Headlines

ಚಲಿಸುತಿದ್ದ ಬೈಕ್‌ ಮೇಲೆ ಮರ ಬಿದ್ದು ಓರ್ವ ಸಾವು ಇನ್ನಿಬ್ಬರು ಗಂಭೀರ|crime news

ಚಲಿಸುತಿದ್ದ ಬೈಕ್‌ ಮೇಲೆ ಮರ ಬಿದ್ದು ಓರ್ವ ಸಾವು ಇನ್ನಿಬ್ಬರು ಗಂಭೀರ ಶಿವಮೊಗ್ಗ : ಯಲವಟ್ಟಿ ಗ್ರಾಮದಲ್ಲಿ ಮರವೊಂದನ್ನು ಕಟಾವು ಮಾಡುವ ವೇಳೆ ಚಲಿಸುತಿದ್ದ ಬೈಕ್ ಮೇಲೆ ಮರ ಬಿದ್ದ ಕಾರಣ ಬೈಕ್ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು ಓರ್ವ ಸಾವು ಕಂಡಿದ್ದಾರೆ. ಯಲವಟ್ಟಿಯ ಖಾಸಗಿ ತೋಟದಲ್ಲಿದ್ದ ಮರ ಕಡಿಯುವ ವೇಳೆ ಮುಂಜಾಗೃತ ಕ್ರಮ ಕೈಗೊಳ್ಳದ ಪರಿಣಾಮ ಚಲಿಸುತಿದ್ದ ಬೈಕ್ ಮೇಲೆ ಮರ ಬಿದ್ದಿದೆ. ಬೈಕ್ ನಲ್ಲಿದ್ದ ಓರ್ವ ಮೃತಪಟ್ಟು ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೂವರಲ್ಲಿ…

Read Full News

ಮನೆ ಮುಂದೆ ಆಟವಾಡುತಿದ್ದ ಬಾಲಕನ ಮೇಲೆ ಎರಗಿದ ಬೀದಿನಾಯಿಗಳು – KSRTC ಬಸ್ ನಲ್ಲಿ ಯುವಕನ ಪುಂಡಾಟಿಕೆ

ಮನೆ ಮುಂದೆ ಆಟವಾಡುತಿದ್ದ ಬಾಲಕನ ಮೇಲೆ ಎರಗಿದ ಬೀದಿನಾಯಿಗಳು ಸಾಗರ : ಇಲ್ಲಿನ ನಗರ ಸಭಾ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಆದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಇಲ್ಲದಂತಾಗಿದೆ ಎಂದು ಜನರು ದೂರುತ್ತಿದ್ದಾರೆ. ಈ ನಡುವೆ ಬೀದಿನಾಯಿಗಳು ದಾಳಿ ನಡೆಸಿ ಬಾಲಕನೊಬ್ಬನ ಮುಖಕ್ಕೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಬಾಲಕನೊಬ್ಬ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆಯಲ್ಲಿ ಬೀದಿ ನಾಯಿಗಳು ದಾಳಿ ಮಾಡಿದ್ದು, ಆತನನ್ನ ಅಟ್ಟಾಡಿಸಿ ಆತನ ಮುಖಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ.  ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಪಡೆದುಕೊಂಡು ಭಯಬೀತನಾಗಿ …

Read Full News

ಶಿವಮೊಗ್ಗದಲ್ಲಿ ಯಾವುದೇ ಎನ್‌ಕೌಂಟರ್‌ ನಡೆದಿಲ್ಲ,ಅದೆಲ್ಲಾ ಸುಳ್ಳು ಸುದ್ದಿ: ಎಸ್ಪಿ ಸ್ಪಷ್ಟನೆ|smg riots

ಶಿವಮೊಗ್ಗದಲ್ಲಿ ಯಾವುದೇ ಎನ್‌ಕೌಂಟರ್‌ ನಡೆದಿಲ್ಲ,ಅದೆಲ್ಲಾ ಸುಳ್ಳು ಸುದ್ದಿ: ಎಸ್ಪಿ ಸ್ಪಷ್ಟನೆ ಶಿವಮೊಗ್ಗ: ರಾಗಿಗುಡ್ಡದಲ್ಲಿ ಮಿಲಾದುನ್ನಬಿ ಮೆರವಣಿಗೆ ವೇಳೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ಸುಳ್ಳು‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ‘ರಾಗಿಗುಡ್ಡದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಪೊಲೀಸರಿಂದ ಎನ್‌ಕೌಂಟರ್‌ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದವರ…

Read Full News

ರಿಪ್ಪನ್‌ಪೇಟೆ : ಉತ್ತಮ ಶಿಕ್ಷಕಿಯರಿಗೆ ಗ್ರಾಪಂ ವತಿಯಿಂದ ಸನ್ಮಾನ|honour

ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಪಂ ಸಭಾಂಗಣದಲ್ಲಿ ತಾಲೂಕ್ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಇಬ್ಬರು ಶಿಕ್ಷಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆಂಚನಾಲ ಗ್ರಾಮ ಪಂಚಾಯತ್ ನಲ್ಲಿ ಸೋಮವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ತಾಲೂಕ್ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗ್ರಾಪಂ ವ್ಯಾಪ್ತಿಯ ಚಂದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಾಜುನ್ ಬಿ ಹಾಗೂ ಕೆಂಚನಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭಾಗ್ಯಲಕ್ಷ್ಮಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್…

Read Full News

ಸಾಗರದಲ್ಲಿ ಈದ್ ಮೆರವಣಿಗೆ ವೇಳೆ ಆಕ್ಷೇಪಾರ್ಹ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಹಿಂಜಾವೇ ಆಗ್ರಹ|sagara

ಈದ್ ಮೆರವಣಿಗೆ ವೇಳೆ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ ಸಾಗರ ಪಟ್ಟಣದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ರಚೋದನಾಕಾರಿ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ಡಿವೈಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ಎಚ್.ಸುಧೀಂದ್ರ, ಪವಿತ್ರವಾದ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲೀಂ ಸಮುದಾಯ ಸೋಮವಾರ ಬೃಹತ್ ಮೆರವಣಿಗೆ ಹಮ್ಮಿಕೊಂಡಿತ್ತು. ಮೆರವಣಿಗೆಯಲ್ಲಿ ಹಿಂದೂ ಸಮುದಾಯದ ತೇಜೋವಧೆ ಮಾಡುವ…

Read Full News

ತೀರ್ಥಹಳ್ಳಿಯ ಛತ್ರಕೇರಿ ಗಣಪತಿ ವಿಸರ್ಜನೆಯಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆ|tth

ತೀರ್ಥಹಳ್ಳಿಯಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆ  ತೀರ್ಥಹಳ್ಳಿ : ಶಾಂತಿ,ಸೌಹಾರ್ಧತೆಗೆ ಹೆಸರಾದ ಊರು ಎಂದರೆ ತೀರ್ಥಹಳ್ಳಿ ಈ ಹೆಸರೇ ಎಲ್ಲರಿಗೂ ಅಚ್ಚು ಮೆಚ್ಚು. ಈ ನಡುವೆ – ತೀರ್ಥಹಳ್ಳಿಯಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದತೆ ಮೆರೆದಿದ್ದಾರೆ. ಹೌದು.ಸೋಮವಾರ ಛತ್ರಕೆರಿ ಗಣಪತಿ ವಿಸರ್ಜನೆ ವೇಳೆ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸೀಬಿನಕೆರೆ ಸರ್ಕಲ್ ನಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಅಂಗವಾಗಿ ತಿಂಡಿ ಉಪಹಾರದ ವ್ಯವಸ್ಥೆ – ಮಾಡಿದ್ದು, ಎಲ್ಲರೂ ಸೌಹಾರ್ದಯುತವಾಗಿ ಹಬ್ಬದಲ್ಲಿ ಪಾಲ್ಗೊಂಡರು. ಗಣೇಶ ಹಬ್ಬ ಹಾಗೂ…

Read Full News

ಶಿವಮೊಗ್ಗ ಕಲ್ಲು ತೂರಾಟ ಪ್ರಕರಣ – ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಸಂಸದ ಬಿವೈಆರ್ ಹೇಳಿದ್ದೇನು..!!??|SMG

ಶಿವಮೊಗ್ಗ ಕಲ್ಲು ತೂರಾಟ ಪ್ರಕರಣ – ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಸಂಸದ ಬಿವೈಆರ್ ಹೇಳಿದ್ದೇನು..!!?? ಸಮಾಜದಲ್ಲಿ ಶಾಂತಿಯನ್ನು ಕದಡುವವರು ಮತ್ತು ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು. ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಶಿವಮೊಗ್ಗ ನಗರದಲ್ಲಿ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು,…

Read Full News

ರಾಗಿಗುಡ್ಡದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ!!! 30 ಕ್ಕೂ ಹೆಚ್ಚು ಮಂದಿ ವಶಕ್ಕೆ! ಘಟನೆ ಬಗ್ಗೆ ಎಸ್​ಪಿ ಮತ್ತು ಶಾಸಕರು ಹೇಳಿದ್ದೇನು?

ರಾಗಿಗುಡ್ಡದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ!!! 30 ಕ್ಕೂ ಹೆಚ್ಚು ಮಂದಿ ವಶಕ್ಕೆ! ಘಟನೆ ಬಗ್ಗೆ ಎಸ್​ಪಿ ಮತ್ತು ಶಾಸಕರು ಹೇಳಿದ್ದೇನು? ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಿನ್ನೆ ಪೊಲೀಸರ ಮೇಲೆಯೇ ನಡೆದ ಕಲ್ಲೂ ತೂರಾಟ  ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಇದುವರೆಗೂ 30 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗಕ್ಕೆ ಹಿರಿಯ ಅಧಿಕಾರಿ ಮುರುಗನ್ ಆಗಮಿಸಿದ್ದಾರೆ ಎನ್ನಲಾಗಿದ್ದು, ಎಡಿಜಿಪಿ ಹಿತೇಂದ್ರ ಕೂಡ ಇವತ್ತು ಆಗಮಿಸುವ ಸಾದ್ಯತೆ ಇದೆ.   ನಿನ್ನೆ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಸಂಬಂಧ ಪೊಲೀಸರು…

Read Full News

ಪಂಚಭೂತಗಳಲ್ಲಿ ವಿನಾಯಕ ಶೆಟ್ಟಿ ಲೀನ – ಕಣ್ಣೀರಿನ ವಿದಾಯ ಹೇಳಿದ ಸ್ನೇಹ ಬಳಗ|funeral

ರಿಪ್ಪನ್‌ಪೇಟೆ : ಪಟ್ಟಣದ ಕನ್ನಡಪರ ಹೋರಾಟಗಾರ ವಿನಾಯಕ್ ಶೆಟ್ಟಿ ಇನ್ನು ನೆನಪು ಮಾತ್ರ.ಇಂದು ಮುಂಜಾನೆ ಹೃದಯಾಘಾತಕ್ಕೊಳಗಾಗಿ ವಿನಾಯಕ್ ಶೆಟ್ಟಿ ಕೊನೆಯುಸಿರೆಳೆದ ಸುದ್ದಿ ಅವರ ಅಪಾರ ಸ್ನೇಹ ಬಳಗದ ಅಘಾತಕ್ಕೆ ಕಾರಣವಾಗಿತ್ತು.  ಸಾಗರ ರಸ್ತೆಯ ಭಗತ್ ಸಿಂಗ್ ಕಾಲೋನಿಯಲ್ಲಿರುವ ಮೃತರ ನಿವಾಸದಲ್ಲಿ ಇಂದು ಮುಂಜಾನೆಯಿಂದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅಂತ್ಯಸಂಸ್ಕಾರ ನೆರವೇರಿದ್ದು, ಪಂಚಭೂತಗಳಲ್ಲಿ ವಿನಾಯಕ ಶೆಟ್ಟಿ ಲೀನರಾಗಿದ್ದಾರೆ. ವಿನಾಯಕ್ ಶೆಟ್ಟಿ ಆಡಿ, ಬೆಳೆದ ಮನೆಯ ಮುಂಭಾಗದಲ್ಲಿ ಸಹೋದರ ವಿಕ್ರಮ್ ಶೆಟ್ಟಿ ಅಂತಿಮ ವಿಧಿ-ವಿಧಾನ ನೆರವೇರಿಸಿದರು ಈ…

Read Full News

ನರಿಯನ್ನು ಭೇಟೆಯಾಡಿದ ಭಾರಿ ಗಾತ್ರದ ಹೆಬ್ಬಾವು|python

ನರಿಯನ್ನು ಹಿಡಿದ ಹೆಬ್ಬಾವು…!  ಸಾಗರ: ಹೆಬ್ಬಾವೊಂದು ನರಿಯನ್ನು ಹಿಡಿದ ಘಟನೆ ಐ. ಟಿ. ಐ ಕಾಲೇಜ್ ಹತ್ತಿರ ನಡೆದಿದ್ದು, ಹೆಬ್ಬಾವು ನರಿಯನ್ನು ಹಿಡಿದಿರುವ ದೃಶ್ಯ ವೈರಲಾಗಿದೆ. ತಾಲೂಕಿನ ರಾಮನಗರದ ಸಮೀಪದ ಐ. ಟಿ. ಐ ಕಾಲೇಜ್ ಸಮೀಪ ಹೆಬ್ಬಾವು ನರಿಯನ್ನು ಹಿಡಿದು ತನ್ನ ದೇಹದಿಂದ ಸುತ್ತಿಕೊಂಡು ಸಾಯಿಸಿದೆ. ಇದನ್ನು ಸ್ಥಳೀಯರು ನೋಡಿ ಸ್ನೇಕ್ ಅನುಪ ಅವರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಅರಣ್ಯ ಅಧಿಕಾರಿಗಳ ಜೊತೆಗೆ ಆಗಮಿಸಿ ಹೆಬ್ಬಾವಿನ ರಕ್ಷಣೆ ಮಾಡಿದ್ದಾರೆ. ನಂತರ ಹೆಬ್ಬಾವನ್ನು ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.

Read Full News

ಭಾವೈಕ್ಯತೆಗೆ ಸಾಕ್ಷಿಯಾದ ಶಿರಾಳಕೊಪ್ಪ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ|rally

ಭಾವೈಕ್ಯತೆಗೆ ಸಾಕ್ಷಿಯಾದ ಶಿರಾಳಕೊಪ್ಪ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಸೌಹಾರ್ದತೆಗೆ ಸಾಕ್ಷಿಯಾಗಿತ್ತು.ಇಲ್ಲಿನ ಗಣಪತಿ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂರು ಇಬ್ಬರೂ ಮೆರವಣಿಗೆ ಭಾಗಿಯಾಗಿ ಭಾವೈಕ್ಯತೆ ಮೆರೆದಿದ್ದಾರೆ. ಶಿರಾಳಕೊಪ್ಪದಲ್ಲಿ ಹಿಂದು ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಇಂದು ವಿಸರ್ಜಿಸಲಾಗುತ್ತಿದೆ.ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾವೈಕ್ಯತೆ ಮೆರೆಯಲಾಗಿದೆ. ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ  ಮುಸ್ಲಿಂ ಭಾಂಧವರು, ಹಿಂದು ಯುವಕರ ಜೊತೆ ಕುಣಿದು ಕುಪ್ಪಳಿಸಿದ್ದಾರೆ.ಈ ಮೆರವಣಿಗೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.

