w
Headlines

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ – ಹೊಸನಗರದ 27 ವರ್ಷದ ಯುವಕನಿಗೆ 01 ವರ್ಷ ಶಿಕ್ಷೆ ಪ್ರಕಟ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಕಳೆದ ವರ್ಷ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಹಿನ್ನಲೆಯ ಪ್ರಕರಣದಲ್ಲಿ ಆರೋಪಿ 27 ವರ್ಷದ ಯುವಕನಿಗೆ 01 ವರ್ಷ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. 2022ನೇ ಸಾಲಿನಲ್ಲಿ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ನೊಂದ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.  ಆಗಿನ ತನಿಖಾಧಿಕಾರಿಗಳಾದ ಮಧುಸೂದನ್ ಜಿ.ಕೆ. ಸಿಪಿಐ ಹೊಸನಗರ ವೃತ್ತರವರು ಪ್ರಕರಣದ ತನಿಖೆ…

Read Full News

10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಸಾವು ಸೊರಬ : ಹೃದಯಾಘಾತದಿಂದ 10ನೇ ತರಗತಿಯ ವಿದ್ಯಾರ್ಥಿ ಮೃತಪಟ್ಟ ಘಟನೆ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆದಿದೆ. 10ನೇ ತರಗತಿ ವಿದ್ಯಾರ್ಥಿ ಜಯಂತ್ ರಜತಾದ್ರಯ್ಯ ಮೃತ ದುರ್ದೈವಿ. ಆನವಟ್ಟಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಜಯಂತ್ ಬೆಳಗ್ಗೆ ಶಾಲೆಗೆ ತೆರಳುವ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ. ಜಯಂತ್ ಎಂದಿನಂತೆ ಬೆಳಗ್ಗೆ ಎದ್ದು ಶಾಲೆಗೆ ಹೋಗಲು ಮನೆಯಲ್ಲಿ ರೆಡಿಯಾಗುತ್ತಿದ್ದ ವೇಳೆಯಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಜಯಂತ್​ನನ್ನು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ…

Read Full News

ರಿಪ್ಪನ್‌ಪೇಟೆ – ಶಾಲಾ ಮಕ್ಕಳ ಪ್ರವಾಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ|Ripponpet

ರಿಪ್ಪನ್‌ಪೇಟೆ – ಶಾಲಾ ಮಕ್ಕಳ ಪ್ರವಾಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ರಿಪ್ಪನ್‌ಪೇಟೆ : ಇಲ್ಲಿನ ಬೆನವಳ್ಳಿ ಗ್ರಾಮದಲ್ಲಿ ಶಾಲಾ ಮಕ್ಕಳ ಪ್ರವಾಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಬೆನವಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಶಾಲಾ ಮಕ್ಕಳನ್ನು ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸ ಕರೆದೊಯ್ದು ವಾಪಾಸ್ ಶಿವಮೊಗ್ಗ ಕಡೆಗೆ ತೆರಳುತಿದ್ದ ವಿಜಯಲಕ್ಷ್ಮಿ ಬಸ್ ಹಾಗೂ ಶಿವಮೊಗ್ಗದಿಂದ ಹೊಂಬುಜ ದೇವಸ್ಥಾನಕ್ಕೆ ಹೊರಟಿದ್ದ ಮಾರುತಿ ಬಲೆನೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ರಸ್ತೆ…

Read Full News

ತ್ಯಾಗರ್ತಿ ಬಳಿ ಭೀಕರ ರಸ್ತೆ ಅಪಘಾತ – ಸಾಗರ ನಗರಸಭೆ ಮಾಜಿ ಅಧ್ಯಕ್ಷ ಸೇರಿದಂತೆ ಮೂವರಿಗೆ ಗಂಭೀರ ಗಾಯ|Accident

ಸಾಗರ ತಾಲ್ಲೂಕಿನ ತ್ಯಾಗರ್ತಿ ಸಮೀಪದಲ್ಲಿ ಮಾರುತಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂರು ಜನರಿಗೆ ಗಂಭೀರ ಗಾಯಾಗಳಾಗಿರುವ ಘಟನೆ ನಡೆದಿದೆ. ತ್ಯಾಗರ್ತಿ ಸಮೀಪದ ಅಬಸೆ ಬಳಿಯಲ್ಲಿ ಮಾರುತಿ ಓಮಿನಿ ಕಾರಿನಲ್ಲಿ ಮೂರು ಜನರು ಸಂಚರಿಸುತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಸಾಗರ ನಗರಸಭೆ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಇನ್ನಿಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.ತ್ಯಾಗರ್ತಿ ಯಿಂದ ಸಾಗರ ಕಡೆಗೆ ತೆರಳುತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಓರ್ವನ ಕಾಲು ಮುರಿದಿದ್ದು,…

Read Full News

ರಿಪ್ಪನ್‌ಪೇಟೆ : ಬೆನವಳ್ಳಿಯಲ್ಲಿ ಜಿಂಕೆ ಬೇಟೆ – ಮಾಂಸ ಸಮೇತ ಓರ್ವನ ಬಂಧನ|arrested

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬೆನವಳ್ಳಿ ಗ್ರಾಮದಲ್ಲಿ  ಜಿಂಕೆ ಭೇಟೆಯಾಡಿ ಮಾಂಸವನ್ನು ಬಳಸಿಕೊಳ್ಳುತಿದ್ದ ಆರೋಪದಲ್ಲಿ ಓರ್ವನನ್ನು ಬಂಧಿಸಿದ್ದಾರೆ. ಬೆನವಳ್ಳಿ ಗ್ರಾಮದ ಮನೋಹರ್ (34) ಬಂಧಿತ ಆರೋಪಿ.ಇನ್ನೋರ್ವ ಆರೋಪಿ ಬೆನವಳ್ಳಿ ಗ್ರಾಮದ ವಿನಯ್ (26) ಪರಾರಿಯಾಗಿದ್ದಾನೆ. ಮಾಂಸ ಮಾಡುವ ಉದ್ದೇಶದಿಂದ ಜಿಂಕೆಯನ್ನು ಭೇಟೆ ಮಾಡಿರುವ ಮಾಹಿತಿಯ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಬೆನವಳ್ಳಿ ಗ್ರಾಮದ ಸನಂ 10|06 ರಲ್ಲಿ ಜಿಂಕೆ ಮಾಂಸ ಪತ್ತೆಯಾಗಿದೆ.ಈ ಹಿನ್ನಲೆಯಲ್ಲಿ ಆರೋಪಿ ಮನೋಹರ್ ನನ್ನು ವಶಕ್ಕೆ ಪಡೆದಿದ್ದು ಇನ್ನೋರ್ವ ಆರೋಪಿ ವಿನಯ್ ಬಂಧನಕ್ಕೆ…

Read Full News

ಸಾಗರದಲ್ಲಿ ಬಜರಂಗ ದಳ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ – ಸಂಘಟನೆಗಳಿಂದ ಪ್ರತಿಭಟನೆ|sagara

ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ,  ಈ ಘಟನೆಯಲ್ಲಿ ಸ್ವಲ್ಪದರಲ್ಲಿಯೆ  ಸುನೀಲ್ ಎಂಬಾತ ತಪ್ಪಿಸಿಕೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಗರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದ ಘಟನೆ ಇದಾಗಿದ್ದು,  ಬೆಳಗ್ಗೆ ೯ ಗಂಟೆ ಸುಮಾರಿಗೆ ನಡೆದಿದೆ.  ಬೈಕ್​ನಲ್ಲಿ ಬರುತ್ತಿದ್ದ ಸುನೀಲ್​ ಮೇಲೆ ಸಮೀರ್​ ಎಂಬಾತ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ.  ಜಿಯೋ ಫೈಬರ್ ಕಚೇರಿಯ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಘಟನೆ ನಡೆದಿದೆ. ಅಲ್ಲಿಯೇ ಇದ್ದ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.  ಸುನೀಲ್…

Read Full News

ಗರ್ತಿಕೆರೆ ಬಳಿ ಭೀಕರ ಅಪಘಾತ – ಮೀನು ವ್ಯಾಪಾರಿ ಸ್ಥಳದಲ್ಲೇ ಸಾವು|accident

ರಿಪ್ಪನ್‌ಪೇಟೆ : ಗರ್ತಿಕೆರೆ ಕಾಲೇಜು ಸಮೀಪದಲ್ಲಿ ಬೆಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗರ್ತಿಕೆರೆ ನಿವಾಸಿ ಮೀನು ವ್ಯಾಪಾರಿ ಕಬೀರ್ ಸಾಬ್ (72) ಎಂಬುವವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ತೀರ್ಥಹಳ್ಳಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಎಕ್ಸ್ಎಲ್ ಸೂಪರ್ ಬೈಕ್ ನಲ್ಲಿ ಹೊರಟು ನಿಂತಿದ್ದ ಕಬೀರ್ ಸಾಬ್ ಎಂಬುವವರಿಗೆ ಹಿಂಬದಿಯಿಂದ ವೇಗವಾಗಿ ಬಂದ ಬೊಲೆರೋ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭೀಕರ ಅಪಘಾತದಲ್ಲಿ ಬೊಲೆರೋ ವಾಹನ ಸಹ ಪಲ್ಟಿಯಾಗಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ….

Read Full News

ಅಂಬಲಿಗೋಳ ಡ್ಯಾಮ್ ನಲ್ಲಿ ಕಾಲು ತೊಳೆಯಲು ಇಳಿದ ವ್ಯಕ್ತಿ ನೀರುಪಾಲು – ತೀವ್ರ ಶೋಧ ಕಾರ್ಯಾಚರಣೆ|dam

ಕಾಲು ತೊಳೆಯಲು ಹೋಗಿ ಅಂಬಲಿಗೋಳ ಡ್ಯಾಮ್ ನಲ್ಲಿ ಜಾರಿ ಬಿದ್ದ ವ್ಯಕ್ತಿ : ಅಗ್ನಿಶಾಮಕ ದಳದಿಂದ ತೀವ್ರ ಶೋಧ…!!! ಶಿಕಾರಿಪುರ ತಾಲೂಕಿನ ಅಂಬಲಿಗೋಳ ಡ್ಯಾಮ್ ನಲ್ಲಿ ಯುವಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ನಡೆದಿದೆ. ಕಪ್ಪನಹಳ್ಳಿ ಗ್ರಾಮದ ನಿವಾಸಿ ಜಗದೀಶ್ ಎಂಬ ವ್ಯಕ್ತಿ ತಮ್ಮ ಸ್ನೇಹಿತರೊಂದಿಗೆ ವಿಹಾರಕ್ಕೆ ಆಗಮಿಸಿದಾಗ ಅಂಬಲಿಗೋಳ ಡ್ಯಾಮ್ ಮೇಲಿನ ರಸ್ತೆಯಲ್ಲಿ ತಿರುಗಾಡಿದ್ದಾರೆ.ನಂತರ ಅಂಬಲಿಗೋಳ ಡ್ಯಾಮ್ ನಲ್ಲಿ ಇಳಿದು ಕಾಲು ತೊಳೆಯುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ನೀರುಪಾಲಾಗಿರುವ ಘಟನೆ ಇಂದು…

Read Full News

ರಿಪ್ಪನ್‌ಪೇಟೆ : ಚಲಿಸುತಿದ್ದ ಟಾಟಾ ಏಸ್ ವಾಹನದಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು|accident

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕಣಬಂದೂರು ಶಾಲೆಯ ಬಳಿ ಟಾಟಾ ಏಸ್ ವಾಹನದಲ್ಲಿ ಹಿಂಬದಿ ಕುಳಿತಿದ್ದ ವ್ಯಕ್ತಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಣಬಂದೂರು ಗ್ರಾಮದ ರಾಘವೇಂದ್ರ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಟಾಟಾ ಏಸ್(tata ace) ವಾಹನದಲ್ಲಿ  ತೋಟಕ್ಕೆ ದರಗಲು ತರುತ್ತಿರುವಾಗ ಕಣಬಂದೂರು ಶಾಲೆಯ(school) ಸಮೀಪದಲ್ಲಿ ಹಿಂಬದಿ ಕುಳಿತಿದ್ದ ರಾಘವೇಂದ್ರ ಆಯ ತಪ್ಪಿ ಕೆಳಗಿನ ಸಿಮೆಂಟ್ ರಸ್ತೆಯ ಮೇಲೆ ಬಿದ್ದು ತೀವ್ರತರವಾಗಿ ಗಾಯಗೊಂಡಿದ್ದನು. ಕೂಡಲೇ ಸ್ಥಳೀಯರು ಹಾಗೂ ಸಂಬಂಧಿಕರು ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ(hospital) ದಾಖಲಿಸಿದ್ದಾರೆ ಆದರೆ…

Read Full News

ತೀರ್ಥಹಳ್ಳಿ : ಚಾಕಲೇಟ್ ಎಂದು ಇಲಿ ಪಾಷಾಣ ತಿಂದ ಐದು ವರ್ಷದ ಮಗು – ಚಿಕಿತ್ಸೆ ಫಲಿಸದೇ ಸಾವು|rat poison

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿಯ ಮೇಲಿನಕೊಪ್ಪದ ಬಳಿಯಲ್ಲಿ ಮಗುವೊಂದು ಇಲಿ ಪಾಷಾಣದ ಪೇಸ್ಟ್ ತಿಂದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಕೂಲಿ ಕಾರ್ಮಿಕ ಚಂದ್ರಪ್ಪ ಮತ್ತು ಗೀತಾ ದಂಪತಿಯ ಎಂಬುವವರ ಪುತ್ರ ಪ್ರೀತಮ್ (5) ಮೃತ ಬಾಲಕ.  ಇಲಿಗೆ ಅಂತಾ ಇಟ್ಟಿದ್ದ ಪಾಷಾಣವನ್ನು ಮಗು ಚಾಕೊಲೆಟ್ ಎಂದು ಭಾವಿಸಿ ಬಾಯಿಗೆ ಹಾಕಿಕೊಂಡಿದೆ. ನಿನ್ನೆ ರಾತ್ರಿ ಮಗು ಅಸ್ಥಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಇಂದು ಸಾವನ್ನಪ್ಪಿದೆ.  ಮಗುವನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ…

Read Full News

ವಿದ್ಯುತ್ ಟ್ರಾನ್ಸ್ ಫಾರ್ಮ್ ದುರಸ್ತಿ ವೇಳೆ ವಿದ್ಯುತ್ ತಗುಲಿ ಪವರ್ ಮ್ಯಾನ್ ಸಾವು – ಜಿಲ್ಲೆಯಲ್ಲಿ ವಾರದಲ್ಲಿ ಎರಡು ದುರಂತ ಘಟನೆ|mescom

ಶಿಕಾರಿಪುರ : ಇಲ್ಲಿನ ಕಪ್ಪನಹಳ್ಳಿ ಗ್ರಾಮದಲ್ಲಿ ಟ್ರಾನ್ಸಪಾರ್ಮ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್​  ಸಾವನ್ನಪ್ಪಿರುವ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಶ್ರೀಶೈಲಾ ಎನ್ನುವವರು ಮೃತಪಟ್ಟಿದ್ದಾರೆ. ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಟ್ರಾನ್ಸಫಾರಮ್​ನಲ್ಲಿ ದೋಷ ಕಾಣಿಸಿಕೊಂಡಿತ್ತು ಆ ಹಿನ್ನಲೆಯಲ್ಲಿ ಲೈನ್​ ಮ್ಯಾನ್​ ಶ್ರೀಶೈಲ ಸ್ಥಳಕ್ಕೆ ತೆರಳಿ ಸಂಬಂಧಿಸಿದ ಸ್ಟೇಷನ್ ನಿಂದ ಲೈನ್ ಕ್ಲಿಯರೆನ್ಸ್ ಪಡೆದು ದುರಸ್ತಿ ಕಾರ್ಯ ಕೈಗೊಂಡಿದ್ದರು. ಆದರೆ ಏಕಾಏಕಿ ಆಫ಼್ ಆಗಿದ್ದ ವಿದ್ಯುತ್ ಲೈನ್ ನಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಶ್ರೀಶೈಲಾ ಮೃತಪಟ್ಟಿದ್ದಾರೆ. ಲೈನ್​ ಮ್ಯಾನ್​…

