Hosanagara | ಪೊಲೀಸ್ ಠಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಹೊಸನಗರ : ಪ್ರತಿಯೊಬ್ಬರೂ ನಾಡು, ನುಡಿಗೆ ಅರ್ಥ ಕಲ್ಪಿಸಿ ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಪಿಎಸ್‌ಐ ಶಿವಾನಂದ ಕೋಳಿ ತಿಳಿಸಿದರು.
ಕರ್ನಾಟಕ ರಾಜ್ಯದ ಏಕೀಕರಣ ಹಿನ್ನಲೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹೆತ್ತ ತಾಯಿಗೆ ಸಮನಾದ ನಾಡು, ನುಡಿ, ಭಾಷೆಯ ವಿಷಯದಲ್ಲಿ ನಾಡಿನ ಸಮಸ್ತ ಜನತೆ ಒಗ್ಗೂಡಿ, ಪ್ರಾಮಾಣಿಕವಾಗಿ ತಾಯಿಯ ಋಣಿ ತೀರಿಸುವ ಕಾರ್ಯಕ್ಕೆ ಮುಂದಾಬೇಕು. ಇದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವೂ ಆಗಿದ್ದು, ಸಮಸ್ತ ಕನ್ನಡಿಗರು ಒಟ್ಟಾಗಿ ಕನ್ನಡಾಂಬೆಯ ಸೇವೆ ಸಲ್ಲಿಸುವಂತಾಗಲಿ. ಈ ಕುರಿತು ಯಾವುದೇ ತರಹದ ಅಬ್ಬರ ತೋರದೆ ಕನ್ನಡ ಭಾಷೆಯ ನಿಜಾಭಿಮಾನಿಗಳಾಗಿ ಬಾಳೋಣ ಎಂಬ ಸಂದೇಶ ನೀಡಿದರು.
ಈ ವೇಳೆ ಹೆಡ್ ಕಾನ್ಸ್ಟೇಬಲ್‌ಗಳಾದ ಹಸಿರು ಸೇನೆ ಹಾಲೇಶಪ್ಪ, ವಿಕ್ಟರ್ ಡಿಸೋಜಾ, ರಾಘವೇಂದ್ರ, ಅವಿನಾಶ್, ಸಂತೋಷ್ ನಾಯಕ್, ಮುಕ್ಸದ್ ಖಾನ್ ಹಾಜರಿದ್ದರು.