Read Full News

ಶಾಸಕ ಬೇಳೂರು ಗೋಪಾಲಕೃಷ್ಣ ಪ್ಲೆಕ್ಸ್ ಹರಿದು ವಿಕೃತಿ ಮೆರೆದ ಕಿಡಿಗೇಡಿಗಳು|GKb

ಶಾಸಕ ಬೇಳೂರು ಗೋಪಾಲಕೃಷ್ಣ ಪ್ಲೆಕ್ಸ್ ಹರಿದು ವಿಕೃತಿ ಮೆರೆದ ಕಿಡಿಗೇಡಿಗಳು ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೋಡೂರು ಗ್ರಾಪಂ ವ್ಯಾಪ್ತಿಯ ಅಮ್ಮನಘಟ್ಟ ದೇವಸ್ಥಾನದ ಬಳಿ ಜಾತ್ರಾ ಮಹೋತ್ಸವಕ್ಕೆ ಶುಭಾಶಯ ಕೋರಿ ಹಾಕಿದ್ದ  ಪ್ಲೆಕ್ಸ್ ನ್ನು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ನಡೆದಿದ್ದೇನು..??? ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಆರಂಭವಾಗಿದ್ದು ಆ ಹಿನ್ನಲೆಯಲ್ಲಿ ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಶುಭಾಶಯ ಕೋರಿ ಹಾಕಿದ್ದ ಪ್ಲೆಕ್ಸ್ ನ್ನು…

Read Full News

ಶಿವಮೊಗ್ಗದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ – ಬಂದ್ ಗೆ ನೀರಸ ಪ್ರತಿಕ್ರಿಯೆ|kaveri issue

ಶಿವಮೊಗ್ಗದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ – ಬಂದ್ ಗೆ ನೀರಸ ಪ್ರತಿಕ್ರಿಯೆ ಶಿವಮೊಗ್ಗ : ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಅಶೋಕ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬೆಳ್ಳಂಬೆಳಗ್ಗೆ ಕಾವೇರಿ ಹೋರಾಟ ನಡೆಸಿದ ಕನ್ನಡ ಪರ ಸಂಘಟನೆಗಳು, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಕರವೇ ಹಾಗೂ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಾವೇರಿ ನಮ್ಮದು, ಕಾವೇರಿ…

Read Full News

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್ ಎಂ ಮಂಜುನಾಥ್ ಗೌಡ ಅವಿರೋಧ ಆಯ್ಕೆ|RMM

ಶಿವಮೊಗ್ಗ :  ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ಆರ್‌ಎಂ ಮಂಜುನಾಥ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಆರ್ ಎಂ ಮಂಜುನಾಥ್ ಹೊರತುಪಡಿಸಿ ಬೇರೆ ಯಾರು ಕೂಡ ನಾಮಪತ್ರ ಸಲ್ಲಿಕೆ ಮಾಡಿದ ಕಾರಣ ಮಂಜುನಾಥ್ ಗೌಡ ರವರೇ ಆವಿರೋಧವಾಗಿ ಆಯ್ಕೆಯಾದರು. ಇನ್ನೂ ಈ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಚೆನ್ನವೀರಪ್ಪ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಇತ್ತೀಚಿಗಷ್ಟೇ ಕೆಳಗಿಳಿಸಲಾಗಿತ್ತು.  2021 ರಲ್ಲಿ ನಕಲಿ ಬಂಗಾರ ಪ್ರಕರಣದಲ್ಲಿ…

Read Full News

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರು ವಿಚಲಿತರಾಗುವ ಅಗತ್ಯವಿಲ್ಲ – ಅರ್ ಎ ಚಾಬುಸಾಬ್|jds

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರು ವಿಚಲಿತರಾಗುವ ಅಗತ್ಯವಿಲ್ಲ – ಅರ್ ಎ ಚಾಬುಸಾಬ್ ರಿಪ್ಪನ್‌ಪೇಟೆ : ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ರಾಜ್ಯದಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷವು ಚುನಾವಣಾ ಮೈತ್ರಿ ಮಾಡಿಕೊಂಡಿರುವುದರಿಂದ ಹಿಂದಿನಿಂದಲೂ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿರುವ ರಾಜ್ಯದ ಬಹುಪಾಲು ಅಲ್ಪಸಂಖ್ಯಾತರು ವಿಚಲಿತವಾಗುವ ಅಗತ್ಯವಿಲ್ಲ. ರಾಷ್ಟ್ರೀಯತೆಯ ಜೊತೆಗೆ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸುವುದು ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ. ದೇವೇಗೌಡರ ಉದ್ದೇಶವಾಗಿದೆ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾದ ಆರ್‌.ಎ, ಚಾಬುಸಾಬ್ ತಿಳಿಸಿದ್ದಾರೆ. ಪಟ್ಟಣದಲ್ಲಿ ಪತ್ರೀಕಾಗೋಷ್ಟಿ ನಡೆಸಿ ಮಾತನಾಡಿದ…

Read Full News

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿ : ಶಾಸಕ ಗೋಪಾಲಕೃಷ್ಣ ಬೇಳೂರು|gkb

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿ  : ಗೋಪಾಲಕೃಷ್ಣ ಬೇಳೂರು ರಿಪ್ಪನ್ ಪೇಟೆ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರತಿಭೆಯನ್ನು ಹೊಂದಿದ್ದಾರೆ ಆದರೆ ಅವರುಗಳಿಗೆ ಅವಕಾಶಗಳು ಸಿಗುತ್ತಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉಪನ್ಯಾಸಕರುಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೊಸನಗರ- ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ  ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು…

Read Full News

ರಿಪ್ಪನ್‌ಪೇಟೆ : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಹೇಗಿದೆ ಪೊಲೀಸ್ ಬಂದೋಬಸ್ತ್ ,ಮೆರವಣಿಗೆಯ ಸಿದ್ಧತೆ..??HMS

ರಿಪ್ಪನ್‌ಪೇಟೆ(Ripponpet) : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಹೇಗಿದೆ ಪೊಲೀಸ್ ಬಂದೋಬಸ್ತ್ ,ಮೆರವಣಿಗೆಯ ಸಿದ್ಧತೆ? ರಿಪ್ಪನ್‌ಪೇಟೆ : ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ(HMS) ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು,ಪಟ್ಟಣದಾದ್ಯಂತ ಕೇಸರಿಮಯವಾಗಿದೆ. ಇನ್ನು, ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್ತ್‌ (Bandobast) ಕೈಗೊಳ್ಳಲಾಗಿದೆ. ಪಟ್ಟಣದ ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ವತಿಯಿಂದ 56ನೇ ವರ್ಷದ  ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.ಗುರುವಾರ ಗಣಪತಿಯ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಹಿಂದೂ ಕಾರ್ಯಕರ್ತರು ಅದ್ಧೂರಿ ಸಿದ್ಧತೆ ಮಾಡಿಕೊಂಡಿದ್ದಾರೆ.ಗುರುವಾರ ಸಂಜೆ ಮೆರವಣಿಗೆ ಹೊರಟು…

Read Full News

ಮೂಗೂಡ್ತಿಯಲ್ಲಿ ಪೋಷಣ್ ಅಭಿಯಾನ್ ಮಾಸಾಚರಣೆ|rpt news

“ಹಣ್ಣು ಹಸಿ ತರಕಾರಿ ಸೇವನೆಯಿಂದ ಗರ್ಭೀಣಿಯರಲ್ಲಿ ರಕ್ತಹೀನತೆ ದೂರ’’ ರಿಪ್ಪನ್‌ಪೇಟೆ : ರಕ್ತಹೀನತೆಯಿಂದ ಬಳಲುವ ಗರ್ಭೀಣಿಯರು ಸೇರಿದಂತೆ ಇತರೆ ಎಲ್ಲರೂ ಪಾಷ್ಟಿಕಾಂಶದ ಹಣ್ಣು ಹಸಿ ತರಕಾರಿ ಸೇವಿಸುವುದರಿಂದ ಉತ್ತಮ ಅರೋಗ್ಯದಿಂದ ಇರುವುದರೊಂದಿಗೆ ರಕ್ತ ಹೀನತೆಯಿಂದ ಮುಕ್ತರಾಗಲು ಸಾಧ್ಯವೆಂದು ಹೊಸನಗರ ತಾಲ್ಲೂಕ್ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಆಧಿಕಾರಿ ಶಶಿರೇಖಾ ಕರೆ ನೀಡಿದರು. ಪಟ್ಟಣದ ಸಮೀಪದ ಮೂಗುಡ್ತಿ ಆಂಗನವಾಡಿ ಕೇಂದ್ರದಲ್ಲಿ ಅಯೋಜಿಸಲಾದ ಪೋಷಣ್ ಆಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ರೈತರು ರಾಸಾಯನಿಕ ಗೊಬ್ಬರ…

Read Full News

ರಿಪ್ಪನ್‌ಪೇಟೆ : ಗಣೇಶನ ಸಮ್ಮುಖದಲ್ಲಿ ಭಕ್ತಾಕರ್ಷಣೆಗೊಂಡ ಕೋಲಾಟ ನೃತ್ಯ ಪ್ರದರ್ಶನ|Rpet news

ಗಣೇಶನ ಸಮ್ಮುಖದಲ್ಲಿ ಭಕ್ತಾಕರ್ಷಣೆಗೊಂಡ ಕೋಲಾಟ ನೃತ್ಯ ಪ್ರದರ್ಶನ ರಿಪ್ಪನ್‌ಪೇಟೆ;-ಗ್ರಾಮೀಣ ಪ್ರದೇಶದಲ್ಲಿ ಹಾಸುಹೊಕ್ಕಾಗಿರುವ ಜಾನಪದ ಕಲೆಗಳಲ್ಲಿ ಒಂದಾದ ವಿವಿಧ ಭಂಗಿಯ ಕೋಲಾಟ ಪ್ರದರ್ಶನವು ಭಕ್ತಾಕರ್ಷಣೆಗೊಂಡಿತು. ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾದ 56 ನೇ ವರ್ಷದ ಗಣೇಶೋತ್ಸವ ಸಮಿತಿಯವರು ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ ಬಳೆಕೋಲಾಟ ಪ್ರದರ್ಶನದಲ್ಲಿ ಕೆದಲುಗುಡ್ಡೆ ಮತ್ತು ಚಿಪ್ಪಿಳ್ಳಿ ಕೋಲಾಟ ತಂಡದವರ ಜಡೆ ಕೋಲಾಟ ಪ್ರದರ್ಶನ ಜನಾಕರ್ಷಣೆಗೊಂಡಿತು. ಹಿಂದೂ ಮಹಾಸಭಾ ಕಟ್ಟಡ ಸಮಿತಿಯ ಅಧ್ಯಕ್ಷ ಎಂ.ಬಿ.ಮಂಜುನಾಥ ಮಾತನಾಡಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಪ್ರೋತ್ಸಾಹಿಸುವ…

Read Full News

ಹೊಸ ಕಲ್ಲುಕ್ವಾರೆಗೆ ಅವಕಾಶ ಬೇಡ : ಎಸಿಗೆ ಮನವಿ|iruvakki

ಹೊಸ ಕಲ್ಲುಕ್ವಾರೆಗೆ ಅವಕಾಶ ಬೇಡ; ಎಸಿಗೆ ಮನವಿ ಸಾಗರ : ತಾಲ್ಲೂಕಿನ ಇರುವಕ್ಕಿ ಆಸುಪಾಸು ಹೊಸ ಕಲ್ಲುಕ್ವಾರೆಗೆ ಅವಕಾಶ ನೀಡದಂತೆ ಗ್ರಾಮಸ್ಥರು ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಇರುವಕ್ಕಿ ಗ್ರಾಮದ ಸ.ನಂ. 30 ಮತ್ತು 31ರಲ್ಲಿ ಹೊಸ ಕಲ್ಲುಕ್ವಾರೆ ಪ್ರಾರಂಭಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕಲ್ಲುಕ್ವಾರೆಗೆ ಪ್ರಸ್ತಾಪಿಸಿರುವ ಜಾಗದ ವ್ಯಾಪ್ತಿಯಲ್ಲಿಯೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಬರುತ್ತದೆ. ಶರಾವತಿ ನದಿಯ ಉಪನದಿಯ ದಂಡೆ ಇದಾಗಿದ್ದು, ಕೃಷಿಗೆ ನೀರು…

Read Full News

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು|fire

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು ತೀರ್ಥಹಳ್ಳಿ:  ಕಾರೊಂದು ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲ್ಲೂಕಿನ ಮಂಡಗದ್ದೆಯ 15 ನೇಮೈಲಿಕಲ್ಲಿನ ಸಮೀಪ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟುಹೋಗಿದೆ. ರಾತ್ರಿ 11.30 ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರು ಹಾಗೂ ಅದೇ ಮಾರ್ಗವಾಗಿ ಹೋಗುತ್ತಿದ್ದ ವಾಹನ ಸವಾರು ಕಾರಿಗೆ ಬೆಂಕಿ ಬಿದ್ದು ಉರಿಯುತ್ತಿರುವುದನ್ನ ಗಮನಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಶಿವಮೊಗ್ಗದಿಂದ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಯಾರದ್ದು…

Read Full News

ರಿಪ್ಪನ್‌ಪೇಟೆ : ಅನಾಥ ನಾಯಿ ಮರಿಗಳ ಆರೈಕೆ – ಮಾನವೀಯತೆ ಮೆರೆದ ಪಶು ಪರಿವೀಕ್ಷಕ|rpet

ಮಾನವೀಯತೆ ಮೆರೆದ  ಪಶು ಪರಿವೀಕ್ಷಕ ವಿ ರಂಗಪ್ಪ ರಿಪ್ಪನ್ ಪೇಟೆ : ಪೊದೆಯೊಂದರಲ್ಲಿ ಐದು ಮರಿಗಳಿಗೆ ಜನ್ಮವಿತ್ತ ಬೀದಿ ನಾಯಿ  ಮೂರು ದಿನಗಳ ಒಳಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿತ್ತು.ಇನ್ನೂ ಕಣ್ಣು ಬಿಡದ ಆ ಮರಿಗಳಿಗೆ ಹಾಲುಣಿಸುವ ತಾಯಿ ಬಾರದಿದ್ದಾಗ ಹಸಿವಿನಿಂದ ಕಂಗೆಟ್ಟು ತೀರಾ ಹಠ ಮಾಡುವುದನ್ನು ಕಂಡು ದಾರಿ ಹೋಕರು ಗಮನಿಸಿ ಪಟ್ಟಣದ ಪಶು ವೈದ್ಯಕೀಯ ಪರಿವೀಕ್ಷಕ ವಿ ರಂಗಪ್ಪ ಅವರ ಗಮನಕ್ಕೆ ತಂದರು. ದಿಕ್ಕಿಲ್ಲದ ಆ ಐದು ಮರಿಗಳನ್ನು ಆಸ್ಪತ್ರೆಗೆ ತಂದು ರಟ್ಟಿನ ಬಾಕ್ಸ್ ನಲ್ಲಿ …

Read Full News

ವಾಲಿಬಾಲ್ ಪಂದ್ಯಾವಳಿಯಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ|volleyball

ವಾಲಿಬಾಲ್ ಪಂದ್ಯಾವಳಿಯಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ರಿಪ್ಪನ್ ಪೇಟೆ :- ಶಿವಮೊಗ್ಗ ಜಿಲ್ಲಾ ಮಟ್ಟದ  ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹೊಸನಗರ ತಾಲೂಕು ಮಟ್ಟದಿಂದ ಶಿವಮೊಗ್ಗ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದು  ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ಮೂವರು ಆಟಗಾರರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ….

