Headlines

ರೌಡಿ ಶೀಟರ್ ಕಡೆಕಲ್ ಅಬಿದ್ ಕಾಲಿಗೆ ಪೊಲೀಸರ ಗುಂಡು

ರೌಡಿ ಶೀಟರ್ ಕಡೆಕಲ್ ಅಬಿದ್ ಕಾಲಿಗೆ ಪೊಲೀಸರ ಗುಂಡು

ಶಿವಮೊಗ್ಗ:  ಸುಮಾರು ೨೦ಕ್ಕ್ಕೂ ಹೆಚ್ಚು ಪ್ರಕರಣಗಳ ಆರೋಪಿಯಾಗಿರುವ, ಕೊಲೆ ಯತ್ನದ ಪ್ರಕರಣಕ್ಕೆ  ಸಂಬಂಧಿಸಿ ಭದ್ರಾವತಿ ಪೇಪರ್ ಟೌನ್ ಪೊಲೀಸರಿಗೆ ಬೇಕಾಗಿದ್ದ ಕಡೆಕಲ್ ಅಬಿದ್ ಎನ್ನುವವನ್ನು ಮಂಗಳವಾರ ಸಂಜೆಯ  ವೇಳೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಸಂಭವಿಸಿದೆ.

ಪೇಪರ್ ಟೌನ್ ಇನ್ಸ್‌ಪೆಕ್ಟರ್ ನಾಗಮ್ಮ ಮತ್ತು ತಂಡದವರು ಖಚಿತ ಮಾಹಿತಿ ಮೇರೆಗೆ ಅಬಿದ್‌ನನ್ನು ಬಂಧಿಸಲು ತೆರಳಿದ್ದರು. ಸುಮಾರು ಒಂದು ತಿಂಗಳಿನಿಂದುಈತ ತಲೆಮರೆಸಿಕೊಂಡಿದ್ದನು. ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲೆತ್ನಿಸಿದನಲ್ಲದೆ ಮರು ದಾಳಿ ನಡೆಸಿದನು.

ಕೂಡಲೇ ಆತನಿಗೆ ಗುಂಡು ಹಾರಿಸಿ ತಪ್ಪಿಸಿಕೊಳ್ಳದಂತೆ ಮಾಡಲಾಯಿತು. ಇದರಿಂದ ನೆಲಕ್ಕೆ ಬಿದ್ದಾಗ ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ಘಟನೆಯಲ್ಲಿ ಅರುಣ್ ಎನ್ನುವ ಕಾನಸ್ಟೆಬಲ್ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಕೊಲೆ, ದರೋಡೆ, ಕೊಲೆ ಯತ್ನದ ಕೇಸುಗಳು ಅಬಿದ್ ಮೇಲಿವೆ.

Leave a Reply

Your email address will not be published. Required fields are marked *