Read Full News

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ 19 ವರ್ಷದ ಯುವಕನಿಗೆ 20 ವರ್ಷ ಜೈಲು,1ಲಕ್ಷ ದಂಡ ವಿಧಿಸಿದ ಕೋರ್ಟ್|POCSO

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಯುವಕನಿಗೆ ಶಿವಮೊಗ್ಗ  ನ್ಯಾಯಾಲಯ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಭದ್ರಾವತಿ ತಾಲೂಕಿನ 19 ವರ್ಷದ ಯುವಕನೊಬ್ಬ 6 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಇನ್ಸ್ ಪೆಕ್ಟರ್ ಲಕ್ಷ್ಮೀಪತಿ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ (ಪೋಕ್ಸೋ ವಿಭಾಗ) ನ್ಯಾಯಾಧೀಶರಾದ ನ್ಯಾ….

Read Full News

ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಹೊಸನಗರದ ಲಾಡ್ಜ್ ನಲ್ಲಿ ಸಾವು|real

ಹೊಸನಗರ : ಬೆಂಗಳೂರು ಜಿಲ್ಲೆಯ ಆಡುಗೋಡಿ ಆನೆಪಾಳ್ಯದ ರಿಯಲ್ ಎಸ್ಟೇಟ್ ಉದ್ಯಮಿ ಹೊಸನಗರದ ಖಾಸಗಿ ಲಾಡ್ಜ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ಮುನಿರಾಜು (48) ಬೆಂಗಳೂರು ಮೂಲದವರಾಗಿದ್ದು ಕುಟುಂಬ ಸಮೇತ ದೇವರ ದರ್ಶನಕ್ಕೆ ಬಂದಿದ್ದರು. ಜನವರಿ 4ರಂದು ಪುಣ್ಯಕ್ಷೇತ್ರಗಳ ಭೇಟಿಗೆ ಎಂದು ಪತ್ನಿ ಹಾಗೂ ಮಕ್ಕಳೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ಬೆಳಿಗ್ಗೆ ಹೊರಟು ಹೊರನಾಡು ಶೃಂಗೇರಿ ಕ್ಷೇತ್ರದ ದರ್ಶನ ಮಾಡಿ ಹೊಸನಗರ ಬರುವಾಗ ರಾತ್ರಿ ಆಗಿದ್ದ ಕಾರಣ ಪಟ್ಟಣದ ಖಾಸಗಿ ಲಾಡ್ಜ್ ನಲ್ಲಿ ರೂಮ್…

Read Full News

ವಿದ್ಯುತ್ ಕಂಬದಿಂದ ಬಿದ್ದು ಲೈನ್ ಮೆನ್ ಸಾವು !!! – ಸಕಾಲಕ್ಕೆ ಸಿಗದ ಆಂಬುಲೆನ್ಸ್ – ವ್ಯಾಪಕ ಆಕ್ರೋಶ..!!!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಲೈನ್ ಮೆನ್ ಕಂಬದಿಂದ ಬಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ಘಟನೆ ಗುರುವಾರ ನಡೆದಿದೆ.  ಘಟನೆಯಲ್ಲಿ ಮೃತಪಟ್ಟವರನ್ನು ರವಿ ನಾಯಕ(37) ಎಂದು  ಗುರುತಿಸಲಾಗಿದೆ. ಹೆದ್ದೂರು ಬಳಿ ಕೆಲಸ ಮಾಡುತ್ತಿರುವಾಗ ಕಂಬದಿಂದ ಬಿದ್ದಿದ್ದು ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಕಾರಿನಲ್ಲಿ ಕಟ್ಟೆಹಕ್ಕಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ಅಲ್ಲಿಂದ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲು ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಸಿಗದ ಕಾರಣ ಕಾರಿನಲ್ಲಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ…

Read Full News

ಆನಂದಪುರ ಸಮೀಪದಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ – ಇಬ್ಬರು ಯುವಕರು ಸ್ಥಳದಲ್ಲೇ ಸಾವು|accident

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಕಣ್ಣೂರು ಬಳಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ಗೌತಮಪುರ ನಿವಾಸಿಗಳಾದ ಪ್ರದೀಪ್ (25) ಹಾಗೂ ದಯಾನಂದ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂದಪುರದಿಂದ ಸಂತೆ ಮುಗಿಸಿಕೊಂಡು ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ  ಕಣ್ಣೂರು ಸಮೀಪ ನಿಂತಿದ್ದ ಲಾರಿಗೆ ಹಿಂಬದಿಯಿಂದಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದುಸೂಕ್ತ ಸೂಚನಾ ಫಲಕವಿಲ್ಲದೆ ಲಾರಿ ನಿಲ್ಲಿಸಿರುವುದಕ್ಕೆ ಆಕ್ರೋಶ…

Read Full News

ಯಡೂರು ಅಬ್ಬಿ ಫಾಲ್ಸ್ ನಲ್ಲಿ ಈಜಲು ತೆರಳಿದ್ದ ತೀರ್ಥಹಳ್ಳಿಯ ಯುವಕ ನೀರಲ್ಲಿ ಮುಳುಗಿ ಸಾವು|death

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯಡೂರು ಗ್ರಾಮದ ಅಬ್ಬಿ‌ಫಾಲ್ಸ್ ನಲ್ಲಿ ಈಜಲು ಹೋದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ಶಬರಿ ಹೋಟೆಲ್ ಮಾಲೀಕರ ಮಗ ರಿಷಬ್ (20) ಮೃತಪಟ್ಟ ಯುವಕನೆಂದು ತಿಳಿದುಬಂದಿದೆ. ಸಹ್ಯಾದ್ರಿ ಪಾಲಿಟೇಕ್ನಿಕ್ ನಲ್ಲಿ ಓದುತ್ತಿದ್ದ ರಿಷಬ್ ಇಂದು ಪರೀಕ್ಷೆ ಮುಗಿಸಿಕೊಂಡು ತನ್ನ ಇಬ್ಬರು ಸ್ನೇಹಿತರೊಂದಿಗೆ ಅಬ್ಬಿ ಫಾಲ್ಸ್ ಗೆ ಈಜಲು ತೆರಳಿದ್ದಾರೆ. ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಮೃತದೇಹವನ್ನು ಶೋಧ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹ…

Read Full News

ಎಕ್ಸಾಸ್ಟ್ ಫ್ಯಾನ್ ಮುರಿದು ಮನೆ ಕಳ್ಳತನ ಮಾಡಿದ್ದ ಆರೋಪಿಯ ಬಂಧನ – ಲಕ್ಷಗಟ್ಟಲೆ ವಸ್ತು ಸಮೇತ ಸಿಕ್ಕಿಬಿದ್ದ ಕಳ್ಳ|theft

ಮನೆಯಲ್ಲಿ ಯಾರೂ ಇಲ್ಲದ ವೇಳೆ ಎಗ್ಸಾಸ್ಟ್ ಫ್ಯಾನ್ ಮುರಿದು ಒಳ ನುಗ್ಗಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಒಟ್ಟು 8 ಮನೆ ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಚಿನ್ನಾಭರಣ ಸೇರಿ 7.77 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದ ಅಣ್ಣಾನಗರ 1ನೇ ಅಡ್ಡರಸ್ತೆಯ ನಿವಾಸಿ ಸದ್ದಾಂ (31) ಬಂಧಿತ.  ನ.28ರಂದು ಬಸವರಾಜಪ್ಪ ಅವರು ಪತ್ನಿಯೊಂದಿಗೆ ತಮ್ಮ ತೋಟಕ್ಕೆ ತೆರಳಿದ್ದರು. ಡಿ.2ರಂದು ಮರಳಿ ಬಂದಾಗ ಮನೆ ಬಾಗಿಲು ಹಾಕಿದಂತೆಯೆ ಇತ್ತು. ಬೆಡ್ ರೂಂಗೆ ಹೊದಾಗ ವಸ್ತುಗಳೆಲ್ಲ…

Read Full News

ಹೊಸನಗರದಲ್ಲಿ ಪ್ರಸನ್ನ ಭಟ್ ಪಾರ್ಥಿವ ಶರೀರದ ಮೆರವಣಿಗೆಗೆ ಸಕಲ ಸಿದ್ದತೆ|Prasanna bhat

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಭಾನುವಾರ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಸಂಸದ ಬಿ.ವೈ ರಾಘವೇಂದ್ರರವರ ಫೋಟೋಗ್ರಾಫರ್‌ ಪ್ರಸನ್ನ ಭಟ್‌ (26) ಪಾರ್ಥಿವ ಶರೀರ ಇಂದು ಸಂಜೆ 5 ಗಂಟೆಗೆ ಹೊಸನಗರ ಪಟ್ಟಣದಲ್ಲಿರುವ ಮೃತನ ಸ್ವಗೃಹ ತಲುಪಲಿದ್ದು ಇದಕ್ಕೂ ಮೊದಲು ಅಂತಿಮ ದರ್ಶನಕ್ಕೆ ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ದಯಾನಂದ ಸಾಗರ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆ ನಡೆದು ಈಗ ಶಿವಮೊಗ್ಗಕ್ಕೆ ಆ್ಯಂಬುಲೆನ್ಸ್ ಮೂಲಕ ಪ್ರಸನ್ನರ ಮೃತದೇಹ ಬರುತ್ತಿದ್ದು ಸುಮಾರು 4-15 ರಿಂದ…

Read Full News

ಹುಂಚಾ – ಮಾನಸಿಕ ಖಿನ್ನತೆಯಿಂದ ವ್ಯಕ್ತಿ ಆತ್ಮಹತ್ಯೆ|sucide

ಹುಂಚಾ : ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದಲ್ಲಿ ನಡೆದಿದೆ.  ತಿಮ್ಮಪ್ಪ ಜಿ ಡಿ (54) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ ಹಲವಾರು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದ ಇವರು ಮಾನಸಿಕ ಖಿನ್ನತೆಗೊಳಗಾಗಿದ್ದರು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಶೌಚಗೃಹದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕೊಂಡೊಯ್ಯಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ…

Read Full News

ನೀರುಪಾಲಾಗಿದ್ದ ಹೊಸನಗರದ ಯುವಕ ಪ್ರಸನ್ನ ಭಟ್ ಮೃತದೇಹ ಪತ್ತೆ|death

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾವತಿತೂರು ಕೆರೆಯಲ್ಲಿ ಈಜು ಹೊಡೆಯಲು ಹೋಗಿ ನೀರುಪಾಲಾಗಿದ್ದ ಪ್ರಸನ್ನ ಭಟ್ (26) ಮೃತ ದೇಹ ಪತ್ತೆಯಾಗಿದೆ. ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಭಟ್ ಹೊಸನಗರ ಪಟ್ಟಣದ ಗಣಪತಿ ದೇವಸ್ಥಾನದ ಅರ್ಚಕ ರೇಣುಭಟ್ ರವರ ಪುತ್ರ. ಸಂಜೆ ಕಾರಿನಲ್ಲಿ ಸ್ನೇಹಿತರ ಜೊತೆ ಬಂದಿದ್ದ ಪ್ರಸನ್ನ ಭಟ್ ಕೆರೆಗೆ ಈಜಲು ತೆರಳಿ ನೀರುಪಾಲಾಗಿದ್ದ.ರಾಮೇಶ್ವರಕ್ಕೆ ಹೊರಟಿದ್ದ ಪ್ರಸನ್ನ ಸಮಯವಿದ್ದ ಕಾರಣ ಸಹೋದರನ ಮನೆ ರಾಮನಗರದ ಕನಕಗಿರಿಗೆ ಹೋಗಿದ್ದರು. ಕನಕಪುರ…

Read Full News

ಹೊಸನಗರದ ಯುವಕ ಪ್ರಸನ್ನ ರಾಮನಗರದಲ್ಲಿ ನೀರುಪಾಲು – ತೀವ್ರ ಶೋಧ ಕಾರ್ಯಾಚರಣೆ|prasanna

ಹೊಸನಗರ ಮೂಲದ ಯುವಕನೊಬ್ಬ ರಾಮನಗರ ಜಿಲ್ಲೆಯ ಕನಕಗಿರಿ ಬಳಿಯ ಕೆರೆಯಲ್ಲಿ ನೀರುಪಾಲಾಗಿರುವ ಘಟನೆ ನಡೆದಿದೆ. ಹೊಸನಗರ ಟೌನ್ ನಿವಾಸಿ ಪ್ರಸನ್ನ ಭಟ್ ನೀರುಪಾಲಾಗಿರುವ ವ್ಯಕ್ತಿಯಾಗಿದ್ದಾರೆ. ಇಂದು ರಾಮಗನಗರದ ಜಿಲ್ಲೆಯ ಕನಕಗಿರಿಯ ಕೆರೆಗೆ ಸಹೋದರ ಕೌಶಿಕ್ ಜೊತೆ ಈಜಲು ತೆರಳಿದ್ದರು.ಈ ಸಂಧರ್ಭದಲ್ಲಿ ಈ ಅವಘಡ ನಡೆದಿದೆ. ಅಗ್ನಿಶಾಮಕ ದಳದಿಂದ ತೀವ್ರ ಶೋಧಕಾರ್ಯ ಮುಂದುವರೆದಿದೆ. ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ ವೈ ರಾಘವೇಂದ್ರ ರವರ ನೆಚ್ಚಿನ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಸಂಸದರು ಸಂಸತ್ ಇರುವ ಕಾರಣ ಕ್ಷೇತ್ರದಲ್ಲಿ ಇಲ್ಲದೇ ಇರುವುದರಿಂದ…

Read Full News

ಮಿಸ್ ಪೈರಿಂಗ್ ಪ್ರಕರಣ : ಗುಂಡು ತಗುಲಿದ್ದ ಯುವಕ ಸಾವು|miss fire

ಶಿವಮೊಗ್ಗ : ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾನೆ.  ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಆತ ಕೊನೆಯುಸಿರೆಳೆದಿದ್ದಾನೆ. ವಿದ್ಯಾನಗರದಲ್ಲಿ ಮಂಜುನಾಥ ಓಲೇಕಾರ್ ಅವರ ಮನೆಯಲ್ಲಿ ಘಟನೆ ಸಂಭವಿಸಿದೆ. 12 ಗಂಟೆಗೆ ಸಂಭ್ರಮಾಚರಣೆ ವೇಳೆ ಮಂಜುನಾಥ ಓಲೇಕರ್ ತಮ್ಮ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆದರೆ ಆ ಗುಂಡು ಮಂಜುನಾಥ ಓಲೇಕಾರ್ ಅವರ ಮಗನ ಸ್ನೇಹಿತ ವಿನಯ್ ಗೆ ತಗುಲಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಿನಯ್ ನನ್ನು ಮ್ಯಾಕ್ಸ್…

Read Full News

ಹೊಸವರ್ಷದ ಪಾರ್ಟಿಯಲ್ಲಿ ಗನ್ ಫೈರ್ – ಯುವಕನಿಗೆ ಗಾಯ : ಗುಂಡು ಹಾರಿಸಿದ ವ್ಯಕ್ತಿ ಸಾವು|miss fire

