ಕ್ರೈಂ ಸುದ್ದಿ:
ಗಂಟಲಲ್ಲಿ ಬಲೂನ್ ಸಿಲುಕಿ ಬಾಲಕ ಸಾವು
ಬಲೂನ್ ಗಂಟಲಲ್ಲಿ ಸಿಲುಕಿ ಬಾಲಕ ಸಾವು ಶಿರಸಿ : ಬಲೂನ್ ಊದುತ್ತಿದ್ದ ವೇಳೇ ಆಕಸ್ಮಿಕವಾಗಿ ಅದು ಗಂಟಲಲ್ಲಿ ಸಿಲುಕಿ ಉಸಿರುಟ್ಟಿ ಬಾಲಕನೊಬ್ಬ ಸಾವನ್ನಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ನವೀನ್ ನಾರಾಯಣ್ (13) ಮೃತ ದುರ್ದೈವಿ. ಬಲೂನ್ ಗೆ ಗಾಳಿ ತುಂಬಿ ಆಟವಾಡುತ್ತಿದ್ದ. ಬಲೂನ್ ಗೆ ಗಾಳಿ ತುಂಬುವಾಗ ಉಸಿರು ಎಳೆದುಕೊಳ್ಳುವ ಸಂದರ್ಭದಲ್ಲಿ ಬಲೂನ್ ಬಾಯಿಯ ಒಳಗೆ ಹೋಗಿ, ಗಂಟಲಿಗೆ ಸಿಕ್ಕಿಕೊಂಡಿದೆ. ಇದರಿಂದಾಗಿ ಆತನಿಗೆ ಉಸಿರಾಡಲು ಕಷ್ಟವಾಗಿ, ಅಲ್ಲಿಯೆ ಕುಸಿದು…
ರಾಜೇಶ್ ಶೆಟ್ಟಿ ಹತ್ಯೆಯ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಶಿವಮೊಗ್ಗ ಪೊಲೀಸರು | ಇಬ್ಬರು ಎಸ್ಕೇಪ್
ರಾಜೇಶ್ ಶೆಟ್ಟಿ ಹತ್ಯೆಯ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಶಿವಮೊಗ್ಗ ಪೊಲೀಸರು | ಇಬ್ಬರು ಎಸ್ಕೇಪ್ ಹಳೆಯ ಬೊಮ್ಮನಕಟ್ಟೆಯಲ್ಲಿ ಶನಿವಾರ ನಡೆದ ರೌಡಿ ಶೀಟರ್ ರಾಜೇಶ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಶನಿವಾರ ಹಾಡಹಗಲೇ ಸುಮಾರು ಆರು ಜನರನ್ನು ಒಳಗೊಂಡ ತಂಡ ಮಾರಕಾಸ್ತ್ರಗಳಿಂದ ನಡು ರಸ್ತೆಯಲ್ಲಿ ರಾಜೇಶ್ ಶೆಟ್ಟಿಯನ್ನು ಬರ್ಬರ ಹತ್ಯೆಗೈದಿದ್ದರು. ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಚಿಟ್ಟೆ ನಾಗ, ಗಣೇಶ, ಕಿರಣ್ ಗೌಡ, ವೆಂಕಟೇಶ್ ರನ್ನು…
ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ
ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ಶಿವಮೊಗ್ಗ ನಗರದಲ್ಲಿ ವ್ಯಕ್ತಿಯೊಬ್ಬನನ್ನ ಬರ್ಬರ ಹತ್ಯೆಗೈದಿರುವ ಘಟನೆ ನಡೆದಿದೆ. ನಗರದ ಹಳೆಬೊಮ್ಮನ ಕಟ್ಟೆಯ ಮಾರಮ್ಮಗುಡಿ ಸಮೀಪದ ಗ್ಯಾರೇಜ್ ಒಂದರ ಬಳಿಯಲ್ಲಿ ಕಬಡ ರಾಜೇಶ್ ಶೆಟ್ಟಿ ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಸುಮಾರು ಒಂದು ಗಂಟೆ ಸುಮಾರಿಗೆ ಈ ಕೊಲೆ ನಡೆದಿದ್ದು ವಿನೋಬನಗರ ಪೊಲೀಸರು ದೌಡಾಯಿಸಿದ್ದಾರೆ. ನವುಲೆ ಆನಂದನ ಸಹಚರ ಆಗಿದ್ದ ರಾಜೇಶ್ ಶೆಟ್ಟಿ ಬಸವನ ಗುಡಿಯ ಕ್ಯಾಸೆಟ್ ಅಂಗಡಿ ಮಾಲೀಕ ರಾಘುಶೆಟ್ಟಿ ಮರ್ಡರ್ ಕೇಸ್ ನಲ್ಲಿದ್ದ ಎನ್ನಲಾಗುತಿದ್ದು,ಇತ್ತೀಚೆಗಷ್ಟೇ ತನ್ನ ವಿರೋಧಿ…
ಹೊಸನಗರ : ಕಚೇರಿಯಲ್ಲಿ ಲಂಚ ಪಡೆಯುತಿದ್ದ ನ್ಯಾಯಲಯದ ಎಪಿಪಿ ಲೋಕಾಯುಕ್ತ ಬಲೆಗೆ
ಹೊಸನಗರ : ಕಚೇರಿಯಲ್ಲಿ ಲಂಚ ಪಡೆಯುತಿದ್ದ ನ್ಯಾಯಲಯದ ಎಪಿಪಿ ಲೋಕಾಯುಕ್ತ ಬಲೆಗೆ ರಿಪ್ಪನ್‌ಪೇಟೆ : ರಬ್ಬರ್ ಮರ ಲೀಜ್ ವಿಚಾರವಾಗಿ ಇದ್ದ ಜಗಳದ ಕೇಸನ್ನು ರಾಜಿ ಮೂಲಕ ಬೇಗ ಮುಗಿಸಿಕೊಡುತ್ತೇನೆ ಎಂದು ಹೇಳಿ ಪಿರ್ಯಾದಿಯಿಂದ ಲಂಚ ಪಡೆಯುತ್ತಿದ್ದ ಹೊಸನಗರ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ರವಿ ಎನ್ನುವವರನ್ನು ಲೋಕಾಯುಕ್ತ ಪೊಲೀಸರು ಶುಕ್ರವರ ಸಂಜೆ ನ್ಯಾಯಾಲಯದ ಆವರಣದಲ್ಲೇ ಬಂಧಿಸಿದ್ದಾರೆ. ರಿಪ್ಪನ್‌ಪೇಟೆಯ ಕೆರೆಹಳ್ಳಿ ಗ್ರಾಮದ ಅಂಜನ್‌ಕುಮಾರ್ ರವರ ಅವರ ಕೇಸ್ ಮುಗಿಸಿಕೊಡಬೇಕಾದರೆ 5,೦೦೦ ರೂ ಕೊಡಬೇಕು ಎಂದು ಹೇಳಿ, ಪಿರ್ಯಾದುದಾರರ…
ಬ್ಯಾಂಕ್ ಉದ್ಯೋಗಿಗೆ ಆನ್ ಲೈನ್ ನಲ್ಲಿ ಲಕ್ಷಾಂತರ ರೂ ವಂಚನೆ – ದೂರು ದಾಖಲು
ಬ್ಯಾಂಕ್ ಉದ್ಯೋಗಿಗೆ ಲಕ್ಷಾಂತರ ರೂ ವಂಚಿಸಿದ ಆನ್ ಲೈನ್ ಖದೀಮರು ಶಿವಮೊಗ್ಗ: ಪ್ರತಿಷ್ಠಿತ ಟ್ರೇಡಿಂಗ್ ಕಂಪನಿಯೊಂದರ ಹೆಸರು ದುರ್ಬಳಕೆ ಮಾಡಿಕೊಂಡು ಬ್ಯಾಂಕ್ ಉದ್ಯೋಗಿಯೊಬ್ಬರಿಗೆ (ಹೆಸರು ಗೌಪ್ಯ) ಆನ್‌ಲೈನ್ ವಂಚಕರು 11.26 ಲಕ್ಷ ರೂ. ವಂಚಿಸಿದ್ದಾರೆ. ಬ್ಯಾಂಕ್ ಒಂದರ ಮಹಿಳಾ ಉದ್ಯೋಗಿಯ ಮೊಬೈಲ್‌ಗೆ ಪ್ರತಿಷ್ಠಿತ ಷೇರು ವಹಿವಾಟು ಸಂಸ್ಥೆಯೊಂದರ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ಪರಿಶೀಲಿಸಿದ ಬ್ಯಾಂಕ್ ಉದ್ಯೋಗಿ ಹಣ ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದರಿಂದ ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಲಾಗಿತ್ತು. ಆ ಲಿಂಕ್ ಬಳಸಿ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು…
