ಹೊಸನಗರ : ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರು ಜಗಳವಾಡಿಕೊಂಡು ಒಬ್ಬನ ತಲೆಗೆ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ನಾಗರಾಜ್ ಎಂಬ ಯುವಕನ ಮೇಲೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ತಮ್ಮ ತಮ್ಮಲ್ಲಿಯೇ ಜಗಳವಾಡಿಕೊಂಡು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ.ಗಾಯಾಳುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗರಾಜ್ ಹೊಸನಗರ ಬಸ್ ನಿಲ್ದಾಣದ ಬಳಿಯಿರುವ ಕೋರಿಯರ್ ಕಚೇರಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುತ್ತಾನೆ.
ಆ. 24 ರಂದು ಹೊಸನಗರ ಟೌನ್ ನ ಚೌಡಮ್ಮರಸ್ತೆಯಲ್ಲಿರುವ ವೀರಭದ್ರಪ್ಪನವರ ಓಣಿಯಲ್ಲಿ ನಾಗರಾಜ್ ಮತ್ತು ಸ್ನೇಹಿತರು ಸಾರ್ವಜನಿಕ ಸ್ಥಳದಲ್ಲಿ ಮಾತನಾಡುತ್ತಾ ನಿಂತಿದ್ದಾಗ ನಾಗರಾಜ್ ಮೊಬೈಲ್ ಗೆ ಕೋರಿಯರ್ ಗ್ರಾಹಕರೊಬ್ಬರು ಕರೆ ಮಾಡಿದಾಗ ನಾಗರಾಜ್ ಗೂ ಮತ್ತು ಮೊಬೈಲ್ ಕರೆ ಮಾಡಿದ ವ್ಯಕ್ತಿಯ ನಡುವೆ ಜಗಳ ಉಂಟಾಗಿದೆ.
ನಾಗರಾಜ್ ಮೊಬೈಲ್ ನಲ್ಲಿ ಬೈದಾಗ ಜೊತೆಯಲ್ಲಿದ್ದ ಜಗದೀಶ್ ನನಗೆ ಬೈದಿರುವುದಾಗಿ ನಾಗರಾಜ್ ನೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಜಗಳವಾಡುತ್ತಾ ಜಗದೀಶ್ ನಾಗರಾಜ್ ಗೆ ಜಾತಿ ನಿಂದನೆ ಮಾಡಿ ಅಲ್ಲೆ ಪಕ್ಕದಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ನಾಗರಾಜ್ ತೀವ್ರಗಾಯಗೊಂಡು ಕುಸಿದು ಬಿದ್ದಿದ್ದಾನೆ.
ಗಾಯಾಳು ನಾಗರಾಜ್ ನನ್ನು ಹೊಸನಗರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ನಾಗರಾಜ್ ಮತ್ತು ಜಗದೀಶ್ ಸ್ನೇಹಿತರಾಗಿರುವುದರಿಂದ ಅವರಲ್ಲೇ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಬಂದರೂ ಸಹ ನಾಗರಾಜ್ ನ ಆರೋಗ್ಯ ದಿನದಿಂದ ದಿನಕ್ಕೆ ಕುಸಿದಿದೆ.
ಪರಸ್ಪರ ಬಗೆಹರಿಸಿಕೊಳ್ಳುವ ದೃಷ್ಠಿಯಿಂದ ನಾಗರಾಜ್ ತಮ್ಮಪೋಷಕರಿಗೆ ಜಾರಿ ಬಿದ್ದು ತಲೆಗೆಪೆಟ್ಟು ಬಿದ್ದಿದೆ ಎಂದು ಹೇಳಿದ್ದಾನೆ. ಆದರೆ ನಂತರ ತಾಯಿ ಬಂದು ಕೇಳಿದಾಗ ನಾಗರಾಜ್ ಸತ್ಯ ಬಿಚ್ಚಿಟ್ಟಿದ್ದಾನೆ.
ತಾಯಿ ಲಲಿತರವರು ಹೊಸನಗರ ಪೊಲೀಸ್ ಠಾಣೆಯಲ್ಲಿ ಜಗದೀಶ್ ವಿರುದ್ಧ ಜಾತಿ ನಿಂದನೆ ಮತ್ತು ಬಿಯರ್ ಬಾಟಲಿನಿಂದ ಹಲ್ಲೆ ಮಾಡಿದ ಆರೋಪದ ಅಡಿ ದೂರು ನೀಡಿದ್ದಾರೆ. ನಾಗರಾಜ್ ನ ತಲೆಗೆ ತೀವ್ರವಾಗಿ ಗಾಯವಾಗಿದ್ದರಿಂದ ಮೆಗ್ಗಾನ್ ನಿಂದ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.