Ripponpet | ಗೋಪೂಜೆ ಹಬ್ಬದಂದು ಗೋರಕ್ಷಕನಿಗೆ ಸನ್ಮಾನ
ರಿಪ್ಪನ್‌ಪೇಟೆ : ಇಂದು ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿದಢೆಯಲ್ಲಿ ಕಡೆಗಳಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು ನೀಡಿ ವಿಶೇಷವಾಗಿ ಗೋಪೂಜೆಯನ್ನು ನೆರವೇರಿಸಲಾಯಿತು.
ಇದೇ ಸಂಧರ್ಭದಲ್ಲಿ ಪಟ್ಟಣದ ಗೋರಕ್ಷಕ ದೇವರಾಜ್ ಕೆರೆಹಳ್ಳಿ ರವರ ಗೋಸೇವೆಯನ್ನು ಗುರುತಿಸಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ದೇವರಾಜ್ ಕೆರೆಹಳ್ಳಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಈಶ್ವರ್ ಶೆಟ್ಟಿ,ಪ್ರಮುಖರಾದ ಗಣೇಶ್ ಕಾಮತ್ , ಸತೀಶ್ ಎನ್ , ನಾಗರತ್ನ ದೇವರಾಜ್, ಹಿಂದೂ ಜಾಗರಣ ವೇದಿಕೆಯ ರಂಜನ್ ಕುಮಾರ್. ಲಿಂಗಪ್ಪ. ಮಂಜುನಾಥ್ ಆಚಾರ್, ಶ್ರೀನಿವಾಸ್ ಆಚಾರ್. ಗಣೇಶ್, ರಾಘವೇಂದ್ರ ಚಿಪ್ಲಿ,ದಿವಾಕರ್ ಸಂಜಯ್ ಹಾಗೂ ಇನ್ನಿತರರಿದ್ದರು.





