ಟ್ರ್ಯಾಕ್ಟರ್ ಸರ್ವೀಸ್ ನಲ್ಲಿ ಲೋಪ – ರೈತರಿಂದ ಷೋ ರೂಂ ಗೆ ಮುತ್ತಿಗೆ | ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಲು ಮುಂದಾದ ರೈತ
ರಿಪ್ಪನ್‌ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ಜಾನ್ ಡೀರ್ ಟ್ರ್ಯಾಕ್ಟರ್ ಷೋ ರೂಂ ನಲ್ಲಿ ಸರ್ವಿಸ್ ನಲ್ಲಿ ಲೋಪವೆಸಗಿದ್ದು ಈ ಬಗ್ಗೆ ವಿಚಾರಿಸಿದರೆ ಷೋರೂಂ ಮಾಲೀಕ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿ ರೈತರು ಹಾಗೂ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಟ್ರ್ಯಾಕ್ಟರ್ ಚಾಲಕ ವಾಹನಕ್ಕೆ ಹಾಗೂ ತನ್ನ ಮೈ ಮೇಲೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕಾರಗಡಿ ಸಮೀಪದ ಮಂಡ್ರೊಳ್ಳಿಯ ಲಕ್ಷ್ಮಿನಾರಾಯಣ ಎಂಬ ರೈತರೊಬ್ಬರಿಗೆ ಸೇರಿದ ಟ್ರ್ಯಾಕ್ಟರ್ ಗೆ ಐದು ವರ್ಷ ಗ್ಯಾರಂಟಿ ಇದೆ ಎಂದು ಹೇಳಲಾಗಿದ್ದರೂ ಈಗ ಗ್ಯಾರಂಟಿಯಿರುವ ಬಿಡಿಬಾಗಕ್ಕೆ 40 ಸಾವಿರ ರೂ ಹಣ ಕೇಳುತಿದ್ದಾರೆ ಎಂದು ಆರೋಪಿಸಿ ಹಲವಾರು ರೈತರು ಹಾಗೂ ಕರ್ನಾಟಕ ಕಾರ್ಮಿಕ ಪರಿಷತ್ ವತಿಯಿಂದ ಷೋರೂಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.
ನಡೆದಿದ್ದೇನು..!!??
ಕಾರಗಡಿ ಸಮೀಪದ ಲಕ್ಷ್ಮಿನಾರಾಯಣ ಎಂಬುವವರು ಎರಡು ವರ್ಷಗಳ ಹಿಂದೆ ಲೋಕೆಶ್ವರ್ ರಾವ್ ಎಂಬುವವರ ಮಾಲೀಕತ್ವದ ಕಾಳೆ ಅಗ್ರಿಟೆಕ್ ನಲ್ಲಿ ಜಾನ್ ಡೀರ್ ಟ್ರ್ಯಾಕ್ಟರ ಖರೀದಿಸಿದ್ದು ಮಾರನೇ ದಿನವೇ ಮುಂಭಾಗದ ವೀಲ್ ಬಳಿ ಸಮಸ್ಯೆ ಎದುರಾಗಿತ್ತು ಕೂಡಲೇ ಮಾಲೀಕರಿಗೆ ತಿಳಿಸಿದ್ದರು ಏನೂ ಆಗುವುದಿಲ್ಲ ಓಡಿಸಿಕೊಂಡು ಇರಿ ಅದಕ್ಕೆ ಐದು ವರ್ಷ ವಾರಂಟಿ ಇದೆ ಏನಾದರೂ ಆದರೆ ನಮ್ಮ ಸಂಸ್ಥೆಯ ಜವಬ್ದಾರಿ ಎಂದು ಹೇಳಿ ಕಳುಹಿಸಿಕೊಟ್ಟಿದ್ದು ಅವತ್ತಿನಿಂದ ಪದೇ ಪದೇ ವಾಹನ ಕೈಕೊಡುತಿದ್ದು ಈಗ ವಾಹನ ಓಡಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾದ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆಯಲ್ಲಿರುವ ಕಾಳೆ ಅಗ್ರಿಟೆಕ್ ಷೋರೂಂ ಗೆ ಸರ್ವಿಸ್ ಗೆ ಬಿಡಲಾಗಿತ್ತು ಆದರೆ ಈಗ ಎಪ್ಪತ್ತು ಸಾವಿರ ಕಟ್ಟಬೇಕು ಇಲ್ಲದಿದ್ದಲಿ ಸರಿ ಮಾಡಲು ಆಗುವುದಿಲ್ಲ ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವು ಅದಕ್ಕೆ ಸ್ಪಂದಿಸದೇ ಇದ್ದ ಹಿನ್ನಲೆಯಲ್ಲಿ ಇಂದು ಪ್ರತಿಭಟನೆ ನಡೆಸಿದ್ದೆವೆ. ಇನ್ನೂ ರೈರತು ಸಬ್ಸಿಡಿ ಹಣದಲ್ಲಿ ಬದುಕುವವರು ನಾವು ದೇಶಕ್ಕೆ ಟ್ಯಾಕ್ಸ್ ಕಟ್ಟುವುದು ನೀವು ಮಜಾ ಮಾಡುವುದಾ ಸುಮ್ಮನೆ ಹಣ ಕಟ್ಟಿ ಎಂದು ರೈತರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರೆ ಎಂದು ಟ್ರ್ಯಾಕ್ಟರ್ ಚಾಲಕ ಸತೀಶ್ ತನ್ನ ನೋವನ್ನು ಮಾದ್ಯಮದೊಂದಿಗೆ ಹಂಚಿಕೊಂಡರು..
ಬೆಂಕಿ ಹಚ್ಚಿಕೊಳ್ಳಲು ಮುಂದಾದ ಟ್ರ್ಯಾಕ್ಟರ್ ಚಾಲಕ
ಇಂದು ಮದ್ಯಾಹ್ನದಿಂದ ಪಟ್ಟಣದ ಟ್ರ್ಯಾಕ್ಟರ್ ಷೋರೂಂ ಮುಂಭಾಗದಲ್ಲಿ ಕಾರ್ಮಿಕ ಪರಿಷತ್ ಹಾಗೂ ರೈತರು ಪ್ರತಿಭಟನೆ ನಡೆಸುತಿದ್ದರೂ ಯಾವುದಕ್ಕೂ ಕ್ಯಾರೆ ಎನ್ನದೇ ಸ್ಥಳಕ್ಕೆ ಬರಲು ಒಪ್ಪದ ಮಾಲೀಕನ ನಡೆಯನ್ನು ಖಂಡಿಸಿ ಟ್ರ್ಯಾಕ್ಟರ್ ಚಾಲಕ ಸತೀಶ್ ವಾಹನದಲ್ಲಿದ್ದ ಡಿಸೇಲ್ ನ್ನು ಟ್ರ್ಯಾಕ್ಟರ್ ಮೇಲೆ ಹಾಗೂ ತನ್ನ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ನಡೆಯಿತು ಈ ಸಂಧರ್ಭದಲ್ಲಿ ಸ್ಥಳದಲ್ಲಿದ್ದವರು ಆತನನ್ನು ತಡೆದು ಮುಂದಾಗುವ ಭಾರಿ ಆನಾಹುತ ತಪ್ಪಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪಿಎಸ್‌ಐ ಪ್ರವೀಣ್ ಎಸ್ ಪಿ
ರೈತರ ಪ್ರತಿಭಟನೆಯ ಕಾವು ಹೆಚ್ಚುತಿದ್ದಂತೆ ಸ್ಥಳಕ್ಕಾಗಮಿಸಿದ ಪಿಎಸ್‌ಐ ಪ್ರವೀಣ್ ಎಸ್ ಪಿ ಸ್ಥಳದಲ್ಲಿದ್ದ ಪ್ರತಿಭಟನಕಾರರ ಅಹವಾಲನ್ನು ಆಲಿಸಿ ಷೋರೂಂ ಮಾಲೀಕರನ್ನು ಠಾಣೆ ಕರೆಸಿ ಈ ಬಗ್ಗೆ ತನಿಖೆ ಕೈಗೊಂಡು ರೈತನಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನಕಾರರು ತಮ್ಮ ಧರಣಿ ಹಿಂಪಡೆದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಪದಾಧಿಕಾರಿಗಳಾದ ನಾಗೇಶ್ , ವೇದಾವತಿ , ಅನ್ನಪೂರ್ಣ , ಗೀತಾ ,ಸೀತಮ್ಮ , ರೈತರು ಹಾಗೂ ಸಾರ್ವಜನಿಕರು ಇದ್ದರು.