Headlines

Hosanagara | 06 ವರ್ಷ ಪ್ರೀತಿಸಿ ಕೈಕೊಟ್ಟ ಯುವಕ – ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನ

06 ವರ್ಷ ಪ್ರೀತಿಸಿ ಕೈಕೊಟ್ಟ ಯುವಕ – ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನ
ಪ್ರೀತಿಸಿದ್ದ ಯುವಕ ನಂಬಿಸಿ ಕೈಬಿಟ್ಟ ಕಾರಣ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ.

ಮೇಲ್ನೋಟಕ್ಕೆ ಇದೊಂದು ಲವ್-ಸೆಕ್ಸ್-ದೋಖಾ ಪ್ರಕರಣದಂತೆ ಕಂಡುಬಂದಿದ್ದು ಯುವತಿ ತನಗೆ ವಂಚಿಸಿದ ಯುವಕನಿಗೆ ಹಾಗೂ ಆತನ ಭಾವನಿಗೆ ಶಿಕ್ಷೆ ವಿಧಿಸಬೇಕು ಎಂದು ವೀಡಿಯೋ ಮೂಲಕ ಹೇಳಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಹೊಸನಗರ ಮೂಲದ ಸುಧಾ (27) ಹಾಗೂ ಶ್ರೀಕಾಂತ್ (30) ಇಬ್ಬರು ಪರಸ್ಪರ 06 ವರ್ಷಗಳಿಂದ ಪ್ರೇಮಪಾಶದಲ್ಲಿ ಸಿಕ್ಕಿದ್ದರು.ತಾನು ಸುಧಾ ಳನ್ನು ವಿವಾಹವಾಗುವುದಾಗಿ ನಂಬಿಸಿದ್ದ ಶ್ರೀಕಾಂತ್ ಆಕೆಯೊಡನೆ ದೈಹಿಕ ಸಂಪರ್ಕ ಸಹ ಮಾಡಿದ್ದ.  ಯುವತಿ ಸುಧಾ ಸಹ ತನ್ನ ಪ್ರೇಮಿಯನ್ನು ಬಹಳವೇ ನಂಬಿದ್ದು ಅದಕ್ಕೆ ಒಪ್ಪಿಗೆ ಸೂಚಿಸಿದ್ದಳು. ಆದರೆ ಈಗ ನೀನು ಕೆಳ ಜಾತಿಯವಳೆಂದು ಎಂದು ಹೇಳಿ ಸುಧಾಳನ್ನು ಮದುವೆಯಾಗಲು ಯುವಕ ನಿರಾಕರಿಸಿದ್ದಾನೆ.ಹಾಗಾಗಿ ಯುವತಿ 

ಯುವತಿಯ ದೂರಿನಲ್ಲೇನಿದೆ..??

ಹೊಸನಗರದಲ್ಲಿರುವ ಯುವತಿಯ ಮನೆಗೆ ಶ್ರೀಕಾಂತ ನಿರಂತರವಾಗಿ ಬಂದು ಹೋಗುತ್ತಿದ್ದು ಶ್ರೀಕಾಂತನು ತನ್ನ ತಂಗಿಯ ಮದುವೆಯಾದ ನಂತರ ನಿನ್ನನ್ನು ಮಧುವೆಯಾಗುತ್ತೇನೆ ಎಂದು ಭರವಸೆ ಕೊಟ್ಟಿದ್ದರಿಂದ ಅವನು ಬಂದಾಗ ದೈಹಿಕ ಸಂಪರ್ಕ ಹೊಂದಲು ಸಹಕರಿಸಿರುತ್ತಾರೆ, ನಂತರ ಮೇ 31 ರಂದು ಶ್ರೀಕಾಂತನು ಯುವತಿಯ ಮನೆಗೆ ಬಂದು ನೀನು ಕೀಳು ಜಾತಿಯವಳು ನಮ್ಮ ಮನೆಯ ದೇವರಿಗೆ ಆಗುವುದಿಲ್ಲ ಎಂದು ದೈಹಿಕವಾಗಿ ಹಲ್ಲೆ ಮಾಡಿ ಹೋಗಿರುತ್ತಾನೆ.ಅಂದಿನಿಂದ ಶ್ರೀಕಾಂತ್ ಪೋನ್ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ.

ಈ ವಿಚಾರವಾಗಿ ಮಹಿಳಾ ಸಾಂತ್ವಾನ ಕೇಂದ್ರ ಮತ್ತು ಹೊಸನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 06/11/2023 ರಂದು ದೂರು ದಾಖಲಾಗಿದ್ದು ಆ ದಿನ ಯುವತಿ ಮತ್ತು ಶ್ರೀಕಾಂತನ ಕುಟುಂಬದವರೊಂದಿಗೆ ಚರ್ಚಿಸುವುದಾಗಿ ತೀರ್ಮಾನಿಸಿಕೊಂಡಿರುತ್ತಾರೆ ಅದರಂತೆ ಭಾನುವಾರ ಮಧ್ಯಾಹ್ನ 03-45 ಗಂಟೆಗೆ ಹೊಸನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾತುಕತೆ ನಡೆದಾಗ ಶ್ರೀಕಾಂತ್ ಹಾಗೂ ಆತನ ಭಾವ ಹಾಗೂ ಸಂಬಂಧಿಕರು ಯುವತಿಗೆ ಮನಸ್ಸೋ ಇಚ್ಚೆ ನಿಂದಿಸಿ ಹೋಗಿರುತ್ತಾರೆ.

ಈ ಘಟನೆಯಿಂದ ಮನನೊಂದ ಯುವತಿ ಸಂಜೆ ಮನೆಗೆ ಹೋಗಿ ಮನೆಯಲಿದ್ದ ಹಳೆಯ ಮಾತ್ರೆಗಳನ್ನು ತಿಂದು ವೀಡಿಯೋ ಮೂಲಕ ಪರಿಚಯಸ್ಥರಿಗೆ ತಿಳಿಸಿದ್ದಾಳೆ ಕೂಡಲೇ 112 ಗೆ ಕರೆ ಮಾಡಲಾಗಿ ಯುವತಿಯನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಪ್ರಕರಣದಲ್ಲಿ ಹೊಸನಗರ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ,ನಾಗರಾಜ್ , ಪ್ರದೀಪ್ , ಸವೀತಾ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *