Headlines

ಹಣದ ವಿಚಾರಕ್ಕೆ ಗುತ್ತಿಗೆದಾರನಿಂದ ತಂದೆ ಮತ್ತು ಮಗನಿಗೆ ಚಾಕು ಇರಿತ : ತಂದೆ ಸಾವು

ಹಣದ ವಿಚಾರದಲ್ಲಿ ಅಪ್ಪ ಮತ್ತು ಮಗನಿಗೆ ಕಟ್ಟಡದ ಕಂಟ್ರ್ಯಾಕ್ಟರ್ ಚಾಕುವಿನಿಂದ ಇರಿದ ಘಟನೆ ಶಿರಾಳಕೊಪ್ಪದಲ್ಲಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ತಂದೆ ದಯಾನಂದ್(69) ಮೃತಪಟ್ಟಿದ್ದಾರೆ.

ದಯಾನಂದ್ ಮತ್ತು ರಾಘವೇಂದ್ರ ಎಂಬುವರು ಶಿರಾಳಕೊಪ್ಪದಲ್ಲಿ ಹಾರ್ಡ್ ವೇರ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದು ಇವರ ನಿವೇಶನದ ಜಾಗದಲ್ಲಿ ಕಟ್ಟಡ ಕಟ್ಟಲು ಕಂಟ್ರ್ಯಾಕ್ಟರ್ ಕೋಟೇಶ್ ಎಂಬುವರಿಗೆ ಗುತ್ತಿಗೆ ನೀಡಲಾಗಿತ್ತು.


ಕಟ್ಟಡ ಸರಿ ಕಟ್ಟುತ್ತಿಲ್ಲವೆಂದು ಅಪ್ಪ ದಯಾನಂದ್ ಮತ್ತು ಮಗ ರಾಘವೇಂದ್ರ ಬೇರೆಯವರಿಗೆ ಕಟ್ಟಡದ ಗುತ್ತಿಗೆಯನ್ನ ನೀಡಿದ್ದರು. ಕಟ್ಟಡ ನಿರ್ಮಾಣದ ಬಾಕಿ ಹಾಣ ನೀಡಬೇಕೆಂದು ಕೋಟೇಶ್ ಬಹಳದಿನದಿಂದ ದಯಾನಂದ್ ಮತ್ತು ರಾಘವೇಂದ್ರರಿಗೆ ಬೆನ್ನುಬಿದ್ದಿದ್ದನು.



ಇಂದು ಶಿರಾಳಕೊಪ್ಪದ ಎಸ್ ಎಸ್ ರಸ್ತೆಯಲ್ಲಿರುವ ಅವರ ಅಂಗಡಿಗೆ ಹೋದ ಕೋಟೇಶ್ ಅಪ್ಪ ಮತ್ತು ಮಗನಿಗೆ ಚಾಕು ಇರಿದಿದ್ದಾನೆ. ಅಪ್ಪನಿಗೆ ಚಾಕು ಇರಿದ ಕೋಟೇಶ್ ಮಗ ರಾಘವೇಂದ್ರನಿಗೆ ಚಾಕು ಇರಿದಿದ್ದಾನೆ. ಇದನ್ನ ಕಂಡ ದಯಾನಂದ್ ಅವರಿಗೆ ಉಸಿರಾಟ ತೊಂದರೆ ಆಗಿದೆ.



ಇಬ್ಬರನ್ನೂ ತಕ್ಷಣ ಶಿರಾಳಕೊಪ್ಪ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿದ್ದಾರೆ. ಅಪ್ಪ ದಯಾನಂದ್ ಗೆ ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ರಾಘವೇಂದ್ರರವನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

Leave a Reply

Your email address will not be published. Required fields are marked *