ರಿಪ್ಪನ್‌ಪೇಟೆಯಲ್ಲಿ ಗಣೇಶೋತ್ಸವದ ಅಂಗವಾಗಿ ಶಾಂತಿ ಸಭೆ : ಡ್ರೋಣ್ ಕ್ಯಾಮೆರಾ ಅಳವಡಿಕೆಗೆ ಸೂಚನೆ

ರಿಪ್ಪನ್‌ಪೇಟೆ : ಗಣೇಶೋತ್ಸವ ಅಂಗವಾಗಿ ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಪೊಲೀಸ್ ಶಾಂತಿ ಸಮಿತಿ ಸಭೆಯು ಹೊಸನಗರ ವೃತ್ತ ನಿರೀಕ್ಷಕ ಗಿರೀಶ್ ಅಧ್ಯಕ್ಷತೆಯಲ್ಲಿ ಜರುಗಿತು.

ಶಿವಮೊಗ್ಗ ಜಿಲ್ಲೆಯಲ್ಲಿಯೇ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಗಣಪತಿ ಅಚರಣೆ ಅದ್ದೂರಿಯಾಗಿ ಅಚರಿಸಲಾಗುತ್ತದೆ.ಮತ್ತು ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಸುಮಾರು ೧೦೪ ಕಡೆಯಲ್ಲಿ ಗಣಪತಿಗಳನ್ನು ಪ್ರತಿಷ್ಟಾಪಿಸಲಾಗುತ್ತಿದ್ದು ಪ್ರತಿಷ್ಟಾಪನೆಗೆ ಇಲಾಖೆ ಅನುಮತಿಗಾಗಿ ಹೊಸನಗರಕ್ಕೆ ಹೋಗಿ ಬರಬೇಕಾಗುತ್ತದೆ ಇದರಿಂದ ಅಯೋಜಕರಿಗೆ ತುಂಬ ಕಷ್ಟವಾಗುತ್ತದೆ ಆ ಕಾರಣ ರಿಪ್ಪನ್‌ಪೇಟೆಯಲ್ಲಿಯೇ ಅನುಮತಿ ನೀಡುವ ಬಗ್ಗೆ ವಿಶೇಷ ಅಧಿಕಾರಿಯನ್ನು ನೇಮಿಸಿ ಎಂದು ಒಕ್ಕೂರಲ ನಿರ್ಧಾರವನ್ನು ಅಧಿಕಾರಿಗಳ ಮುಂದೆ ಇಟ್ಟರು.


ಜೆಡಿಎಸ್ ರಾಜ್ಯ ಮುಖಂಡ ಆರ್.ಎ.ಚಾಬುಸಾಬ್ ಮಾತನಾಡಿ ಇಲ್ಲಿನ ಗಣೇಶೋತ್ಸವ ೫೫ ನೇ ವರ್ಷದ ಅಚರಣೆಯ ಸಂದರ್ಭದಲ್ಲಿ ವಿನಾಯಕ ವೃತ್ತಕ್ಕೆ ಉತ್ಸವ ಬರುವಾಗ ಹಾರ ಹಾಕಿ ಸ್ವಾಗತಿಸುವ ಮೂಲಕ ಹಿಂದು ಮುಸ್ಲಿಂ ಎಂಬ ಬೇದ ಭಾವನೆಯನ್ನು ದೂರಮಾಡಿ ನಾವುಗಳೆಲ್ಲಾ ಭಾರತೀಯರು ಅನ್ನೋ ಸಂದೇಶ ನೀಡಬೇಕು. ಇದೇನೋ ಭಟ್ಕಳ ಅಥವಾ ಮಂಗಳೂರು ಅಲ್ಲ ನಾವು ನಿತ್ಯ ಬೆಳಗಾದರೆ ಹಿಂದುಗಳ ಮುಖ ನೋಡಬೇಕು ಭಟ್ಕಳದಲ್ಲಿ ಮಂಗಳೂರಿನಲ್ಲಿ ಮುಸ್ಲಿಂ ಜನಾಂಗದವರೇ ಹೆಚ್ಚು ಇರುವುದರಿಂದ ಯಾರು ಏನು ಎಂಬುದರ ಅರಿವು ಇರುವುದಿಲ್ಲ ನಾವುಗಳೆಲ್ಲಾ ಸ್ನೇಹ ಸೌಹಾರ್ದತೆಯಿಂದ ಬೆಳೆದು ಬಂದವರು ನಮ್ಮೊಳಗೆ ಬೇದಭಾವ ಏಕೆ ಎಂದು ಹೇಳಿದರು.


