ಶಿವಮೊಗ್ಗ : ಇಲ್ಲಿನ ಮೆಗ್ಗಾನ್ ಆಸ್ಪತ್ರೆ ಹೊರಗುತ್ತಿಗೆ ಉದ್ಯೋಗಿಯೊಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವಿಸಿದ ಮಹಿಳೆಗೆ, ಸಾಲದ ಹಣಕ್ಕಾಗಿ ನಾಲ್ವರು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರಂತೆ. ಈ ಮಾನಸಿಕ ಕಿರುಕುಳ ಹಾಗೂ ತಮ್ಮ ಮೇಲಿನ ಲೈಂಗಿಕ ಕಿರುಕಳ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ವಿಷ ಸೇವಿಸಿದ ಪತಿ ಬಳಿಯಲ್ಲಿ 20 ಸಾವಿರ ರೂಪಾಯಿ ಪಡೆದಿದ್ದರಂತೆ. ಅದು ಕೂಡ 10 ಪರ್ಸೆಂಟ್ ಬಡ್ಡಿಗೆ! ಆದರೆ ಈ ಸಾಲವನ್ನು ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲಿವರೆಗೂ ಪತಿಗೆ ಎದುರಾಗಿದ್ದ ಕಿರುಕುಳ ಅವರ ಪತ್ನಿ ಕಡೆಗೆ ತಿರುಗಿದೆ.
ಸಾಲ ಕೊಟ್ಟ ವ್ಯಕ್ತಿಯು ಸಾಲ, ಸಾಲದ ಬಡ್ಡಿ, ಬಾಕಿ ಬಡ್ಡಿಗೆ ಬಡ್ಡಿ ಹೀಗೆ ನೋರೊಂದು ವಿವರ ಕೊಟ್ಟು ಹಣಕೊಡುವಂತೆ ಪೀಡಿಸುತ್ತಿದ್ದನಂತೆ. ಅಷ್ಟೆಅಲ್ಲದೆ ಮಹಿಳೆಯಿದ್ದ ಮನೆಗೆ ನುಗ್ಗಿ ಮಕ್ಕಳನ್ನು ನಿಂದಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪವಿದೆ. ಇಷ್ಟೆ ಅಲ್ಲದೆ ಮಹಿಳೆಯ ಜಾತಿ ನಿಂದನೆ ಮಾಡಿ, ಚಪ್ಪಲಿಯಲ್ಲಿ ಹೊಡೆದಿರುವ ಆರೋಪ ಕೂಡ ಕೇಳಿಬಂದಿದೆ.
ಇದರಿಂದ ಬೇಸತ್ತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ದೂರಿನ ಆಧಾರದ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ.