ಕಾಂಗ್ರೆಸ್ ಕಛೇರಿಯಾದ ಗಾಂಧಿಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ರಾತ್ರಿ ನಿಧನರಾದ ಭಾರತದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್‌ರವರಿಗೆ ಸಂತಾಪ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಂಧರ್ಭದಲ್ಲಿ ಮಾತನಾಡಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ 14ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮನಮೋಹನ್ ಸಿಂಗ್‌ರವರನ್ನು ಚಿಂತಕರು ಮತ್ತು ವಿದ್ವಾಂಸರಾಗಿ ಕರೆಯಲಾಗುತ್ತಿದ್ದು ನಿಗರ್ವಿಗಳಾದ ಇವರು ತಮ್ಮ ಶೈಕ್ಷಣಿಕ ಮತ್ತು ಕರ್ತವ್ಯ ಎರಡರಲ್ಲೂ ಶ್ರದ್ಧೆ ಹಾಗೂ ವಿನೀತಭಾವನೆಯಿಂದ ಗೌರವಕ್ಕೆ ಪಾತ್ರರಾಗಿದ್ದರು.ಇವರು ಪ್ರಧಾನಮಂತ್ರಿಯಾಗಿ 10 ವರ್ಷಗಳ ಕಾಲ ಭಾರತ ದೇಶದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದು ದೇಶವನ್ನೇ ಸುಸ್ಥಿತಿಗೆ ಕೊಂಡೊಯ್ದಿದ್ದರು. ದೇಶದ ಭದ್ರತೆಯ ದೃಷಿಯಿಂದ ಹಿಡಿದು ದೇಶದ ಜನರ ಸುರಕ್ಷಿತವಾಗಿ 10 ವರ್ಷಗಳ ಕಾಲ ಆಡಳಿತ ನಡೆಸಿದವರು ಎಂದು ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಮೌಳಿ ಗೌಡ ಹೇಳಿದರು.
ಈ ಸಂತಾಪ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರಾದ ಶ್ರೀನಿವಾಸ್ ಕಾಮತ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಪ್ರಭಾಕರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್, ಗುರುರಾಜ್, ಅಂಜನ್ ಟೆಕ್ಸ್ ಟೈಲ್ಸ್ ರಾಜಮೂರ್ತಿ, ಎಂ.ಪಿ.ಸುರೇಶ್, ಬೃಂದಾವನ ಪ್ರವೀಣ್, ಕಳೂರು ಕೃಷ್ಣಮೂರ್ತಿ, ಜಯನಗರ ಗುರು, ವೇದಂತಪ್ಪ ಗೌಡ, ಸುರೇಶ್‌ಕುಮಾರ್, ಮಾವಿನಕೊಪ್ಪ ಮಂಜುನಾಥ್, ಉಬೇದುಲ್ಲ, ನಾಸೀರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ರಿಪ್ಪನ್‌ಪೇಟೆಯಲ್ಲಿ ಕಾಂಗ್ರೆಸ್ ಘಟಕದ ವತಿಯಿಂದ ಸಂತಾಪ ಸಭೆ
ರಿಪ್ಪನ್‌ಪೇಟೆ : ಪಟ್ಟಣದ ಗ್ರಾಮ ಪಂಚಾಯತ್ ನ ಕುವೆಂಪು ಸಭಾಂಗಣದಲ್ಲಿ ಕಾಂಗ್ರೆಸ್ ಘಟಕದ ವತಿಯಿಂದ ಗುರುವಾರ ರಾತ್ರಿ ನಿಧನರಾದ ಮನಮೋಹನ್ ಸಿಂಗ್ ರವರಿಗೆ ಸಂತಾಪ ಸಭೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಘಟಕದ ಅಧ್ಯಕ್ಷ ಗಣಪತಿ ಗವಟೂರು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಾಗಿ, ಪ್ರಧಾನ ಮಂತ್ರಿಯಾಗಿ ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದದರು. ವಿಶ್ವದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ಆಗಿ, ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿ, ಪ್ರಧಾನಿ ಮಂತ್ರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುವುದರ ಮೂಲಕ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಿದವರು.ಅವರ ನಿಧನದಿಂದಾಗಿ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ , ಮುಖಂಡರಾದ ಈಶ್ವರಪ್ಪ ಗೌಡ , ಉಬೇದುಲ್ಲಾ ಷರೀಫ್ , ಮಧುಸೂಧನ್ , ದನಲಕ್ಷ್ಮಿ ,ಪ್ರಕಾಶ್ ಪಾಲೇಕರ್ ,ಶ್ರೀಧರ್ ,ನಾಗಪ್ಪ , ನವೀನ್, ಆರ್ ಹೆಚ್ ಮೈದಿನ್ ಹಾಗೂ ಇನ್ನಿತರರಿದ್ದರು