಯಸುತ್ತಾ ಬಂದಿದ್ದು ಬರೀ ನಮ್ಮ ಜನಾಂಗವನ್ನು ನಾವು ಮತಹಾಕಲು ಮಾತ್ರ ಬಳಸಿಕೊಳ್ಳುತ್ತಾರೆ ಹೊರತು ನಂತರ ಐದು ವರ್ಷಕ್ಕೆ ನೆನಪಾಗುತ್ತದೆ ಲಿಂಗಾಯಿತರಾಗಿದ್ದೇವೆ ಆ ಕಾರಣ ನಮ್ಮ ಜನಾಂಗದವರು ಸಂಘಟಿತರಾಗಿ ಕ್ಷೇತ್ರದಲ್ಲಿ ನಮ್ಮ ಪ್ರಾಬಲ್ಯವನ್ನು ಗುರುತಿಸಿಕೊಳ್ಳುವಂತಾಗಲು ನಾನು ಈ ಭಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೇಗೆ ಇಳಿದಿದ್ದೇನೆಂದು ಹೇಳಿದರು.
ಅಲ್ಲದೇ ಸಾಗರ ಹೊಸನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ದೇಶಕ್ಕೆ ಬೆಳಕು ನೀಡುವ ಉದ್ದೇಶದಿಂದ ಮನೆ ಮಠಗಳನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳೇ ಹೆಚ್ಚಾಗಿರುವಾಗ ನಮ್ಮ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಎಲ್ಲಾ ರಾಷ್ಟ್ರೀಯ ಪಕ್ಷಗಳು ವಿಫಲಗೊಂಡಿವೆ ಎಂಬ ಕಾರಣ ನನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಾಕಷ್ಟು ವಿಚಾರಗಳನ್ನು ಇಟ್ಟುಕೊಂಡು ಮತದಾರರ ಮನೆ ಮನ ತಲುಪುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿ ಈ ಭಾರಿ ಪಕ್ಷೇತರ ಅಭ್ಯರ್ಥಿಗೆ ಹೆಚ್ಚು ಮತಹಾಕಿ ಬೆಂಬಲಿಸುವಂತೆ ಮನವಿ ಮಾಡಿದರು.
ಮಡೆನೂರು ಶರಾವತಿ ಚಕ್ರ ವರಾಹಿ ಹೀಗೆ ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದಾಗಿ ಡ್ಯಾಮ್ ನಿರ್ಮಿಸುವ ಉದ್ದೇಶದಿಂದಾಗಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಹಲವು ಕುಟುಂಬಗಳು ತಾಲ್ಲೂಕಿನ ಹಲವಡೆಯಲ್ಲಿ ವಾಸಿಸುತ್ತಿದ್ದರೂ ಕೂಡಾ ಕ್ಷೇತ್ರದ ಜನಪ್ರತಿನಿಧಿಗಳು ಅವರ ಸಮಸ್ಯಗಳನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.ಆದ್ದರಿಂದಾಗಿ ನಾನು ಕ್ಷೇತ್ರದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸನ ಸಭೆಯಲ್ಲಿ ಬೆಳಕು ಚಲ್ಲುವುದರೊಂದಿಗೆ ಶಾಶ್ವತ ಪರಿಹಾರ ಒದಗಿಸುವುದೇ ನನ್ನ ಮೊದಲ ಅಧ್ಯತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ವೀರೂಪಾಕ್ಷಪ್ಪ,ಸುಪ್ರೀತ್, ವಿವೇಕ್, ಹರ್ಷ, ಶ್ರೀಧರ, ಶ್ರೀಕಾಂತ, ಅರುಣ್‌ಕುಮಾರ,