ಶರಾವತಿ ಸಂತ್ರಸ್ಥರ ಹೋರಾಟಕ್ಕೆ ಹಿನ್ನಡೆ – ಕರ್ನಾಟಕದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ|sharavathi
ಕರ್ನಾಟಕ ರಾಜ್ಯದ ಜನತೆಗೆ ಬೆಳಕು ನೀಡಲು ತಮ್ಮ ಜೀವನವನ್ನೇ ನೀಡಿರುವ ಶರಾವತಿ ಸಂತ್ರಸ್ತರ ಹೋರಾಟಕ್ಕೆ ಹಿನ್ನಡೆಯಾಗಿದ್ದು, ಶರಾವತಿ ಕಣಿವೆ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯಿಂದ ಹಾನಿಗೊಳಗಾದ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸಿಸುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 1958 ರಿಂದ 1969 ರವರೆಗೆ ನೀಡಲಾದ ಒಟ್ಟು 9,129 ಎಕರೆ ಅರಣ್ಯ ಭೂಮಿಯನ್ನು ಮೀಸಲಿಡುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಪರಿಸರ ಸಚಿವಾಲಯ ತಿರಸ್ಕರಿಸಿದೆ. ಸುಪ್ರೀಂ ಆದೇಶವನ್ನು ಉಲ್ಲೇಖಿಸಿ ಕೇಂದ್ರ ಸಚಿವಾಲಯ ಕರ್ನಾಟಕ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಹೌದು, ಶಿವಮೊಗ್ಗ ಜಿಲ್ಲೆಯ…