Headlines

BIG NEWS | ಶಿವಮೊಗ್ಗದ ನಡುರಸ್ತೆಯಲ್ಲಿ ಮಲ್ಲೇಶ್ ಮರ್ಡರ್

ಶಿವಮೊಗ್ಗದ ಚಿಕ್ಕಲ್ ರಸ್ತೆಯಲ್ಲಿರುವ ಶಿವಶಂಕರ್ ವೈನ್ ಶಾಪ್ ಬಳಿ ವ್ಯಕ್ತಿಯೋರ್ವನನ್ನ ಕೊಲೆ ಮಾಡಲಾಗಿದೆ. 
ಕೊಲೆಯಾದ ವ್ಯಕ್ತಿಯನ್ನ‌ ಮಲ್ಲೇಶ್ ಯಾನೆ ಮಲ್ಲ(35) ಎಂದು ಗುರುತಿಸಲಾಗಿದೆ.

ಚಿಕ್ಕಲ್ ನ ಫ್ಲೈ ಓವರ್ ಬಳಿಯ ಶಿವಶಂಕರ್ ವೈನ್ ಶಾಪ್ ಬಳಿಯ ಚಾನೆಲ್ ಏರಿಯಾದಲ್ಲಿ ಮಲ್ಲೇಶ್ ಬೈಕ್ ನಲ್ಲಿ ಬರುವಾಗ ಹಿಂಬದಿ ಬೈಕ್ ನಲ್ಲಿ ಬಂದ ಮೂವರು ಡಿಕ್ಕಿ ಹೊಡೆಸಿದ್ದಾರೆ. ಮಲ್ಲೇಶ್ ಕೆಳಗೆ ಬಿದ್ದಿದ್ದಾನೆ. ಮಲ್ಲೇಶ್ ಕೆಳಗೆ ಬಿದ್ದಿದ್ದನ್ನ‌ ನೋಡಿ ಸ್ಥಳೀಯರು ರಸ್ತೆ ಅಪಘಾತವೆಂದು ಘಟನಾ ಸ್ಥಳಕ್ಕೆ ಓಡಿದ್ದಾರೆ.

ಎರಡು ವರ್ಷಗಳ ಹಿಂದೆ ಶಿಕ್ಷಕಿ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದರು ಇದರ ಹಿನ್ನೆಲೆಯಲ್ಲಿ ಧರ್ಮರಾಯನ ಕೇರಿ ನಿವಾಸಿಯಾದ ಸುಮಾರು 35 ವರ್ಷದ ಮಲ್ಲೇಶ್ ಆಲಿಯಾಸ್ ಮಲ್ಲ ಎನ್ನುವವನು ಜ್ಯೋತಿಗೆ ತನ್ನನ್ನು ಪ್ರೀತಿಸುವಂತೆ ಹೇಳಿ ನಿರಂತರವಾಗಿ ಹಿಂಸೆ ನೀಡುತ್ತಿದ್ದ ಕಾರಣ ಹಿಂಸೆಯನ್ನು ತಾಳಲಾರದೆ ಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದಳು.

ಈ ಪ್ರಕರಣ ನಡೆದು ಎರಡು ವರ್ಷಗಳ ನಂತರ ಅಂದರೆ ಇವತ್ತು 7:30ರ ಸುಮಾರಿಗೆ ಶಿವಶಂಕರ್ ವೈನ್ಸ್ ಪಕ್ಕ ಹೊಳೆಹೊನ್ನೂರು ರಸ್ತೆ ಮಟನ್ ಅಂಗಡಿಯ ಪಕ್ಕ ಮಲ್ಲನ ಮರ್ಡರ್ ಆಗಿದೆ.
ಈ ಕೊಲೆಯನ್ನು ತನ್ನ ಅಕ್ಕನ ಆತ್ಮಹತ್ಯೆಗೆ ಸೇಡು ತೀರಿಸಿಕೊಳ್ಳಲು ಆಕೆಯ ತಮ್ಮಂದಿರಾದ ಶ್ರೇಯಸ್ ಪಾತಾಲಿ, ಕಾರ್ತಿ, ಹಾಗೂ ಸಹಚರರು ಸೇರಿಕೊಂಡು ಮಾಡಿದ್ದಾರೆ ಎನ್ನಲಾಗುತ್ತಿದೆ.

ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೇಸನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆಬಿಸಿದ್ದಾರೆ.

Leave a Reply

Your email address will not be published. Required fields are marked *