ANANDAPURA | ನಿಲ್ಲಿಸಿದ್ದ ಕಾರಿಗೆ ಡಿಕ್ಕಿಯಾಗಿ ಐ10 ಕಾರು ಪಲ್ಟಿ
ANANDAPURA | ನಿಲ್ಲಿಸಿದ್ದ ಕಾರಿಗೆ ಡಿಕ್ಕಿಯಾಗಿ ಐ10 ಕಾರು ಪಲ್ಟಿ ಆನಂದಪುರ : ನಿಲ್ಲಿಸಿದ್ದ ಕಾರಿಗೆ ಹಿಂಬಂದಿಯಿಂದ ಇನ್ನೊಂದು ಕಾರು ಡಿಕ್ಕಿಯಾಗಿ ಪಲ್ಟಿಯಾಗಿರುವ ಘಟನೆ ಆನಂದಪುರದ ಹಳೇ ಪೊಲೀಸ್ ಉಪಠಾಣೆ ಬಳಿ ನಡೆದಿದೆ. ಆನಂದಪುರಂ ಹಳೇ ಉಪಠಾಣೆಯ ಬಳಿ ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಹೋಡಾ ಅಮೇಜ್ ಕಾರನ್ನ ಮರದ ಕೆಳಗೆ ನಿಲ್ಲಿಸಿದ್ದರು ಈ ವೇಳೆ ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಐ10 ಕಾರು ನಿಲ್ಲಿಸಿದ್ದ ಅಮೇಜ್ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಉರುಳಿಬಿದ್ದಿದೆ. ಅದೃಷ್ಟವಶಾತ್ ಐ೧೦ ಕಾರಿನಲ್ಲಿದ್ದ ಇಬ್ಬರು…
ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಸಾಗರ : ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ನೀಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಳಿಕೊಪ್ಪ ಗ್ರಾಮದ ಹಾನಂಬಿಯಲ್ಲಿ ನಡೆದಿದೆ. ಜನ್ನತ್ ನಗರದ ಪ್ರಕಾಶ್ ಶೆಟ್ಟಿ(36) ಮೃತ ದುರ್ಧೈವಿಯಾಗಿದ್ದಾನೆ. ಅರಳೀಕೊಪ್ಪ ಗ್ರಾಮದ ಹಾನಂಬಿ ಹೊಳೆಯ ಮೇಲ್ಭಾಗ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಯುವಕನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಪ್ರಕಾಶ್ ಶೆಟ್ಟಿ ಆತ್ಮಹತ್ಯೆಗೆ…
ಹೋರಿ ಬೆದರಿಸುವ ಹಬ್ಬ ನೋಡಿ ಹಿಂದಿರುಗುತಿದ್ದ ಯುವಕ ಚರಂಡಿಗೆ ಬಿದ್ದು ಸಾವು .!
ಹೋರಿ ಬೆದರಿಸುವ ಹಬ್ಬ ನೋಡಿ ಹಿಂದಿರುಗುತಿದ್ದ ಯುವಕ ಚರಂಡಿಗೆ ಬಿದ್ದು ಸಾವು .! ದನ ಬರುವುದನ್ನು ನೋಡಿ ಹೆದರಿ ಚರಂಡಿಗೆ ಬಿದ್ದ ಯುವಕ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ಶೇಕ್ ಸುಹೇಲ್ (೧೮) ಮೃತಪಟ್ಟ ಯುವಕನಾಗಿದ್ದಾನೆ. ಯಲವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ನೋಡಿ ವಾಪಾಸ್ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಹಿಂಬದಿಯಿಂದ ದನ ಬರುವುದನ್ನು ನೋಡಿ ಹೆದರಿ ಓಡುವ ಯತ್ನದಲ್ಲಿ ರಸ್ತೆ ಪಕ್ಕದ…
ಸಹೋದರಿಯ ಪ್ರೀತಿಗೆ ಅಡ್ಡಿಯಾದ ತಂದೆಯನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದ ಮಗ
ಸಹೋದರಿಯ ಪ್ರೀತಿಗೆ ಅಡ್ಡಿಯಾದ ತಂದೆಯನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದ ಮಗ ಸಹೋದರಿಯ ಪ್ರೀತಿಗೆ ಒಪ್ಪದ ತಂದೆಯನ್ನು ಮಗನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಸಂಬಂಧಿಕರೊಬ್ಬರ ಮಗನನ್ನು ಪ್ರೀತಿಸುತಿದ್ದ ಮಗಳಿಗೆ ಹಿಂಸೆ ನೀಡುತ್ತಿದ್ದ ತಂದೆಯನ್ನು ಮಗ ಕೊಲೆ ಮಾಡಿದ್ದಾನೆ. ಸಹೋದರಿಯ ಪ್ರೀತಿಯನ್ನು ತಂದೆಯ ಬಳಿ ಒಪ್ಪಿಸಲು ಹೋದ ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಗಳದಲ್ಲಿ ಶಿಕಾರಿಪುರ ಆಶ್ರಯ ಬಡಾವಣೆ ನಿವಾಸಿ ಮುಸ್ತಾಫ ಬೇಗ್(42) ಸಾವನ್ನಪ್ಪಿದ್ದಾನೆ.ಶಾಹಿದ್…
HOSANAGARA | ಶ್ರೀಗಂಧ ಸಾಗಿಸುತಿದ್ದ ಆರೋಪಿ ಮಾಲು ಸಮೇತ ವಶಕ್ಕೆ
HOSANAGARA | ಶ್ರೀಗಂಧ ಸಾಗಿಸುತಿದ್ದ ಆರೋಪಿ ಮಾಲು ಸಮೇತ ವಶಕ್ಕೆ ಶ್ರೀಗಂಧದ ಮರದ ತುಂಡನ್ನು ಅಕ್ರಮವಾಗಿ ಸಾಗಿಸುತಿದ್ದ ಆರೋಪಿಯೋರ್ವನನ್ನು ಮಾಲುಸಮೇತ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಹೊಸನಗರ ತಾಲೂಕು ಕಸಬಾ ಹೋಬಳಿ ಕಚ್ಚಿಗೆಬೈಲ್ ಗ್ರಾಮದಲ್ಲಿ ನಡೆದಿದೆ. ಕಚ್ಚಿಗೆ ಬೈಲ್ ಕಾನಗೋಡು ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಂಧದ ಮರಗಳನ್ನು ಕಡಿದು ತುಂಡುಗಳನ್ನಾಗಿ ತಯಾರಿಸಿ ಸಾಗಾಣಿಕೆ ಮಾಡುವಾಗ ಆರೋಪಿಯನ್ನ ಅರಣ್ಯ ಇಲಾಖೆ ಬಂಧಿಸಿದ್ದಾರೆ. ಹನೀಫ್ ಬಿನ್ ಯಾಕೂಬ್ ಸಾಬ್ ವಯಸ್ಸು 48ವರ್ಷ ಬಾನಿಗಾ ವಾಸಿ ಹೊಸಕೇಸರಿ ಗ್ರಾಮ ಹೊಸನಗರ…