ಶಿವಮೊಗ್ಗ : ಹೊಸ ವರ್ಷದ ಪಾರ್ಟಿ ವೇಳೆ ಗುಂಡು ತಗುಲಿ ಯುವಕನೊಬ್ಬ ಗಾಯಗೊಂಡಿದ್ದಾನೆ. ಗುಂಡು ಹಾರಿಸಿದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ವಿದ್ಯಾನಗರದಲ್ಲಿರುವ ಮಂಜುನಾಥ ಓಲೇಕರ್ ಎಂಬುವವರ ಮನೆಯಲ್ಲಿ ಪಾರ್ಟಿ ನಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಕುಟುಂಬದವರೊಂದಿಗೆ ಹೊಸ ವರ್ಷಾಚರಣೆ ಮಾಡುತ್ತಿದ್ದರು.  ಸರಿಯಾಗಿ 12 ಗಂಟೆಗೆ ಮಂಜುನಾಥ ಓಲೇಕರ್ ಅವರು ತಮ್ಮ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮಂಜುನಾಥ ಓಲೇಕರ್ ಅವರು ಹಾರಿಸಿದ ಗುಂಡು ಮಿಸ್ ಫೈರ್ ಆಗಿದೆ. ಪಾರ್ಟಿ ಮಾಡುತ್ತಿದ್ದ ಯುವಕನಿಗೆ…

Read Full News

ರಿಪ್ಪನ್‌ಪೇಟೆ : ಮನೆ ಬೀಗ ಮುರಿದು ಕಳ್ಳತನ ನಡೆಸಿ – ಮನೆ ಮುಂಭಾಗವಿದ್ದ ಕಾರನ್ನು ಕದ್ದೊಯ್ದ ಕಳ್ಳರು|theft

ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ಜ್ಯೋತಿ ಮಾಂಗಲ್ಯ ಮಂದಿರದ ಸಮೀಪ ತಡರಾತ್ರಿ ಮನೆ ಬಾಗಿಲು ಮುರಿದು ಕಳ್ಳತನ ನಡೆಸಿ ಮನೆ ಮುಂದೆ ನಿಲ್ಲಿಸಿದ್ದ ಕಾರು ಕದ್ದೊಯ್ದಿರುವ ಘಟನೆ ನಡೆದಿದೆ. ಜ್ಯೋತಿ ಮಾಂಗಲ್ಯ ಮಂದಿರ ಸಮೀಪದ ಕೋಳಿ ಫಾರಂ ಪಕ್ಕದಲ್ಲಿರುವ ಹರೀಶ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಗಮನಿಸಿದ ಕಳ್ಳರು ಶುಕ್ರವಾರ ತಡರಾತ್ರಿ ಮನೆ ಮುಂದಿನ ಗೇಟ್ ಬೀಗ ಒಡೆದು ನಂತರ ಮನೆಯ ಬಾಗಿಲು ಮುರಿದು ಕಳ್ಳತನ ನಡೆಸುವುದರ ಜೊತೆಗೆ…

Read Full News

ಸಾಗರದಲ್ಲಿ ವಿದ್ಯಾರ್ಥಿನಿಯರ ಮೇಲೆ ಟಿಪ್ಪರ್ ಹರಿದ ಘಟನೆ | ಟಿಪ್ಪರ್ ಚಾಲಕನಾಗಿದ್ದ ಕೃಷ್ಣಾಚಾರಿ ಸಾವು|sagara

ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ನಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ, ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ್ದರು.ಆ ಅಪಘಾತದಲ್ಲಿ ಟಿಪ್ಪರ್ ಚಾಲಕನಾಗಿದ್ದ ಕೃಷ್ಣಾಚಾರಿಯವರು ಸಾವನ್ನಪ್ಪಿದ್ಧಾರೆ.  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಣ್ಣಮನೆ ಸೇತುವೆ ಬಳಿ ಜೋಗದ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಈ ಆಕ್ಸಿಡೆಂಟ್​ನಲ್ಲಿ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಯ್ತಾದರೂ, ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.  ಈ ಘಟನೆಯ ಬೆನ್ನಲ್ಲೆ ಸಾರ್ವಜನಿಕರು ಚಾಲಕನ ವಿರುದ್ಧ ಆಕ್ರೋಶ ಹೊರಹಾಕಿದ್ದರು.  ಇದರ ಬೆನ್ನಲ್ಲೆ ನಿನ್ನೆ ಅನಾರೋಗ್ಯ…

Read Full News

ಹೆದ್ದಾರಿ ಅಗಲೀಕರಣ ಅಧಿಕಾರಿಗಳ ಎಡವಟ್ಟು – ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣ : ಓರ್ವ ಗಂಭೀರ|accident

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸದ್ಯ ರಸ್ತೆ ಅಗಲೀಕರಣ ಕಾಮಗಾರಿ ಜೋರಾಗಿ ನಡೆಯುತ್ತಿದೆ.ಶಾಸಕ ಹರತಾಳು ಹಾಲಪ್ಪ ರವರ ಅಣತಿಯಂತೆ ಕಾಮಗಾರಿಯು ವೇಗವಾಗಿ ನಡೆಯುತ್ತಿದ್ದೆಯಾದರೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಇಂದು ರಸ್ತೆ ಅಗಲೀಕರಣ ಅವಾಂತರ ದಿಂದ ಎರಡು ಅಪಘಾತಗಳಾಗಿದೆ. ಒಂದು ಘಟನೆ ಗಣಪತಿ ಕೆರೆಯ ಬಳಿಯಲ್ಲಿ ಸಂಭವಿಸಿದರೆ, ಇನ್ನೊಂದು ಘಟನೆ ಬಸವನ ಹೊಳೆ ಬಳಿ ಸಂಭವಿಸಿದೆ.  ಬೈಕ್ ಅಪಘಾತ : ಇಂದು ಬೆಳಿಗ್ಗೆ ಟಿವಿಎಸ್​ ಎಕ್ಸ್​ಲ್ ಹಾಗೂ ಇನ್ನೊಂದು ಬೈಕ್​ನ ನಡುವೆ…

