POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಯೋಗ ಚಾಂಪಿಯನ್ ಗರಿ| Yoga – champion

ರಿಪ್ಪನ್ ಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಯೋಗ ಚಾಂಪಿಯನ್

ರಿಪ್ಪನ್ ಪೇಟೆ : ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಪೂಜಿನಗರ ಇವರ ಸಹಯೋಗದಲ್ಲಿ ನಡೆದ ಯೋಗ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನ್‌ಪೇಟೆಯ ಯೋಗ ಪಟುಗಳು ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು, ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. 

ಪುರುಷರ ವಿಭಾಗದಲ್ಲಿ ತೃತೀಯ ಬಿಕಾಂ ತರಗತಿಯ ಆಕಾಶ್. ಕೆ. ಆರ್, ಮೊಹ್ಮದ್ ಮುಸ್ತಾಫ, ನಂದನ್‌ಕುಮಾರ್. ಇ, ಅಭಿಷೇಕ್. ಎನ್, ಕಾರ್ತಿಕ್. ಎನ್. ಜಿ ಪ್ರಥಮ ಸ್ಥಾನ ಪಡೆದಿದ್ದು, ಮಹಿಳಾ ವಿಭಾಗದಲ್ಲಿ ತೃತೀಯ ಬಿಎ, ಮೇಘ. ಕೆ. ಎನ್, ಶೈಲಜಾ. ಜೆ. ಎಂ, ಸನು, ಜಯಶ್ರೀ ಹಾಗೂ ತೃತೀಯ ಬಿಕಾಂನ ಸಂಧ್ಯಾ. ಹೆಚ್. ಎ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಅಭಿಷೇಕ. ಎನ್ ಮತ್ತು ಸಂಧ್ಯಾ. ಹೆಚ್. ಎ ಈ ಕ್ರೀಡಾ ಪಟುಗಳು ಅಂತರ್‌ವಿಶ್ವವಿದ್ಯಾಲಯ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ. 

ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ. ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಕುಮಾರಸ್ವಾಮಿ. ಕೆ. ಸಿ, ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.