Headlines

ಮನೆಗೆ ನುಗ್ಗಿದ ನೀರು – ಗೋಡೆ ಕುಸಿತದಿಂದ ನಾಲ್ವರಿಗೆ ಪೆಟ್ಟು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಮನಗದ್ದೆ ನಿವಾಸಿ ಲೋಕೇಶ್ ಎಂಬವರ ಮನೆಯ ಹೊರಭಾಗದ ಗೋಡೆ ಕುಸಿದ ಪರಿಣಾಮ ಮೂವರಿಗೆ ಗಂಭೀರ ಪೆಟ್ಟು ತಗುಲಿದೆ.

ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಮನೆಯ  ಹೊರಭಾಗದಲ್ಲಿ   ಕೃಷಿ  ಸಾಮಾಗ್ರಿಗಳನ್ನು ದಾಸ್ತಾನಿರಿಸಿದ ಕಡುಮಾಡಿನ ಒಳಗೆ ಪ್ರವಾಹದ ರೀತಿಯಲ್ಲಿ   ಏಕಾಏಕಿ ನೀರು ನುಗ್ಗಿತ್ತು. ಕುಟುಂಬಸ್ಥರು ಸೇರಿ ಅಲ್ಲಿದ್ದ ಕೃಷಿ ಪರಿಕರಗಳನ್ನು ಒಳಗೆ ಸಾಗಿಸುತ್ತಿರುವಾಗ ನೀರಿನ ರಭಸಕ್ಕೆ ಗೋಡೆ  ಸಂಪೂರ್ಣ ಕುಸಿದು ಬಿದ್ದು ಗೋಡೆಯಡಿಯಲ್ಲಿ ನಾಲ್ವರು ಸಿಲುಕಿಕೊಂಡರು.

ತಕ್ಷಣವೇ ಉಳಿದವರು ನಾಲ್ವರನ್ನು ಹೊರಕ್ಕೆಳೆದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಈ ದುರ್ಘಟನೆಯಲ್ಲಿ ಲೋಕೇಶ್ ಪತ್ನಿ ವೇದಾವತಿ ಅವರಿಗೆ ಕಾಲು ಹಾಗೂ ತಲೆಗೆ ಗಂಭೀರ ಪೆಟ್ಟು ತಗುಲಿತ್ತು. ಕಾಲು ಮುರಿದಿದೆ.ಮಕ್ಕಳಾದ ಜಿ .ಎನ್ ತೇಜಸ್ ಹಾಗೂ ಜಿ.ಎನ್ ಹರ್ಷವರ್ಧನ್ ಗೆ ಗಂಭೀರ ಪೆಟ್ಟು ತಗುಲಿ  ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತಾಯಿ ಲಕ್ಷ್ಮಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

 ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬೆಳ್ಳೂರು ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಹಾಗೂ ಪಿಡಿಒ ಭೇಟಿ ನೀಡಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *