Headlines

ಎಚ್ಚರ , ನಿಮ್ಮ ಮೊಬೈಲ್ ನಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಇಟ್ಟುಕೊಳ್ಳುವುದು ಅಪರಾಧ – ಕ್ರಮಕ್ಕೆ ಮುಂದಾದ ಎಸ್ ಐಟಿ | SIT

ಎಚ್ಚರ , ನಿಮ್ಮ ಮೊಬೈಲ್ ನಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಇಟ್ಟುಕೊಳ್ಳುವುದು ಅಪರಾಧ – ಕ್ರಮಕ್ಕೆ ಮುಂದಾದ ಎಸ್ ಐಟಿ | SIT



ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡದಂತೆ ಎಸ್‌ಐಟಿ ಖಡಕ್ ಸೂಚನೆ ನೀಡಿತ್ತು. ಈಗ ಅಶ್ಲೀಲ ವೀಡಿಯೋಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದ ಅಪರಾಧ ಎಂಬುದಾಗಿ ಮನವರಿಕೆ ಮಾಡಿಕೊಟ್ಟಿದೆ.



ಈ ಕುರಿತು ಸಿಐಟಿಯ ವಿಶೇಷ ತನಿಖಾ ತಂಡದ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅದರಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಅಧಿನಿಯಮದಲ್ಲಿ ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ, ಪ್ರಸಾರ ಮಾಡುವ ವ್ಯಕ್ತಿಗಳನ್ನು ಸಂದೇಶದ ರಚನಾಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಆದ್ದರಿಂದ ಯಾರಾದರೂ ತಮ್ಮ ಬಳಿ ಅಶ್ಲೀಲ ವಿಡಿಯೋ, ಚಿತ್ರಗಳು ಹಾಗೂ ಧ್ವನಿ ಮುದ್ರಣಗಳನ್ನು ಇಟ್ಟುಕೊಂಡಿದ್ದರೂ ಅದು ಅಪರಾಧವಾಗುತ್ತದೆ. ಕಾರಣ ಜನರು ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳನ್ನು ಇಟ್ಟುಕೊಳ್ಳುವುದನ್ನು ಅಥವಾ ಪ್ರಸಾರ ಮಾಡುವುದನ್ನು ನಿರ್ಬಂಧಿಸಿಕೊಳ್ಳುವುದು ಸೂಕ್ತ ಎಂದಿದ್ದಾರೆ.

ಒಂದು ವೇಳೆ ಅಂಥಹ ವಿಡಿಯೋ, ಚಿತ್ರಗಳು ಮತ್ತು ಧ್ವನಿ ಮುದ್ರಣಗಳನ್ನು ತಮ್ಮ ಮೊಬೈಲ್ ಅಥವಾ ಇತರೆ ಸಾಧನಗಳಲ್ಲಿ ಹೊಂದಿದ್ದರೆ ‘ಡಲೀಟ್’ ಮಾಡುವುದರಿಂದ ಕಾನೂನಿನ ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *