ರಿಪ್ಪನ್ ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ನಿವಾಸಿ ಬೆಂಗಳೂರಿನಲ್ಲಿ ಚಲಿಸುತಿದ್ದ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿರುವ ಘಟನೆ ನಡೆದಿದೆ.
ತೀರ್ಥಹಳ್ಳಿ ರಸ್ತೆಯ ನಿವಾಸಿ ರಾಮನಾಥ್ (28) ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಶಬರೀಶ ನಗರದ ಸಾಯಿನಾಥ್ ಭಂಡಾರಿಯವರ ಪುತ್ರನಾದ ರಾಮನಾಥ್ ಬೆಂಗಳೂರಿನಲ್ಲಿ ಕಳೆದ ಐದಾರು ವರ್ಷಗಳಿಂದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡಿಕೊಂಡಿದ್ದನು.
ಚನ್ನಪಟ್ಟಣದಿಂದ ಮದ್ದೂರಿಗೆ ತೆರಳುವ ಮಾರ್ಗದ ನಿಡಗುಂಟೆ ರೈಲ್ವೆ ನಿಲ್ದಾಣದ ಗೇಟ್ ಬಳಿ ದ್ವಿಚಕ್ರ ವಾಹನವನ್ನು(KA 15 ED 9437) ನಿಲ್ಲಿಸಿ ಮೊಬೈಲ್ ನ್ನು ಸ್ವಿಚ್ ಆಫ಼್ ಮಾಡಿ ಅದೇ ನಿಲ್ದಾಣದಲ್ಲಿ ಸೋಮವಾರ ರಾತ್ರಿ 10.30 ರ ಸಮಯದಲ್ಲಿ ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ , ಚನ್ನಪಟ್ಟಣ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಪೋಸ್ಟ್ ಮ್ಯಾನ್ ನ್ಯೂಸ್ ಗೆ ಅಲ್ಪಕಾಲ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದ ರಾಮನಾಥ್ ನಿಧನಕ್ಕೆ ಪೋಸ್ಟ್ ಮ್ಯಾನ್ ಸುದ್ದಿ ಬಳಗ ಸಂತಾಪವನ್ನು ಸೂಚಿಸುತ್ತದೆ..