ಜನಪರ ಹೋರಾಟ ವೇದಿಕೆ ಅಧ್ಯಕ್ಷ ಅರ್.ಎನ್ ಮಂಜುನಾಥ ಮಾತನಾಡಿ ಹಬ್ಬ ಹರಿದಿನಗಳಲ್ಲಿ ಜಾತಿ ಬೇದ ಬರುತ್ತದೆ ಅದನ್ನು ಮೊದಲು ಅದನ್ನು ದೂರಮಾಡಬೇಕು ಗಣಪತಿ ಪ್ರತಿಷ್ಟಾಪನೆಗಾಗಿ ಸರ್ಕಾರದ ಅನುಮತಿ ಪಡೆಯಲು ದೂರದ ಹೊಸನಗರ ತಾಲ್ಲೂಕ್ ಕಛೇರಿಗೆ ಅಲೆದಾಡಬೇಕಾದ ಸ್ಥಿತಿ ಇದ್ದು ಕಳೆದ ಎರಡು ವರ್ಷಗಳಿಂದ ರಿಪ್ಪನ್‌ಪೇಟೆಯಲ್ಲಿ ಕೊಡುವ ವ್ಯವಸ್ಥೆ ಮಾಡಲಾಗಿತು ಅದರಂತೆ ಮುಂದುವರಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿ ಮನೆ ಮನೆಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಮೊದಲು ಅದನ್ನು ಬಂದ್ ಮಾಡಿ ನಮ್ಮೂರನ್ನು ಶಾಂತಿ ಸುವ್ಯವಸ್ಥೆಯಿಂದಿರಲು ಮುಂದಾಗಬೇಕು ಎಂದು ಸಲಹೆ ನೀಡಿದರು.


ಹೊಸನಗರ ವೃತ್ತ ನಿರೀಕ್ಷಕ ಗಿರೀಶ್ ಮಾತನಾಡಿ ಗಣಪತಿ ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಸಂವಿಧಾನದ ಕಾನೂನು ಪರಿಪಾಲನೆ ಮಾಡುವುದು ಮೂಲ ಉದ್ದೇಶವಾಗಿದೆ ಸರ್ಕಾರ ಗಣಪತಿ ಹಬ್ಬದ ಅಚರಣೆಗಾಗಿ ಕೆಲವು ಕಾನೂನಾತ್ಮಕ ನಿಯಮಗಳನ್ನು ಜಾರಿಗೊಳಿಸಿದ್ದು ಅದನ್ನು ಕಡ್ಡಾಯವಾಗಿ ಪಾಲಿಸುವುದು ಮತ್ತು ಡಿಜೆ ಹಾಗೂ ಹೊರ ಊರಿನಿಂದ ಬಂದವರ ಕಡೆ ಹೆಚ್ಚು ನಿಗಾ ಇಡುವುದು, ಹಳೆ ವೈಷಮ್ಯವನ್ನು ಹಬ್ಬ ಹರಿದಿನಗಳಲ್ಲಿ ತೀರಿಸಿಕೊಳ್ಳುವ ವಿಕೃತ ಮನಸ್ಸಿನವರನ್ನು ಪತ್ತೆ ಹಚ್ಚಿ ರಕ್ಷಣಾ ಇಲಾಖೆಯವರ ಗಮನಕ್ಕೆ ತರುವುದು ಹೀಗೆ ಹಲವು ವಿಚಾರಗಳ ಕುರಿತು ಗಣಪತಿ ಸೇವಾ ಸಮಿತಿಯವರಿಗೆ ಮಾಹಿತಿ ನೀಡಿ ಅಂತಹ ಅವಘಡಗಳು ಸಂಭವಿಸಿದರೆ ಅಯೋಜಕರ ವಿರುದ್ದವೇ ಮೊದಲು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದರು.

ಹಿಂದು ಮಹಾಸಭಾ ಅಧ್ಯಕ್ಷ ವೈ.ಜೆ.ಕೃಷ್ಣ, ಎಂ.ಸುರೇಶ್‌ಸಿಂಗ್, ಜೆ.ಜಿ.ಸದಾನಂದ,ಗ್ರಾ.ಪಂ ಸದಸ್ಯ ಅಸೀಫ್ ಭಾಷಾಸಾಬ್ ಇನ್ನಿತರರು  ಮಾತನಾಡಿದರು.


ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುಳ,ಉಪಾಧ್ಯಕ್ಷೆ ಮಹಾಲಕ್ಷಿ,ಧನಲಕ್ಷಿ,ವನಮಾಲ,ದೀಪಾ ಸುದೀರ್,

ಉಪತಹಶೀಲ್ದಾರ್ ಹುಚ್ಚರಾಯಪ್ಪ,ಪಿಎಸ್‌ಐ ಶಿವಾನಂದಕೋಳಿ,ಪಿಡಿಓ ಜೆ.ಚಂದ್ರಶೇಖರ್, ಮೆಸ್ಕಾಂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಬಕಾರಿ ಇಲಾಖೆ ಅಧಿಕಾರಿಗಳು ಶಾಂತಿ ಸಮಿತಿ ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.

ಪಿಎಸ್‌ಐ ಶಿವಾನಂದ ಕೋಳಿ ಸ್ವಾಗತಿಸಿ ಪೊಲೀಸ್ ಮಹಿಳಾ ಪೇದೆ ನಿರೂಪಿಸಿದರು.ಕೊನೆಯಲ್ಲಿ ಜೆ.ಚಂದ್ರಶೇಖರ್ ವಂದಿಸಿದರು.

Leave a Reply

Your email address will not be published. Required fields are marked *