Read Full News

ವರದಕ್ಷಿಣೆ ಕಿರುಕುಳ : ನವವಿವಾಹಿತೆ ಆತ್ಮಹತ್ಯೆ|sucide

ವರದಕ್ಷಿಣೆ ಕಿರುಕುಳದಿಂದ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ದಿಗಟೆಕೊಪ್ಪ ಗ್ರಾಮದಲ್ಲಿ ನಡೆದಿದೆ. ದಿಗಟೆಕೊಪ್ಪ ಗ್ರಾಮದ  23ವರ್ಷದ ಸುಶ್ಮಿತಾ ನೇಣಿಗೆ ಶರಣಾದ ಗೃಹಿಣಿಯಾಗಿದ್ದಾರೆ.ಕಳೆದ ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ಮೃತ ಸುಷ್ಮಿತಾ ಮನೆಯ ಶೌಚಗೃಹದಲ್ಲಿ ವೇಲ್ ನಿಂದ ನೇಣಿಗೆ ಶರಣಾಗಿದ್ದು, ಈ ಸಂಬಂಧ ಪತಿ ಹಾಗೂ ಅತ್ತೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನ ಮಗಳಿಗೆ ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮೃತಳ ತಂದೆ…

Read Full News

ಆನಂದಪುರ ಸುತ್ತಮುತ್ತ ಪ್ರತ್ಯೇಕ ಮೂರು ರಸ್ತೆ ಅಪಘಾತ ಪ್ರಕರಣ – ಓರ್ವ ಸಾವು|accident

ಘಟನೆ 1: ಆನಂದಪುರ ಸಮೀಪ ಕೆ ಎಸ್ಆರ್ ಟಿ ಸಿ ಬಸ್ ಹಾಗೂ ಟೂರಿಸ್ಟ್ ಬಸ್ ನಡುವೆ ಮುಖಾಮುಖಿ ಡಿಕ್ಕಿ…!!! ಸಾಗರ ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪದ ಬಳಿ  ಬೆಳ್ಳಂ ಬೆಳಗ್ಗೆ ಕೆ ಎಸ್ ಆರ್ ಟಿ ಸಿ ಹಾಗೂ ಟೂರಿಸ್ಟ್ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೆಂಗಳೂರಿನಿಂದ ಪ್ರವಾಸಕ್ಕೆಂದು ಜೋಗ ವೀಕ್ಷಣೆಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ…

Read Full News

ಹುಂಚ : ಬೈಕ್‌ ನಿಲ್ಲಿಸಿ ಕೆರೆಗೆ ಹಾರಿದ ಯುವಕ – ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಕಾರ್ಯಾಚರಣೆ – ಶವ ಪತ್ತೆ|Crime news

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಮುತ್ತಿನಕೆರೆಯ ಬಳಿ ಯುವಕನೊಬ್ಬ ಬೈಕ್ ನಿಲ್ಲಿಸಿ ಕೆರೆಗೆ ಹಾರಿ ಮೃತಪಟ್ಟಿರುವ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಹುಂಚ ಸಮೀಪದ ಮುತ್ತಿನಕೆರೆ ಬಳಿ ಯುವಕನೊಬ್ಬ ತನ್ನ ಬೈಕ್ ಹಾಗೂ ಪಾದರಕ್ಷೆಗಳನ್ನು ಬಿಟ್ಟು ಕೆರೆಗೆ ಹಾರಿದ ಘಟನೆ ನಡೆದಿತ್ತು ಬೆಳಿಗ್ಗೆ ಬೈಕ್ ಹಾಗೂ ಪಾದರಕ್ಷೆಗಳನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಕೆರೆಯಲ್ಲಿ ಇಂದು ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶವ ಪತ್ತೆ ಹಚ್ಚಿದ್ದಾರೆ. ಮೃತ…

Read Full News

ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹರಿದ ಟಿಪ್ಪರ್ ಲಾರಿ – ಅಪಘಾತದ ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ|CCTV

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಣ್ಣಮನೆ ಸೇತುವೆ ಬಳಿ ಜೋಗದ ರಸ್ತೆಯಲ್ಲಿ ನಿನ್ನೆ ಬೆಳಗ್ಗೆಯೇ ಭೀಕರ ಅಪಘಾತದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಈ ಅಪಘಾತದಲ್ಲಿ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಅವರಿಗೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಪ್ರತಿಮಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.  ಇದೀಗ ಘಟನೆಯ ಸಿಸಿ ಟಿವಿ ದೃಶ್ಯವೊಂದು ಲಭ್ಯವಾಗಿದ್ದು, ದೃಶ್ಯದಲ್ಲಿ ಟ್ರಾಫಿಕ್​ನ ನಡುವೆ ಎಡಬದಿಯಲ್ಲಿ ನುಗ್ಗಿ ಬಂದ ಲಾರಿ, ತಮ್ಮ ಪಾಡಿಗೆ ರಸ್ತೆ ಬದಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿರುವ ದೃಶ್ಯ …

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.