Malali | ಧರ್ಮ ಪ್ರಸಾರದೊಂದಿಗೆ ಮಳಲಿ ಮಠಾಧೀಶರ ಕೃಷಿ ಕ್ರಾಂತಿ – ಮಳಲಿಮಠದ ಶ್ರೀಗಳ ಪಟ್ಟಾಧಿಕಾರದ ರಜತ ವರ್ಧಂತಿ ಮಹೋತ್ಸವ
ರಿಪ್ಪನ್‌ಪೇಟೆ;-ಧರ್ಮ ಪ್ರಸಾರದೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಹೊಸ ಹೊಸ ಅವಿಷ್ಕಾರದೊಂದಿಗೆ ಮಳಲಿಮಠದ ಪಟ್ಟಾಧ್ಯಕ್ಷರಾದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಕೃಷಿ ಕ್ರಾಂತಿಯಲ್ಲಿ ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದಾರೆ.
ಧರ್ಮದ ದೇವ ತಪೋ ಭೂಮಿ ಭಾರತ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯಿಟ್ಟ ಈ ನಾಡು ಪವಿತ್ರ ಪುಣ್ಯ ಭೂಮಿಯಲ್ಲಿ ಹಲವಾರು ಧರ್ಮಗಳು ಮೈದಾಳಿ ಬಂದಿವೆ. ಅನೇಕ ಧರ್ಮಗಳಲ್ಲಿ ವೀರಶೈವ ಧರ್ಮವು ಒಂದಾಗಿದೆ.ಪರಶಿವನಿಗೆ ಪಂಚಮುಖ.ಆ ಪಂಚಮುಖಗಳಿಂದ ಆವಿರ್ಭವಿಸಿದವರೇ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು. ಅವರಲ್ಲಿ ಶಿವನ ಸದ್ಯೋಜಾತ ಮುಖದಿಂದ ಆವಿರ್ಭವಿಸಿದವರು ಶ್ರೀ ಜಗದ್ಗುರು ರೇಣುಕ ಗಣಾಧೀಶ್ವರರು. ಯುಗಯುಗಗಳಲ್ಲಿ ಅವತರಿಸಿ ವೀರಶೈವ ಧರ್ಮವನ್ನು ಬಿತ್ತರಿಸಿದರು.ಜಾತಿ ಮತ ಪಂಥಗಳ ಎಲ್ಲೆ ಮೀರಿ ಭಾವೈಕ್ಯತೆ ಮತ್ತು ಸಾಮರಸ್ಯ ಬೆಳಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ.ಅಣಿಮಾದಿ ಆಷ್ಟಸಿದ್ಧಿಗಳನ್ನು ಸಿದ್ದಿಸಿಕೊಂಡ ಶ್ರೀ ಜಗದ್ಗುರು ರೇವಣಸಿದ್ದರು ನೊಂದವರ ಬೆಂದವರ ಬಾಳಿಗೆ ಬೆಳಕು ತೋರಿ ಮುನ್ನಡೆಸಿದ ಪರಮಾಚಾರ್ಯರು ಆವರ ದೂರದೃಷ್ಟಿ ಮತ್ತು ಮಾನವತಾ ಸಂದೇಶಗಳು ಜನಮನದ ಉತ್ಕರ್ಷತೆಗೆ ಸ್ಪೂರ್ತಿದಾಯಕ ಬದುಕಿನ ಶ್ರೇಯಸ್ಸಿಗೆ ನಂದಾದೀಪ.
ಪಂಚಪೀಠಗಳಲ್ಲಿ ಪ್ರಥಮವಾಗಿರುವ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವನ್ನು ನೂರಿಪ್ಪತ್ತು ಪರಮಾಚಾರ್ಯರು ಆರೋಹಣ ಮಾಡಿ ಜನಮನದ ಮೇಲೆ ಆಚ್ಚಳಿಯದ ಪ್ರಭಾವ ಬೀರಿದ್ದಾರೆ.ಪ್ರಸ್ತುತ ನೂರ ಇಪ್ಪತ್ತೊಂದನೇ ಪರಮಾಚಾರ್ಯರಾದ ಶ್ರೀ ಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಪೀಠಾರೋಹಣಗೈದ ನಂತರದಲ್ಲಿ ನವಮನ್ವಂತರವನ್ನೇ ನಿರ್ಮಾಣಮಾಡಿ ಆಭ್ಯುದಯ ಸಾಧಿಸಿದ ಮಹಾನ್ ಚೇತನರಾಗಿದ್ದಾರೆ. ಧರ್ಮಾಭಿವೃದ್ದಿ, ಪೀಠಾಭಿವೃದ್ದಿ, ಭಕ್ತಾಭಿವೃದ್ದಿ, ಸಾಹಿತ್ಯಾಭಿವೃದ್ಧಿ, ಸಮಾಜಾಭಿವೃದ್ದಿ, ಶಿಕ್ಷಣಾಭಿವೃದ್ದಿ ಕಾರ್ಯಗಳ ಜೊತೆಗೆ ಸರ್ವಾಭಿವೃದ್ದಿ ಬಯಸುವ ಚೈತನ್ಯ ಶೀಲರು.ಅವರ ದೂರದೃಷ್ಠಿ ಚಿಂತನಾ ಲಹರಿ ಆತ್ಯದ್ಭುತ ಮತ್ತು ಆತ್ಯಮೋಘವಾದುದು.ಬಾಳೆಹೊನ್ನೂರು ಧರ್ಮಪೀಠವು ನಾಡಿನಾದ್ಯಂತ ಸುಮಾರು 12 ಸಹಸ್ರ ಶಾಖಾಮಠಗಳನ್ನು ಹೊಂದಿದ್ದು ಧರ್ಮ ಪ್ರಸಾರದ ಜೊತೆಗೆ ಪ್ರಾಚೀನ ಚಿಂತನೆಗಳನ್ನು ಪರಂಪರೆಯಿAದ ಬಳುವಳಿಗಳನ್ನು ಇಂದಿಗೂ ಮುನ್ನೆಡೆಸಿಕೊಂಡು ಬಂದಿರುವ ಐತಿಹ್ಯವಿದೆ. ಶ್ರೀ ಜಗದ್ಗುರು ರಂಭಾಪುರಿ ಪೀಠದ ಶಾಖಾ ಮಠಗಳಲ್ಲಿ ಒಂದಾಗಿರುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕ್ ಶ್ರೀಮನ್ ಮಹಾಸಂಸ್ಥಾನ ಮಳಲಿಮಠವು ಧರ್ಮಜಾಗೃತಿಯ ತಾಣವಾಗಿ ವೀರಶೈವ ಧರ್ಮದ ಬೆಳಕನ್ನು ವಿಸ್ತಾರಗೊಳಿಸಿದ್ದಲ್ಲದೇ ಸರ್ವ ಜನಾಂಗಕ್ಕೂ ಕುಲದೈವದ ತಾಣವಾಗಿ ಉತ್ತರೋತ್ತರವಾಗಿ ಆಭಿವೃದ್ದಿ ಹೊಂದುತ್ತಾ ಬಂದಿರುವುದು ಮಠದ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗಿದೆ.
ಶ್ರೀಮಠದ ಮೂಲ ಪುರುಷರಾದ ಶ್ರೀ ಷ||ಬ್ರ||ಆದಿಗುರು ನಾಗಾರ್ಜುನ ಶಿವಾಚಾರ್ಯ ಸ್ವಾಮಿಗಳವರು ತಮ್ಮ ಸಿದ್ಧಿಸಾಧನೆಗಳ ಮೂಲಕ ಅನೇಕರ ಬದುಕಿಗೆ ಸ್ಪಂದಿಸಿ ಕಾರುಣ್ಯವಿತ್ತಿದ್ದು ಇತಿಹಾಸ. ಶ್ರೀಗಳವರು ಅವತಾರವತ್ತಿ ಜಾಗತಿಕ ಕಾರ್ಯವೆಸಗಿದ್ದರ ಪರಿಣಾಮ ಕಲಿಯುಗದ ಅರುಜನ ಶಕಪುರುಷರಲ್ಲಿ ಮೊಂದಲಿಗರಾಗಿ ನಾಗಾರ್ಜುನ ಶಕೆ ಆರಂಭಿಸಿ ಸುಖ ಸಮೃದ್ಧಿಯನ್ನುಂಟು ಮಾಡಿದ್ದು ದಾಖಲಾತ್ಮಕ ವಿಷಯ.
ನಾಡು ಸುತ್ತಿ ನಾಡಿಗರಿಗೆ ಧರ್ಮ ಸಂಸ್ಕಾರ ನೀಡಿ ಸಾಗುತ್ತಿದ್ದ ಶ್ರೀಗಳವರು ಶ್ರೀಮದ್ರಂಭಾಪುರಿ ಜಗದ್ಗುರು ರೇವಣಸಿದ್ಧರ ಅಪ್ಪಣೆಯ ಮೇರೆಗೆ ಮಲೆನಾಡಿನ ಪ್ರಾಂತ್ಯದಲ್ಲಿ ಶ್ರೀಮಠವನ್ನು ಸ್ಥಾಪಿಸುವಂತಹ ಸುಯೋಗ ಒದಗಿ ಬಂದಿದ್ದು ಆವಿಸ್ಮರಣೀಯ.ಅಂದಿನಿAದ ಇಂದಿನವರೆಗೂ ಶ್ರೀ ಮಠದ ಗುರುಪರಂಪರೆ ಆವ್ಯಾಹತವಾಗಿ ಬೆಳದು ಬೆಳಕು ಕಂಡಿರುವAತೆ ಪ್ರಸ್ತುತ ಶ್ರೀ ಪಟ್ಟಾಧ್ಯಕ್ಷರಾದ ಶ್ರೀ ಷ||ಬ್ರ||ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳವರು 1998 ರಲ್ಲಿ ಪಟ್ಟಾಧಿಕಾರವನ್ನು ಶ್ರೀಮದ್ ರಂಭಾಪುರಿ ಶ್ರೀ ವೀರಸೋಮೇಶ್ವರ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಪಡೆದುಕೊಂಡು ಅಭಿವೃದ್ಧಿಯ ಪಥವನ್ನು ನಿರಂತರಗೊಳಿಸಿಕೊಂಡು ಬಂದಿರುವುದಲ್ಲದೇ ಧರ್ಮ, ಸಂಸ್ಕೃತಿ,ಸಂಸ್ಕಾರ,ಪರಂಪರೆಗಳನ್ನು ಸದೃಢಗೊಳಿಸುವ ಹತ್ತು ಹಲವಾರು ಕಾರ್ಯಗಳನ್ನು ಆಯೋಜಿಸಿ ಯಶಸ್ವಿಗೊಳಿಸಿದವರಾಗಿದ್ದಾರೆ.
ಧರ್ಮಭೋಧನೆಯೊಂದಿಗೆ ಇಂದಿನ ಹೊಸ ಅವಿಷ್ಕಾರಗಳನ್ನು ಬಳಸಿಕೊಂಡು ಸಾವಯವ ಕೃಷಿಯೊಂದಿಗೆ ಸಾವಯವ ಕೃಷಿ ಕ್ಷೇತ್ರದಲ್ಲಿ ಕ್ರಾಂತಿದಲ್ಲಿ ಮುನ್ನಡಿಯನ್ನಿಟ್ಟಿದ್ದಾರೆ.