ಹುಂಚಾ : ಇಲ್ಲಿನ ಸಮೀಪದ ವಾರಂಬಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಊರಿನ ಹಿರಿ-ಕಿರಿಯ ನಾಗರೀಕರು ಒಗ್ಗಟ್ಟಾಗಿ ಶಾಸಕ ಹಾಗೂ ಎಲ್ಲಾ ಜನಪ್ರತಿನಿಧಿಗಳ ವಿರುದ್ದ ಧಿಕ್ಕಾರ ಕೂಗಿದ ಘಟನೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚ ಹೋಬಳಿಯ ವಾರಂಬಳ್ಳಿ, ನಿವಣೆ ಸಮೀಪ ನಡೆದಿದೆ.
ತೀರ್ಥಹಳ್ಳಿ – ಹೊಸನಗರ ತಾಲ್ಲೂಕಿನ ಗಡಿ ಭಾಗದ ವಾರಂಬಳ್ಳಿ, ನಿವಣೆ, ಗೊರಗೋಡು, ಜಯನಗರ, ಹೇರಗಲ್ಲು, ಕೊಳಗಿ, ಗೊರದಳ್ಳಿ, ಅಲಗಾರು, ಹುಣಸೆಮಕ್ಕಿ ಗ್ರಾಮಸ್ಥರು ಅಡಿಕೆ, ಬಾಳೆ ಸಸಿ, ಭತ್ತದ ಸಸಿಗಳನ್ನು ಕೆಸರಿನಿಂದ ಮುಚ್ಚಿಕೊಂಡಿರುವ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ವಿಶೇಷವಾಗಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿನಿತ್ಯ ಈ ಭಾಗದಲ್ಲಿ 100ಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿದ್ದು ಗ್ರಾಮದ ಸಂಪರ್ಕ ಕೊಂಡಿಯಾಗಿದೆ. ಎಷ್ಟೇ ಮನವಿ ನೀಡಿದರು ರಸ್ತೆ ಅಭಿವೃದ್ದಿ ಆಗುತ್ತಿಲ್ಲ.ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರನ್ನು ವಿಚಾರಿಸಿದರೆ ನಿಮ್ಮ ರಸ್ತೆ ಸದ್ಯದಲ್ಲೇ ಮಾಡಿಸಿಕೊಡುತ್ತೇನೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸ್ವಾತಂತ್ರ್ಯ ಲಭಿಸಿ 75ನೇ ವರ್ಷದ ಅಮೃತ ಮಹೋತ್ಸವವನ್ನು ವಿಜೃಂಬಣೆಯಿಂದ ಆಚರಿಸಿದ್ದೇವೆ. ಆದರೆ ಗ್ರಾಮೀಣ ಪ್ರದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ನಾಲ್ಕು ವರ್ಷಗಳ ಹಿಂದೆ ನೆಟ್ವರ್ಕ್ ಸಮಸ್ಯೆ ಎಂದು ಪತ್ರ ಬರೆದಿದ್ದಾಗಲು ಇಂತಹದ್ದೇ ತಾತ್ಸಾರದ ಉತ್ತರಗಳು ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