Ripponpete | ತಮ್ಮಡಿಕೊಪ್ಪ ನಾಗಕ್ಷೇತ್ರದಲ್ಲಿ ವಿಶೇಷ ಆಶ್ಲೇಷ ಬಲಿ ಸಂಪನ್ನ – ಶಾಸಕ ಆರಗ ಜ್ಞಾನೇಂದ್ರ ಭಾಗಿ
ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿಕೊಪ್ಪದ ಶ್ರೀ ಗುರು ಕರಿಬಸವೇಶ್ವರ, ಬಾಲಸುಬ್ರಹ್ಮಣ್ಯ ನಾಗದೇವತೆ ಮತ್ತು ನಾಗ ಕ್ಷೇತ್ರದಲ್ಲಿ ಭಾನುವಾರ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಅಶ್ಲೇಷ ಬಲಿ ಕಾರ್ಯಕ್ರಮ ಸಂಪನ್ನಗೊಂಡಿತ್ತು.
ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನಾಗದೇವರ ಪ್ರತಿಷ್ಟಾಪನೆ , ಉದ್ಯಾಪನ ಹೋಮ , ಕಲಾ ಹೋಮ ,ಹಾಗೂ ಲೋಕ ಕಲ್ಯಾಣಾರ್ಥವಾಗಿ ಅಶ್ಲೇಷ ಬಲಿ ಕಾರ್ಯಕ್ರಮ ಸಂಪನ್ನಗೊಂಡಿತ್ತು.
ಕರ್ನಾಟಕ ರಾಜ್ಯದ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ರವರ ಶ್ರೇಯೋಭಿವೃದ್ದಿಗಾಗಿ ಶ್ರೀಕ್ಷೇತ್ರದಲ್ಲಿ ಅವರ ಸಮ್ಮುಖದಲ್ಲಿಯೇ ವಿಶೇಷ ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿತ್ತು.ನಂತರದಲ್ಲಿ ಶ್ರೀಕ್ಷೇತ್ರದ ವತಿಯಿಂದ ಆರಗ ಜ್ಞಾನೇಂದ್ರ ರವರನ್ನು ಧರ್ಮದರ್ಶಿಗಳಾದ ಪ್ರಕಾಶ್ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಶ್ರೀಕ್ಷೇತ್ರದ ನೂರಾರು ಭಕ್ತಾಧಿಗಳು ಇದ್ದರು.