RIPPONPETE | ಮದ್ಯದಂಗಡಿ ತೆರವಿಗೆ ಗ್ರಾಮಸ್ಥರ ಪ್ರತಿಭಟನೆ
ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಶಿವಮೊಗ್ಗ ರಸ್ತೆಯ ಕೆರೆಹಳ್ಳಿಯಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
MSIL ಅಂಗಡಿಯ ಮುಂಭಾಗ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಗ್ರಾಮದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಪಟ್ಟು ಹಿಡಿದು ಕುಳಿತಿದ್ದರು.
ಈ ಸಂಧರ್ಭದಲ್ಲಿ ಸ್ಥಳಕ್ಕಾಗಮಿಸಿದ ಪಿಎಸೈ ಪ್ರವೀಣ್ ಎಸ್ ಪಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿ ನಾಗರಾಜ್ ಪ್ರತಿಭಟನಾ ನಿರತರ ಮನವಿಯನ್ನು ಆಲಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸ್ಥಳೀಯರು ಈ ಗ್ರಾಮಕ್ಕೆ ಒಂದೇ ರಸ್ತೆ ಇದ್ದಿ ಗ್ರಾಮಸ್ಥರು ಈ ರಸ್ತೆಯ ಮೂಲಕವೇ ನಡೆದು ಹೋಗಬೇಕಿದೆ. ಮಹಿಳೆಯರು, ಯುವತಿಯರು, ಮಕ್ಕಳಿಗೆ ಮದ್ಯದಂಗಡಿಗೆ ಬರುವ ಕೆಲ ಕಿಡಿಗೇಡಿಗಳಿಂದ ಕಿರಿಕಿರಿಯಾಗುತ್ತಿದೆ. ಕೆಲವರು ರೇಗಿಸಿದ್ದುಂಟು. ತುಂಬಾ ತೊಂದರೆ ಆಗುತ್ತಿದ್ದು, ಕೂಡಲೇ ಮದ್ಯದಂಗಡಿಯನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.
ಇಲ್ಲಿ ಮದ್ಯ ಖರೀದಿಸಿದ ಮದ್ಯಪ್ರಿಯರು ನಮ್ಮ ಜಮೀನಿನಲ್ಲಿ ಹಾಗೂ ಮನೆಯ ಹಿಂಭಾಗದಲಿ ಬಂದು ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ಮನಸೋಇಚ್ಚೆ ಪುಡಿ ಮಾಡಿ ಗ್ರಾಮದ ಸ್ವಾಸ್ಥ್ಯವನ್ನು ಹಾಳು ಮಾಡುತಿದ್ದು ಸಂಜೆ 6 ಗಂಟೆಯ ಮೇಲೆ ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಬರಲು ಆಗದಂತಹ ಸನ್ನಿವೇಶವುಂಟಾಗಿದೆ ಎಂದು ಅಲವತ್ತುಕೊಂಡರು..
ನಂತರ ಮಾತನಾಡಿದ ಅಬಕಾರಿ ಅಧಿಕಾರಿ ನಾಗರಾಜ್ ಈ ಸಮಸ್ಯೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ಪ್ರತಿ ನಿತ್ಯ ಈ ಭಾಗದಲ್ಲಿ ಅಬಕಾರಿ ಇಲಾಖೆಯಿಂದ ಬೀಟ್ ವ್ಯವಸ್ಥೆ ಕಲಿಸಿಕೊಡಲಾಗುವುದು ಎಂದರು.
ಪಿಎಸ್ ಐ ಪ್ರವೀಣ್ ಎಸ್ ಪಿ ಮಾತನಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ವರದಿಯನ್ನು ಮೇಲಾಧಿಕಾರಿಗೆ ಕಳುಹಿಸಿಕೊಟ್ಟು ಕ್ರಮಕೈಗೊಳ್ಳಲಾಗುವುದು ಹಾಗೂ ಅಸಭ್ಯವಾಗಿ ವರ್ತಿಸುವವರ ಬಗ್ಗೆ ಮಾಹಿತಿ ನೀಡಿದರೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್ ಪರವಾಗಿ ಗ್ರಾಮ ಲೆಕ್ಕಾಧಿಕಾರಿ ಶೋಭಾ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದರು.ನಂತರ ಗ್ರಾಮಸ್ಥರೆಲ್ಲಾ ತೆರಳಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಓ ಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಪ್ರಮುಖರಾದ ರವೀಂದ್ರ ಕೆರೆಹಳ್ಳಿ , ಟೀಕಪ್ಪ ಗೌಡ ,ಶಾಂತಮ್ಮ , ಜಯಮ್ಮ , ಹೇಮಾವತಿ , ವನಿತಾ , ಮುರುಳಿ ಕೆರೆಹಳ್ಳಿ , ಮಂಜುನಾಥ್ ಗೌಡ , ಸಂತೋಷ್ , ಸಚಿನ್ ಗೌಡ , ಅವಿನಾಶ್ , ಗಣೇಶ್ , ಹಾಗೂ ಇನ್ನಿತರರಿದ್ದರು