ವಾಟ್ಸಾಪ್ ನಲ್ಲಿ ಬೆತ್ತಲಾಗಿ ಹಣಕ್ಕಾಗಿ ಬೇಡಿಕೆ ಇಟ್ಟ ಸುಂದರಿ – ಹಣ ಕೊಡದಿದ್ದಕ್ಕೆ ಕಿಡ್ನಾಪ್ : ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಐವರ ಬಂಧನ
ಶಿವಮೊಗ್ಗ : ಹನಿ ಟ್ರ್ಯಾಪ್(Honey trap) ಮೂಲಕ ಹಣಕ್ಕೆ ಬೇಡಿಕೆಯಿಡುತಿದ್ದ ನಟೋರಿಯಸ್ ಗ್ಯಾಂಗ್ ನ್ನು ಭದ್ರಾವತಿ(bhadravathi) ಹೊಸಮನೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮದುವೆ ನಿಶ್ಚಯವಾಗಿದ್ದ ಭದ್ರಾವತಿ ಮೂಲದ ಯುವಕನಿಗೆ ವಾಟ್ಸಾಪ್(Whatsup) ನಲ್ಲಿ ಬೆತ್ತಲೆ ಕರೆ ಮಾಡಿ ಅದನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬೇಡಿಕೆಯಿಟ್ಟು ನಂತರ ಕಿಡ್ನಾಪ್(kidnap) ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದರು.ಈ ಹಿನ್ನಲೆಯಲ್ಲಿ ಭದ್ರಾವತಿ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೈಸೂರು ಮೂಲದ ನಟೋರಿಯಸ್ ಸುಂದರಿ ಶ್ವೇತಾ ಗ್ಯಾಂಗ್ ನಲ್ಲಿ ಇದ್ದ ಹುಬ್ಬಳ್ಳಿ ಮೂಲದ ವಿನಾಯಕ, ಮಹೇಶ್, ಯಲ್ಲಪ್ಪ ಹಾಗೂ ಅರುಣ್ ಕುಮಾರ್ ಬಂಧಿತ ಆರೋಪಿಗಳು.
ಬಂಧಿತರಿಂದ ಡಸ್ಟರ್ ಕಾರು ಸೇರಿದಂತೆ 7 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಘಟನೆ :
ಭದ್ರಾವತಿ ಮೂಲದ ಶರತ್ ಕುಮಾರ್ ಎಂಬಾತ ಸುಮಾರು ಒಂದೂವರೆ ವರ್ಷದ ಹಿಂದೆ ಗೆಳಯರೊಂದಿಗೆ ಮೈಸೂರಿಗೆ ಪ್ರವಾಸಕ್ಕೆಂದು ಹೋದಾಗ ಮೈಸೂರಿನಲ್ಲಿ ಶ್ವೇತಾ ಎಂಬ ಹುಡುಗಿ ಪರಿಚಯ ಆಗಿದ್ದು ಅಂದಿನಿಂದ ಒಬ್ಬರಿಗೊಬ್ಬರು ಫೋನ್ ನಲ್ಲಿ ಮಾತನಾಡುತ್ತಿದ್ದು ಶರತ್ ವಾಟ್ಸ್ ಅಪ್ ನಲ್ಲ ಚಾಟಿಂಗ್ ಮಾಡುತ್ತಿದ್ದನು.