Read Full News

ಯುವ ಸಮೂಹಕ್ಕೆ ಮೌಲ್ಯ ದಾರಿತ ಶಿಕ್ಷಣ ನೀಡಬೇಕು : ಬಿ ಸಿ ಗೀತಾ|Rotary

ರಿಪ್ಪನ್ ಪೇಟೆ ರೋಟರಿ ಸಂಸ್ಥೆಯಿಂದ ರಾಷ್ಟ್ರ ನಿರ್ಮಾಣ ಪುರಸ್ಕಾರ ಪ್ರಧಾನ. ಯುವ ಸಮೂಹಕ್ಕೆ ಮೌಲ್ಯ ದಾರಿತ ಶಿಕ್ಷಣ  ನೀಡಬೇಕು : ಬಿಸಿ ಗೀತಾ  ರಿಪ್ಪನ್ ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಒತ್ತಡದ ಜೀವನದಲ್ಲಿ ಬದುಕುತ್ತಿರುವ ಯುವ ಸಮೂಹಕ್ಕೆ ಮೌಲ್ಯ ದಾರಿತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಆಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ರೋಟರಿ 31 82ರ ಜಿಲ್ಲಾ ಗೌರ್ನರ್ ಬಿ.ಸಿ ಗೀತಾ ಹೇಳಿದರು.  ಪಟ್ಟಣದ ರೋಟರಿ ಕ್ಲಬ್ ಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ನಿರ್ಮಾಣ…

Read Full News

ರೈತರು ಆತ್ಮಹತ್ಯೆಗೆ ಮುಂದಾಗದೇ ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ ನಿಮ್ಮ ಬೆಂಗಾವಲಾಗಿ ನಮ್ಮ ಸರ್ಕಾರವಿದೆ – ಬೇಳೂರು ಅಭಯ|gkb

ರೈತರು ಆತ್ಮಹತ್ಯೆಗೆ ಮುಂದಾಗದೇ ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ ನಿಮ್ಮ ಬೆಂಗಾವಲಾಗಿ ನಮ್ಮ ಸರ್ಕಾರವಿದೆ – ಬೇಳೂರು ಅಭಯ ರಿಪ್ಪನ್‌ಪೇಟೆ : ಕಷ್ಟ ಬಂದಿದೆಯೆಂದು ಆತಂಕಕ್ಕೊಳಗಾಗುವ ರೈತರು ಆತ್ಮಹತ್ಯೆಗೆ ಮನಸ್ಸುಮಾಡಬೇಡಿ. ಸಮಸ್ಯೆಗಳ ಬಗ್ಗೆ ನನಗೆ ಹಾಗೂ ಸರಕಾರದ ಗಮನಕ್ಕೆ ತನ್ನಿ ನಿಮ್ಮ ಬೆಂಗಾವಲಾಗಿ ನಾವೀರುತ್ತೇವೆ ಭಯಪಡಬೇಡಿ ಎಂದು ರೈತರಿಗೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದರು. ಕೋಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 20 ಲಕ್ಷ ರೂ…

Read Full News

ಅಪರೂಪದ ಪ್ರಾಣಿ ಕಾಡುಪಾಪ ಪ್ರತ್ಯಕ್ಷ – ಅರಣ್ಯ ಇಲಾಖೆಯಿಂದ ರಕ್ಷಣೆ|slender loris

ಅಪರೂಪದ ಪ್ರಾಣಿ ಕಾಡುಪಾಪ ಪ್ರತ್ಯಕ್ಷ – ಅರಣ್ಯ ಇಲಾಖೆಯಿಂದ ರಕ್ಷಣೆ ಸಾಗರ(Sagara) : ಇಲ್ಲಿನ ಶಿವಪ್ಪನಾಯಕ ನಗರದ ಲೇಔಟ್‌ನಲ್ಲಿ ಅಪರೂಪದ ಕಾಡುಪಾಪ(slender loris) ಕಂಡು ಬಂದಿದ್ದು, ಪರಿಸರ ತಜ್ಞ ಅಖಿಲೇಶ್‌ ಚಿಪ್ಳಿ ಸಾರಥ್ಯದಲ್ಲಿ ಅದನ್ನು ಅರಣ್ಯ(forest) ಇಲಾಖೆ ಸಹಯೋಗದೊಂದಿಗೆ ಕಾಡಿಗೆ ಬಿಡಲಾಯಿತು. ದಟ್ಟ ಕಾಡಿನಲ್ಲಿ ವಾಸಿಸುವ ಹಗೂರವಾದ ಪ್ರಾಣಿಯಾದ ಕಾಡುಪಾಪ(slender loris) ಖಾಲಿ ಲೇಔಟ್‌ನಲ್ಲಿ ಗಿಡಗಂಟಿಗಳನ್ನು ಸ್ವಚ್ಚ ಮಾಡುತ್ತಿದ್ದಾಗ ಡುಬಂದಿದೆ. ಇದು ತುಂಬಾ ಅಪರೂಪದ ಪ್ರಾಣಿಯಾಗಿದ್ದು, ಶುದ್ಧ ಸಸ್ಯಹಾರಿಯಾಗಿದೆ. ಗಿಡ, ಗಂಟೆ ಹಾಗೂ ಹೂವಿನ ದಳಗಳನ್ನು ಆಹಾರವಾಗಿ…

