ಮಿನಿ ಒಲಿಂಪಿಕ್ ಕಬ್ಬಡಿ ತಂಡಕ್ಕೆ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆ | mini Olympics
ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯದ ಮೂರನೇ ಒಲಿಂಪಿಕ್ ನ ಕಬ್ಬಡಿ ತಂಡಕ್ಕೆ ಪಟ್ಟಣದ ರಾಮಕೃಷ್ಣ ವಿದ್ಯಾಲಯದ ಐವರು ವಿದ್ಯಾರ್ಥಿಗಳು ಹಾಗೂ ಆನಂದಪುರ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯ ಓರ್ವ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 17/07/2024 ರಂದು ನಡೆದ ರಾಜ್ಯ ಒಲಿಂಪಿಕ್ಸ್ ಚಾಂಪಿಯನ್ ಶಿಪ್ ಗೆ ತಂಡಗಳ ಅಯ್ಕೆ ಪ್ರಕ್ರಿಯೆಯಲ್ಲಿ ಕಬ್ಬಡಿ ತಂಡಕ್ಕೆ ಪಟ್ಟಣದ ರಾಮಕೃಷ್ಣ ವಿದ್ಯಾಲಯದ ಐವರು ವಿದ್ಯಾರ್ಥಿಗಳು ಹಾಗೂ ಆನಂದಪುರ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯದ ಒಂದು ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ.
ಡಿಪಾರ್ಟ್ಮೆಂಟ್ ಆಫ್ ಯೂತ್ ಎಂಪೈಮೆಂಟ್ ಆಂಡ್ ಸ್ಪೋರ್ಟ್ಸ್ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಸಹಯೋಗದಲ್ಲಿ ದಿನಾಂಕ 24.08.2024 ರಿಂದ 30.8. 2024 ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಮಿನಿ ಒಲಂಪಿಕ್ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
8 ನೇ ತರಗತಿಯ ಅನುಷ್ಕಾ, ಏಳನೇ ತರಗತಿಯ ಸೋನಾಲಿ , ಏಳನೆ ತರಗತಿಯ ಅವನ್ಯ , ಆರನೇ ತರಗತಿಯ ಆಯುಶ್ರೀ, ಒಂಬತ್ತನೆ ತರಗತಿಯ ವಂದನ , ಬಾಲಕರ ವಿಭಾಗದಲ್ಲಿ 8 ನೇ ತರಗತಿಯ ನಿಶಾಂತ್ 14 ವರ್ಷ ಒಳಗಿನ ರಾಜ್ಯ ಒಲಂಪಿಕ್ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ರಾಮಕೃಷ್ಣ ವಿದ್ಯಾಲಯದ ದೈಹಿಕ ಶಿಕ್ಷಕರಾದ ವಿನಯ್ ಎಂ ರವರು ಶಿವಮೊಗ್ಗ ತಂಡಕ್ಕೆ ತರಬೇತುದಾರರಾಗಿ ಆಯ್ಕೆಯಾಗಿರುತ್ತಾರೆ.
ಅದ್ವಿತೀಯ ಸಾಧನೆಗೈಯುವ ಮೂಲಕ ಮಿನಿ ಒಲಿಂಪಿಕ್ ಪಂದ್ಯಾವಳಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಜಿಲ್ಲಾ ತರಬೇತುದಾರರಾಗಿ ಆಯ್ಕೆಯಾದ ವಿನಯ್ ರವರಿಗೆ ಶಿವಮೊಗ್ಗ ಜಿಲ್ಲಾ ಕಬ್ಬಡಿ ಅಸೋಸಿಯೇಷನ್, ರಾಮಕೃಷ್ಣ ವಿದ್ಯಾಲಯದ ಮುಖ್ಯಸ್ಥರಾದ ಡಿ ಎಂ ದೇವರಾಜ್ ಹಾಗೂ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು. ಆಡಳಿತ ಮಂಡಳಿ ಶುಭ ಕೋರಿರುತ್ತಾರೆ. ವ್