POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಆಯನೂರು ಬಳಿ ಮರಕ್ಕೆ ಡಿಕ್ಕಿ‌ ಹೊಡೆದ ಖಾಸಗಿ ಬಸ್ : ಹಲವರಿಗೆ ಗಂಭೀರ ಗಾಯ

ಆಯನೂರು : ಇಲ್ಲಿನ ಸಮೀಪದ ಕದಂಬ ರೆಸ್ಟೋರೆಂಟ್ ಬಳಿ ಖಾಸಗಿ ಬಸ್ ಮರಕ್ಕೆ ಗುದ್ದಿ ಹಲವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

ಚಾಮೇನಹಳ್ಳಿಯಿಂದ ಶಿವಮೊಗ್ಗ ಕಡೆಗೆ ತೆರಳುತಿದ್ದ ಮಂಜುನಾಥ್ ಬಸ್  ವಾಹನವೊಂದನ್ನು ಹಿಂದಿಕ್ಕಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ಅಪಘಾತದಲ್ಲಿ ಚಾಮೇನಹಳ್ಳಿ ನಿವಾಸಿಗಳಾದ ಶಿಲ್ಪ(33) ಕೀರ್ತಿ(21) ಭೂಮಿಕಾ(21) ಮತ್ತು ಕಾವ್ಯಾ(21) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಮೂವರು ಶಿವಮೊಗ್ಗದ ಎಟಿ ಎನ್ ಸಿಸಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.