Read Full News

ಮಳೆಗಾಗಿ ಪ್ರಾರ್ಥಿಸಿ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು|gkb

ಮಳೆಗಾಗಿ ಪ್ರಾರ್ಥಿಸಿ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ರಿಪ್ಪನ್‌ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 56 ನೇ ವರ್ಷದ ಗಣಪತಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ವಿಶೇಷ ಪೂಜೆಯೊಂದಿಗೆ ಮಳೆಗಾಗಿ ಪ್ರಾರ್ಥಿಸಿದರು. ವಿಘ್ನನಿವಾರಕನಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಾರ್ಥಿಸಿದ ಕೆಲವೇ ಗಂಟೆಯಲ್ಲಿ ರಿಪ್ಪನ್‌ಪೇಟೆಯಲ್ಲಿ ಮಳೆಯು ಅರ್ಧಗಂಟೆಗಳ ಕಾಲ ಮಳೆ ಸುರಿದು ಭಕ್ತ ಸಮೂಹವನ್ನು ಮತ್ತು ರೈತನಾಗರೀಕರಲ್ಲಿ ಮಂದಹಾಸ ಮೂಡುವಂತಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಕರ್, ಗ್ರಾಮ…

Read Full News

ಗ್ರಾಮೀಣ ಉದ್ಯಮ ಶೀಲತೆ ಅಭಿವೃದ್ಧಿಯಿಂದ ದೇಶದ ಸ್ವಾವಲಂಬನೆ : ಬೇಳೂರು ಗೋಪಾಲಕೃಷ್ಣ|rpet news

ಗ್ರಾಮೀಣ ಉದ್ಯಮ ಶೀಲತೆ ಅಭಿವೃದ್ಧಿಯಿಂದ ದೇಶದ ಸ್ವಾವಲಂಬನೆ: ಬೇಳೂರು ರಿಪ್ಪನ್‌ಪೇಟೆ : ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಪ್ರಬಲ ಇಚ್ಚಾಶಕ್ತಿಯೊಂದಿಗೆ ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಪಡಿಸಬೇಕು. ಇದಕ್ಕೆ ಬೇಕಾದ ಆರ್ಥಿಕ ಅನುದಾನ ಮತ್ತು ನೆರವನ್ನು ಸರ್ಕಾರ ನೀಡುತ್ತದೆ. ತನ್ಮೂಲಕ ಗ್ರಾಮೀಣ ಉದ್ಯಮ ಶೀಲತೆ ಅಭಿವೃದ್ಧಿಯಿಂದ ದೇಶದ ಸ್ವಾವಲಂಬನೆ, ಪ್ರಗತಿ ಮತ್ತು ಸಬಲೀಕರಣ ಸಾಧ್ಯವಾಗುತ್ತದೆ ಎಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದಲ್ಲಿ ಶ್ರೀ ದುರ್ಗಾಪರಮೇಶ್ವರಿ ಟ್ರೇಡರ್ಸ್ ಮತ್ತು ಅರ್ಥ್…

Read Full News

ಮಹಿಳಾ ಮೀಸಲು : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸ್ವಾಗತ|kagodu

ಮಹಿಳಾ ಮೀಸಲು : ಮಾಜಿ ಸಚಿವ ಕಾಗೋಡು ಸ್ವಾಗತ  ರಿಪ್ಪನ್ ಪೇಟೆ : ಕೇಂದ್ರ ಸರ್ಕಾರ ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ವಿಧೇಯಕ್ಕೆ  ಮಾಜಿ ಸಚಿವ ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತ  ಕಾಗೋಡು ತಿಮ್ಮಪ್ಪ  ಅವರು ಸಂತಸ  ವ್ಯಕ್ತಪಡಿಸಿದ್ದಾರೆ.  ಪಟ್ಟಣದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಪಂಚಾಯತ್ ವತಿಯಿಂದ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು. ಈ  ಹಿಂದೆಯೇ ಇದು ಜಾರಿ  ಗೊಳಿಸಬೇಕಾಗಿತ್ತು. ರಾಜಕೀಯ ಇಚ್ಚ ಶಕ್ತಿಯ ಕೊರತೆ ಶಾಸನ ಸಭೆಯಲ್ಲಿ ಮಹಿಳಾ ಜನಪ್ರತಿನಿಧಿಗಳು  ಧ್ವನಿ…

Read Full News

ಹಿಂದೂ ಮಹಾಸಭಾ ಗಣಪತಿಗೆ ಪೂಜೆ ಸಲ್ಲಿಸಿದ ಮೂಲೆಗದ್ದ ಶ್ರೀಗಳು ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ|Hindu mahasabha

ಹಿಂದೂ ಮಹಾಸಭಾ ಗಣಪತಿಗೆ ಪೂಜೆ ಸಲ್ಲಿಸಿದ ಮೂಲೆಗದ್ದ ಶ್ರೀಗಳು ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ರಿಪ್ಪನ್‌ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 56 ನೇ ಗಣೇಶೋತ್ಸವ ಸಮಿತಿಯವರು ಪ್ರತಿಷ್ಟಾಪಿಸಲಾಗಿರುವ ಗಣಪತಿಗೆ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ವಿಶೇಷ ಪೂಜೆ ಸಲ್ಲಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ  ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿಯರನ್ನು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ…

Read Full News