ಮೈಸೂರಿನ ಶ್ವೇತಾ ಶರತ್ ಗೆ ವಿಡಿಯೋ ಕರೆ ಮಾಡಿದ್ದು, ವಿಡಿಯೋದಲ್ಲಿ ಅವಳು ತನ್ನ ಬಟ್ಟೆಯನ್ನು ಬಿಚ್ಚಿ ಬೆತ್ತಲೆಯಾಗಿದ್ದು ಮಾತನಾಡಿರುತ್ತಾಳೆ.ಸಂಪೂರ್ಣ ವಿಡಿಯೋ ರೆಕಾರ್ಡ ಮಾಡಿಕೊಂಡು 15 ದಿನಗಳ ನಂತರ ಬೆತ್ತಲೆಯಾಗಿದ್ದ ಮತ್ತು ಶರತ್ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ವಿಡಿಯೋ ಸ್ಟ್ರೀನ್ ರೆಕಾರ್ಡ್ ನ್ನು ಸೆಂಡ್ ಮಾಡಿ ವಾಟ್ಸ್ ಅಪ್ ಕಾಲ್ ಮಾಡಿ ಹಣದ ಅವಶ್ಯಕತೆ ಇದೆ ಹಣ ಹಾಕು ಇಲ್ಲವಾದಲ್ಲಿ ಈ ವಿಡಿಯೋವನ್ನು ನಿಮ್ಮ ಮನೆಯವರಿಗೆ ಕಳುಹಿಸುತ್ತೇನೆಂದು ಹೆದರಿಸಿರುತ್ತಾಳೆ. ಅದಕ್ಕೆ ಹೆದರಿದ ಶರತ್ ಹಣ ಕೋಡುತ್ತೇನೆ ವಿಡಿಯೋ ಡಿಲಿಟ್ ಮಾಡು ಎಂದು ಹೇಳಿ ಹಂತ ಹಂತವಾಗಿ ಸುಮಾರು 25,000/-ರೂಗಳನ್ನು ಪೋನ್ ಪೇ ಮುಖಾಂತರ ಹಾಗೂ ನಗದು ಮುಖಾಂತರ ಹಣ ಕೊಟ್ಟಿದ್ದಾನೆ.ಆದರೂ ಮತ್ತೂ ಹಣ ಬೇಕು ಎಂದು ಬ್ಲಾಕ್ ಮೇಲ್ ಮಾಡುತಿದ್ದಳು.
ಹಣಕ್ಕಾಗಿ ಶರತ್ ಹಾಗೂ ಆತನ ಸ್ನೇಹಿತನ ಕಿಡ್ನಾಪ್
ದಿನಾಂಕ:17/11/2023 ರಂದು ಶ್ವೇತಾಳು ಶಿವಮೊಗ್ಗಕ್ಕೆ ಬಂದಿದ್ದು ಶರತ್ ಶಿವಮೊಗ್ಗ ಬಸ್ ನಿಲ್ದಾಣ ಹತ್ತಿರ ಹೋಗಿ ಶ್ವೇತಾಳನ್ನು ಭೇಟಿಯಾದಾಗ ಶ್ವೇತಾ ಹರ್ಷ ಫರ್ನ ಹೋಟೇಲ್ ಗೆ ಕರೆದುಕೊಂಡು ಹೋಗಿ ರೂಂ ಬುಕ್ ಮಾಡಿದ್ದಾಳೆ.
ರಾತ್ರಿ ಶ್ವೇತಾ ಳ ನಟೋರಿಯಸ್ ಗ್ಯಾಂಗ್ ಹೊಟೇಲ್ ಗೆ ಬಂದು ಶರತ್ ಹಾಗೂ ಅತನ ಸ್ನೇಹಿತ ಹರೀಶ್ ನನ್ನು ಹೊರಗಡೆ ಕರೆದುಕೊಂಡು ಬಂದು ಮೊಬೈಲ್ ಕಸಿದುಕೊಂಡು ಸ್ವಿಚ್ ಆಫ್ ಮಾಡಿ ಸಿಲ್ವರ್ ಕಲರ್ ಡಸ್ಟರ್ ಕಾರಿನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗುತ್ತಾರೆ.
ಮೈಸೂರಿಗೆ ಕರೆದುಕೊಂಡು ಹೋಗಿ ರೂಮಿನಲ್ಲಿ ಶರತ್ ಮತ್ತು ಹರೀಶನನ್ನು ಒತ್ತಾಯಪೂರ್ವಕವಾಗಿ ಕೂಡಿಹಾಕಿ ಮಧ್ಯೆದಲ್ಲಿ ಶ್ವೇತಾಳನ್ನು ಕೂರಿಸಿಕೊಂಡು ನಾವುಗಳು ಶ್ವೇತಾಳನ್ನು ಮಲಗಲು ಕರೆದಿದ್ದೇವೆ ಎಂದು ಹೇಳು ಎಂದು ಹೆದರಿಕೆ ಹೇಳಸಿ ವಿಡಿಯೋ ಮಾಡಿಕೊಂಡಿದ್ದಾರ್ವ್. ನಂತರ ಅವರಿಬ್ಬರ ಮೊಬೈಲ್ ನಲ್ಲಿನ ಪೋನ್ ನಂಬರ್ ನ್ನು ತೆಗೆದುಕೊಂಡು ನಿಮ್ಮ ಮನೆಗೆ ಫೋನ್ ಮಾಡಿ ಹೇಳುತ್ತೇನೆ. ಇಲ್ಲ ಅಂದರೆ ನಮಗೆ 20 ಲಕ್ಷ ಹಣವನ್ನು ಕೊಡು ಎಂದು ಬೆದರಿಸಿರುತ್ತಾರೆ. ನಂತರ ಶರತ್ ಮೈಸೂರಿನಲ್ಲಿ ಎ.ಟಿ.ಎಂ ನಲ್ಲಿ 20,000/- ಹಾಗೂ 49.000/ ರೂಗಳನ್ನು ಬಿಡಿಸಿ ಕೊಟ್ಟಿದ್ದಾನೆ.
ನಂತರ ತಾನು ಶ್ವೇತಾ ಳಿಂದ 25 ಲಕ್ಷ ಹಣ ಸಾಲ ಪಡೆದುಕೊಂಡಿದ್ದೆನು ಅದನ್ನು 25/11/2023 ರಂದು ಕೊಡುತ್ತೇನೆಂದು ಹೇಳಿಸಿ ಸುಳ್ಳು ಅಗ್ರಿಮೆಂಟ್ ಮಾಡಿಸಿಕೊಂಡಿರುತ್ತಾರೆ. ಅವರಿಂದ ತಪ್ಪಿಸಿಕೊಂಡು ಬಂದ ಶರತ್ ಹಾಗೂ ಹರೀಶ್ ಭದ್ರಾವತಿಯ ಹೊಸಮನೆ ಠಾಣೆಯಲ್ಲಿ ದೂರು ಸಲ್ಲಿಸುತ್ತಾನೆ.
ಹೊಸಮನೆ ಶಿವಾಜಿ ಸರ್ಕಲ್ ಪೊಲೀಸರು ಪ್ರಕರದ ತನಿಖೆ ನಡೆಸಿ ಶ್ವೇತಾ ಬಿನ್ ಜಗದೀಶನಾಯ್ಕ (26) ವಿನಯ್ ಬಿನ್ ದಿವಾಕರ (26) ಹುಬ್ಬಳ್ಳಿ ನಗರ, ಮಹೇಶ ಬಿನ್ ಈರಣ್ಣ ಬಾರಕೇರ್ , (27) ವಾಸ: ಹುಬ್ಬಳ್ಳಿ, ಅರುಣ್ ಕುಮಾರ ಚನ್ ಯಲ್ಲಪ್ಪ, (28) ಹುಬ್ಬಳ್ಳಿ, ಹೇಮಂತ ಸಾಯಿ (24) ರವರುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಡಸ್ಟರ್ ಕಾರಿನೊಂದಿಗೆ ವಶಕ್ಕೆ ಪಡೆದು ಠಾಣೆಗೆ ಕರೆತಂದು ಹಾಜರುಪಡಿಸಿದ್ದು ವಿಚಾರಣೆ ನಡೆಸಿ ದಸ್ತಗಿರಿ ಮಾಡಿ ನಂತರ ನ್ಯಾಯಾಲಯಕ್ಕೆ ಹಾಜಾರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಆರ್ ಹೆಚ್ ಸಂಗೊಳ್ಳಿ, ಹಳೇನಗರ ಪೊಲೀಸ್ ಠಾಣೆಯ ಪಿಎಸ್‌ಐ ಶರಣಪ್ಪ ಹಂಡ್ರಗಲ್ ಸಿಬ್ಬಂದಿಗಳಾದ ಆದರ್ಶ ಶೆಟ್ಟಿ, ಲೋಹಿತ್ ಹೆಚ್ ಪಿ, ಸುನೀತಾ, ಹನಮಂತ , ತೇಜಕುಮಾರ ರವರನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಅಭಿನಂದಿಸಿರುತ್ತಾರೆ.