ಜಿಲ್ಲಾ ಸುದ್ದಿ:
ಹೊಸನಗರದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಹೊಸನಗರದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಹೊಸನಗರ: ಅತಿ ಶೀಘ್ರದಲ್ಲೇ ಪಂಚಾಯತಿ ಚುನಾವಣೆಗಳು ಘೋಷಣೆಯಾಗುವ ಕಾಲ ಸನ್ನಿಹಿತವಾದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ರಾಜ್ಯಾಧ್ಯಕ್ಷ , ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲು ಕರೆ ನೀಡಿದ್ದು ಆ ಮೂಲಕ ರಾಜ್ಯಾದ್ಯಂತ ಸಂಘಟನೆಗೆ ಪಕ್ಷ ಮುಂದಾಗಿದ್ದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ರಾಮಕೃಷ್ಣ ತಿಳಿಸಿದರು. ಬುಧವಾರ ಪಟ್ಟಣದ ಶೀತಲ್ ಹೋಟಲ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪಕ್ಷದ ನೂತನ ಕಾರ್ಯಕರ್ತರ ಸದಸ್ಯತ್ವ…
ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ : ಅರಗ ಜ್ಞಾನೇಂದ್ರ
ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ : ಅರಗ ಜ್ಞಾನೇಂದ್ರ ರಿಪ್ಪನ್ಪೇಟೆ : ಹುಬ್ಬಳ್ಳಿಯಲ್ಲಿ 2022ರಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಿರುವ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಕ್ರಮಕ್ಕೆ ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕರಾದ ಅರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಅಂದಿನ ಘಟನೆಯಲ್ಲಿ ಹಲವು ಪೋಲಿಸ ಸಿಬ್ಬಂದಿಗಳ ಪ್ರಾಣಕ್ಕೆ ಕುತ್ತು ಬಂದಿತ್ತು, ಘಟನೆಯಲ್ಲಿ ಭಾಗವಹಿಸಿದ್ದ 160…
ಭತ್ತದ ಗದ್ದೆಯಲ್ಲಿ ಕಂದುಜಿಗಿ ಹುಳು ಬಾಧೆಗೆ ನೂರಾರು ಎಕರೆ ಬೆಳೆ ನಾಶ – ಈ ಹುಳುವಿನ ಹತೋಟಿ ಕ್ರಮ ಏನೇನು.!? ಇಲ್ಲಿದೆ ಸಂಪೂರ್ಣ ಮಾಹಿತಿ..!
ಕಳೆದ ಬೇಸಿಗೆಯಲ್ಲಿ ಸೈನಿಕ ಹುಳುಬಾಧೆ, ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಜೋಳ ಬೆಳೆ ಕಳೆದುಕೊಂಡ ರೈತರೀಗ ಕಂದುಜಿಗಿ ಹುಳು ಬಾಧೆಯಿಂದ ಭತ್ತದ ಬೆಳೆಯನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿದ್ದಾರೆ. ಭತ್ತದ ಬೆಳೆಯಿಂದ ಲಾಭ ಕಡಿಮೆ. ಹೀಗಾಗಿ ಹೆಚ್ಚು ಬೆಲೆಯ ಕೀಟನಾಶಕ ಸಿಂಪಡಿಸುವುದು ಕಷ್ಟಸಾಧ್ಯ. ಸಾಮಾನ್ಯ ಕೀಟನಾಶಕಗಳನ್ನು ಸಿಂಪಡಿಸುವುರಿಂದ ಹತೋಟಿ ಸಾಧ್ಯವಿಲ್ಲ. ಹೀಗಾಗಿ ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ಪರಿಣಾಮಕಾರಿ ಗುಣಮಟ್ಟದ ಕೀಟನಾಶಕವನ್ನು ಒದಗಿಸಿ ರೈತರ ಹಿತ ಕಾಯಬೇಕಿದೆ. ಶಿವಮೊಗ್ಗ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆಗೆ ಕಂದುಜಿಗಿ ಹುಳು ಬಾಧೆ…
ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್ – ಪ್ರಯಾಣಿಕರ ಪರದಾಟ
ದಸರಾ ಎಫೆಕ್ಟ್ – ಆಗುಂಬೆ ಘಾಟಿಯಲ್ಲಿ ಸಂಪೂರ್ಣ ಜಾಮ್! ತೀರ್ಥಹಳ್ಳಿ : ದಸರಾ ಹಬ್ಬವನ್ನು ಮುಗಿಸಿ ಪ್ರತಿಯೊಬ್ಬರು ಊರುಗಳಿಗೆ ಹೊರಟ ಕಾರಣ ವಾಹನಗಳ ದಟ್ಟನೆ ಜಾಸ್ತಿಯಾಗಿರುವುದರಿಂದಸಂಪೂರ್ಣ ಟ್ರಾಫಿಕ್ ಜಾಮ್ ಆಗಿರುವ ಘಟನೆ ಆಗುಂಬೆ ಘಾಟಿಯಲ್ಲಿ ನಡೆದಿದೆ. ಮಂಗಳೂರು, ಉಡುಪಿ ಭಾಗದಿಂದ ತೀರ್ಥಹಳ್ಳಿ ಮೂಲಕ ಶಿವಮೊಗ್ಗ ಬೆಂಗಳೂರಿಗೆ ದಸರಾ ರಜೆ ಮುಗಿಸಿ ಹೊರಟ ಕಾರಣ ಘಾಟಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನಗಳು ಕಳೆದ ಅರ್ಧ ಗಂಟೆಯಿಂದಲೂ ಹೆಚ್ಚು ಕಾಲದಿಂದ ನಿಂತಲ್ಲಿಯೇ ನಿಂತಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ….
SHIVAMOGGA | ವೈಭವದ ದಸರಾ ಮೆರವಣಿಗೆ
SHIVAMOGGA | ವೈಭವದ ದಸರಾ ಮೆರವಣಿಗೆ ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆತಿದೆ. ಸಕ್ರೆಬೈಲು ಬಿಡಾರದ ಆನೆ ಸಾಗರ ನೇತೃತ್ವದಲ್ಲಿ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಶಿವಪ್ಪ ನಾಯಕ ಅರಮನೆ ಸಮೀಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಸುಮಾರು 450 ಕೆಜಿ ತೂಕದ ಬೆಳ್ಳಿಯ ಅಂಬಾರಿ ಹೊತ್ತು ಸಾಗರ ಆನೆ ಸಾಗಿದೆ. ಸಚಿವ ಮಧು ಬಂಗಾರಪ್ಪ ದಂಪತಿ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಬಲ್ಕಿಶ್ ಬಾನು, ಡಾ. ಧನಂಜಯ ಸರ್ಜಿ…
ಕಬ್ಬಡಿ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು
ಕಬ್ಬಡಿ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು ರಿಪ್ಪನ್ಪೇಟೆ : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದಲ್ಲಿ ಅ. 09 ರಿಂದ 10ರ ವರೆಗೆ ನಡೆದ ಬೆಂಗಳೂರು ವಿಭಾಗ ಮಟ್ಟದ ಕಬ್ಬಡಿ ಕ್ರೀಡಾಕೂಟದಲ್ಲಿ ಪಟ್ಟಣದ ಶಾರದಾ, ರಾಮಕೃಷ್ಣ ವಿದ್ಯಾಲಯ ವಿದ್ಯಾರ್ಥಿಗಳು ಅಮೋಘ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾರದ,ರಾಮಕೃಷ್ಣ ವಿದ್ಯಾಲಯದ 7 ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ್ದು 17 ವರ್ಷ ವಯೋಮಿತಿಯೊಳಗಿನ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕಿಯರ ತಂಡ ಪ್ರಥಮ ಸ್ಥಾನ…
ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಆಯುಧ ಪೂಜೆ
ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಆಯುಧ ಪೂಜೆ ರಿಪ್ಪನ್ಪೇಟೆ : ನಾಡಹಬ್ಬ ದಸರಾ ಹಿಂದಿನ ದಿನವಾದ ಇಂದು ಆಯುಧ ಪೂಜೆಯನ್ನು ಪಟ್ಟಣದ ಹಲವಾರು ಕಡೆಗಳಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಸರ್ಕಾರಿ ವಾಹನಗಳು, ಖಾಸಗಿ ವಾಹನಗಳಿಗೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡಲಾಯಿತು. ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಚಾಮುಂಡೇಶ್ವರಿ ದೇವಿಯ ಫೋಟೋ ಪ್ರತಿಷ್ಠಾಪನೆ ಮಾಡಿ ವಾಹನಗಳಿಗೆ ಪೂಜೆ ಸಲ್ಲಿಸಿ ಬಂದೂಕು ಮತ್ತು ರಿವಾಲ್ವರ್ ಗಳಿಗೆ ಪೂಜೆ ಮಾಡಲಾಯಿತು. ಈ ಪಿಎಸ್ಐ ಪ್ರವೀಣ್ ಎಸ್ ಪಿ, ಎಎಸ್…
ಕಾಡಾನೆ ದಾಳಿಗೆ ಭತ್ತದ ಬೆಳೆ ನಾಶ
ಕಾಡಾನೆ ದಾಳಿಗೆ ಭತ್ತದ ಬೆಳೆ ನಾಶ ತೀರ್ಥಹಳ್ಳಿ : ಕಾಡಾನೆ ದಾಳಿಯಿಂದ ಭತ್ತದ ಬೆಳೆ ಸಂಪೂರ್ಣ ನಾಶವಾದ ಘಟನೆ ಗುರುವಾರ ರಾತ್ರಿ ಆಗುಂಬೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಆಗುಂಬೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾರೇಕುಂಬ್ರಿ ಗ್ರಾಮದ ಗಣೇಶ್ ಎಂಬುವರ ಜಮೀನಿನಲ್ಲಿ ಗುರುವಾರ ರಾತ್ರಿ ಕಾಡಾನೆ ಆಗಮಿಸಿ ಬೆಳೆದಂತಹ ಬತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡಿದೆ. ಈಗಾಗಲೇ ಎರಡು ಮೂರು ದಿನಗಳಿಂದ ಈ ಭಾಗದಲ್ಲಿ ಕಾಡಾನೆ ಓಡಾಟ ನಡೆಸುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಯಾರು ಸ್ಪಂದನೆ ಮಾಡುತ್ತಿಲ್ಲ….
ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವ್ ನಲ್ಲಿ ಕಣ್ಮನ ಸೆಳೆಯುವ ಪಟ್ಟಣಗೊಂಬೆ ಪ್ರದರ್ಶನ
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಬಂಕಾಪುರ ಪಟ್ಟಣದ ಮಾಜಿ ಪುರಸಭೆ ಸದಸ್ಯರಾದ ಎಂ ವಿ ಪದ್ಮಾ ರವರು ದಸರಾ ಗೊಂಬೆ ಕೂರಿಸುವ ಮೂಲಕ ಮೈಸೂರು ಭಾಗದಲ್ಲಿದ್ದ ಸಂಪ್ರದಾಯವನ್ನು ಹಾವೇರಿ ಜಿಲ್ಲೆಗೂ ವಿಸ್ತರಿಸಿದ್ದಾರೆ. ಹೌದು. ಸುಮಾರು 3 ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಕೂರಿಸಿರುವ ಇವರು ನವರಾತ್ರಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಇವರ ಮನೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಕೂರಿಸಿದ್ದು ಪ್ರತಿನಿತ್ಯ ಸಂಜೆ ಮುತ್ತೈದೆಯರಿಗೆ ಉಡಿ ತುಂಬಿ ಅರಿಷಿಣ ಕುಂಕುಮ ವಿನಿಮಯ ಮಾಡಿಕೊಳ್ಳಲಾಗುತ್ತದೆ. ವಿಷ್ಣುವಿನ ದಶಾವತಾರಗಳು, ರಾಮಾಯಣ, ಮಹಾಭಾರತ ಸಂಗೀತೋಪಕರಣಗಳು,…
RIPPONPETE |ನ.1 ರಂದು ಕಸ್ತೂರಿ ಕನ್ನಡ ಸಂಘದಿಂದ ಆದ್ದೂರಿ ಕನ್ನಡ ರಾಜ್ಯೋತ್ಸವ
ರಿಪ್ಪನ್ ಪೇಟೆಯಲ್ಲಿ ನ.01ಕ್ಕೆ ಆದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ದತೆ ರಿಪ್ಪನ್ಪೇಟೆ;- ಪಟ್ಟಣದ ಕಸ್ತೂರಿ ಕನ್ನಡ ಸಂಘ ಮತ್ತು ದಿ.ಪುನೀತ್ರಾಜ್ ಆಭಿಮಾನಿ ಬಳಗದ 4 ನೇ ವರ್ಷದ ವಾರ್ಷೀಕೋತ್ಸವ ಮತ್ತು ನವಂಬರ್ 01 ರಂದು ಕನ್ನಡ ರಾಜ್ಯೋತ್ಸವವನ್ನು ಈ ಭಾರಿ ಆದ್ದೂರಿಯಾಗಿ ಆಚರಿಸುವ ಬಗ್ಗೆ ನಿರ್ಧರಿಸಲಾಗಿದ್ದು ಅದರನ್ವಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಇದರೊಂದಿಗೆ ದಿ.ಪುನೀತ್ರಾಜ್ ಪುಣ್ಯ ಸ್ಮರಣೆಯ ಕಾರ್ಯಕ್ರಮವು ಸಿದ್ದಿವಿನಾಯಕ ವೃತ್ತದಲ್ಲಿ ಏರ್ಪಡಿಸಲಾಗಿದೆ ಎಂದು ಕಸ್ತೂರಿ ಕನ್ನಡ ಸಂಘದ ಆಧ್ಯಕ್ಷರಾದ ಧನಲಕ್ಷ್ಮಿ ಗಂಗಾಧರ್ ಮತ್ತು ಆರ್.ಎ.ಚಾಬುಸಾಬ್…