ಕಟ್ಟಡ ಕಾಮಗಾರಿ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವು | ಇಂಜಿನಿಯರ್‌ ಹಾಗೂ ಮೇಸ್ತ್ರಿ ವಿರುದ್ದ ದೂರು ದಾಖಲು | electric shock

ಕಟ್ಟಡ ಕಾಮಗಾರಿ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವು | ಇಂಜಿನಿಯರ್‌ ಹಾಗೂ ಮೇಸ್ತ್ರಿ ವಿರುದ್ದ ದೂರು ದಾಖಲು | electric shock

ಕರೆಂಟ್‌ ಶಾಕ್‌ನಿಂದ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಸೋಮಯ್ಯ ಲೇಔಟ್‌ನಲ್ಲಿ ನಡೆದಿದೆ.

ಹರೀಶ್(32) ಮೃತಪಟ್ಟ ದುರ್ಧೈವಿಯಾಗಿದ್ದಾನೆ

ಮನೆ ಕಟ್ಟಡದ ಕೆಲಸಕ್ಕೆ ತೆರಳಿದ್ದ ಯುವಕ ಕೆಲಸವನ್ನು ಮುಗಿಸಿ ಹೊರಟಿದ್ದ ಕಾರ್ಮಿಕನಿಗೆ ಕಟ್ಟಡದ ಮೇಸ್ತ್ರಿ ಸಿಮೆಂಟ್‌ ಮಿಕ್ಸಿಂಗ್‌ ಯಂತ್ರವನ್ನ ಕ್ಲೀನ್‌ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಆತ ಕ್ಲೀನ್‌ ಮಾಡಲು ಹೋದಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ.

ಮಳೆಯಿಂದ ಮಿಕ್ಸಿಂಗ್‌ ಯಂತ್ರ ಗ್ರೌಂಡ್ ಆಗಿ ಕರೆಂಟ್‌ ಶಾಕ್‌ ಹೊಡೆಯುತ್ತಿತ್ತು. ಇದನ್ನ ಗಮನಿಸದ ಯುವಕ ಸಿಮೆಂಟ್‌ ಮಿಕ್ಸಿಂಗ್‌ ಯಂತ್ರಕ್ಕೆ ಕೈ ಹಾಕಿದ್ಧಾನೆ. ಅಲ್ಲಿಯೇ ಆತ ಕರೆಂಟ್‌ ಶಾಕ್‌ನಿಂದ  ಸಾವನ್ನಪ್ಪಿದ್ದಾನೆ. 10 ವರ್ಷದಿಂದ ಗಾರೆ ಕೆಲಸ ಮಾಡಿಕೊಂಡಿದ್ದ ಹರೀಶ್ ಗೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದ್ದು, 

ಘಟನೆ ಸಂಬಂಧ ಇಂಜಿನಿಯರ್‌ ಹಾಗೂ ಮೇಸ್ತ್ರಿ ನಿರ್ಲಕ್ಷ್ಯದ ವಿರುದ್ದ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *