ತೀರ್ಥಹಳ್ಳಿ : ರಾಜ್ಯಾದ್ಯಂತ ಗೃಹಸಚಿವರ ಮೇಲೆ ಬಹುದೊಡ್ಡ ಸೈಟ್ ಹಗರಣದ ಆಪಾದನೆ ಇದೆ. ಆರಗ ಜ್ಞಾನೇಂದ್ರರವರು ಬೆಂಗಳೂರಿನಲ್ಲಿ ಅಕ್ರಮವಾಗಿ 50 ಕೋಟಿ ಸೈಟ್ ತಾವು ತೆಗೆದುಕೊಂಡು ಅಧಿಕಾರಿಗಳನ್ನು ಮನೆಗೆ ಹೋಗುವ ಹಾಗೆ ಮಾಡಿದ್ದಾರೆ. ಹೈಕೋರ್ಟ್ ಕೂಡ ಈ ವಿಚಾರವಾಗಿ ಇವರ ಕಪಾಳಕ್ಕೆ ಹೊಡೆದಿದ್ದಾರೆ. ಹಾಗಾಗಿ ತೀರ್ಥಹಳ್ಳಿ ಕ್ಷೇತ್ರದ ಘನತೆ ಕಾಪಾಡಲು ರಾಜೀನಾಮೆ ಕೊಡಬೇಕು ಎಂದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಆಗಿನ ಕಾಲದಲ್ಲಿ ಕಡಿದಾಳ್ ಮಂಜಪ್ಪನವರಿಗೆ ಸೈಟ್ ಕೊಡಲು ಹೋದಾಗಲೇ ಅದನ್ನು ತಿರಸ್ಕಾರ ಮಾಡಿದ್ರು ಆದರೆ ಜ್ಞಾನೇಂದ್ರ ಆ ರೀತಿಯಲ್ಲಿ ಇಲ್ಲ. ಜ್ಞಾನೇಂದ್ರ ಅವರು ಯಾವಾಗಲು ಹೇಳ್ತ ಇದ್ರೂ ಕಿಮ್ಮನೆ ರತ್ನಾಕರ್ ಬಂಗಾರದಲ್ಲಿ ಹಾಲು ಕುಡಿಯುವವರು ನಾನು ಹಾಳೆ ತಟ್ಟೆ ಅಂತ ಚುನಾವಣೆಯಲ್ಲಿ ಗೆಲುವು ಆಗುವವರೆಗೂ ಮಾತಾಡ್ತಾ ಇದ್ರೂ. ಈಗ ಅದು ಉಲ್ಟಾ ಆಗಿದೆ ಎಂದರು
ನನಗೆ ತಿಳಿದ ಹಾಗೆ ಹಿಂದೆ ಒಬ್ಬರು ಸೀರೆ ಹಂಚಿದ್ದರು, ಆದರೆ ಈಗ ಗೃಹಸಚಿವರು 1000 ರೂ ಬೆಲೆ ಬಾಳುವ ಬೆಳ್ಳಿ ನಾಣ್ಯವನ್ನು 10000 ಕ್ಕೂ ಹೆಚ್ಚು ನಾಣ್ಯ ಮಾಡಿಸಿ 4000 ಮಹಿಳೆಯರಿಗೆ ಮಾತ್ರ ಹಂಚಿದ್ದಾರೆ. ಉಳಿದಿದ್ದು ಏನಾಯಿತು ಗೊತ್ತಿಲ್ಲ. ನಾನು ಕೂಡ ಮಂತ್ರಿಯಾಗಿದ್ದೆ ಆದ್ರೆ ಈಗ ವಾಹನ, ಬ್ಯಾಂಕ್ ಹೀಗೆ ಎಲ್ಲವು ಸಾಲ ಇದೆ. ಆದರೆ ಇವರು ಮಂತ್ರಿಯಾಗಿ ಬೆಳ್ಳಿ ನಾಣ್ಯ ಕೊಡುವ ಲೇವಲ್ ಗೆ ಹೋದರ ಎಂಬುದು ಪ್ರೆಶ್ನೆಯಾಗಿದೆ.
ತೀರ್ಥಹಳ್ಳಿ ಸುತ್ತಮುತ್ತ ಎಷ್ಟೋ ರೈತರು ಮನೆ, ನಿವೇಶನ ಇಲ್ಲದೆ ಬಾಡಿಗೆ ಮನೆಯಲ್ಲಿ ಇದ್ದಾರೆ. ಆದರೆ ಇವರು ಬೆಂಗಳೂರಿನಲ್ಲಿ 50 ಕೋಟಿ ಸೈಟ್ ಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿ ಬೆಳ್ಳಿ ನಾಣ್ಯ ಕೊಡುತ್ತಾರೆ ಇವರಿಗೆ ಹಣ ಎಲ್ಲಿಂದ ಬಂತು ಎನ್ನುವುದು ಗೊತ್ತಾಗಬೇಕಿದೆ. ಹೀಗೆ ಆದರೆ ಚುನಾವಣೆಯಲ್ಲಿ ಚಿನ್ನದ ನಾಣ್ಯ ಕೊಡುತ್ತಾರೆ ಅನಿಸುತ್ತದೆ ಎಂದರು.
ಇನ್ನು ತೀರ್ಥಹಳ್ಳಿ ಪೊಲೀಸರು ದಬ್ಬಾಳಿಕೆ ಮಾಡುತ್ತಿದ್ದಾರೆ ಅದರಲ್ಲೂ ಕಾಂಗ್ರೆಸ್ ನವರು ಮಾತನಾಡಿದ್ರೆ ಸಾಕು ಎಫ್ ಐ ಆರ್ ಹಾಕ್ತಾರೆ.
ಸಂದೇಶ್ ಜವಳಿ, ಕುಕ್ಕೆ ಪ್ರಶಾಂತ್ ಎಲ್ಲಾ ಏನೇ ಮಾತನಾಡಿದರು ಎಫ್ ಐ ಆರ್ ಇಲ್ಲವೇ ಇಲ್ಲ.
ತೀರ್ಥಹಳ್ಳಿಯ ಎಪಿಎಂಸಿ ಬಳಿ ಗಲಾಟೆ ಮಾಡಿದರು ಎಂಬ ಕಾರಣಕ್ಕೆ ಕಾಲೇಜು ವಿದ್ಯಾರ್ಥಿಗಳ ಮೇಲೆ ಎಫ್ ಐ ಆರ್ ಹಾಕಿದ್ರು. ಆ ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡಿದ್ರು. ಮಕ್ಕಳ ಭವಿಷ್ಯ ವನ್ನು ಜ್ಞಾನೇಂದ್ರ ಹಾಳು ಮಾಡುತ್ತಿದ್ದಾರೆ. ಅದರಲ್ಲೂ ಜಾತಿ ನೋಡಿ ಈ ಕೆಲಸ ಮಾಡುತ್ತಿದ್ದಾರೆ. ಇವರು ಖಂಡಿತವಾಗಿ ಸ್ವರ್ಗಕ್ಕೆ ಹೋಗಲ್ಲ ಎಂದರು.
ಪಿ ಎಸ್ ಐ ಹಗರಣದಲ್ಲಿ ಈಗಾಗಲೇ 30 ಜನ ಜೈಲಿಗೆ ಹೋಗಿದ್ದಾರೆ ಅವರೆಲ್ಲರಿಗೂ ಹೆಡ್ ಜ್ಞಾನೇಂದ್ರ. ತೀರ್ಥಹಳ್ಳಿಗೆ ಇಂತಹ ಜನಪ್ರತಿನಿಧಿ ಅಗತ್ಯ ಇದೆಯಾ ? ತೀರ್ಥಹಳ್ಳಿ ಕ್ಷೇತ್ರದ ಘನತೆ ಕಾಪಾಡಲು ಆರಗ ಜ್ಞಾನೇಂದ್ರ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಸ್ತೂರ್ ಮಂಜುನಾಥ್, ವಿಶ್ವನಾಥ್ ಶೆಟ್ಟಿ, ಪ. ಪಂ ಅಧ್ಯಕ್ಷೆ ಶಬನಮ್, ಸುಶೀಲ ಶೆಟ್ಟಿ, ಗೀತಾ ರಮೇಶ್, ಮಂಜುಳಾ ನಾಗೇಂದ್ರ, ಆದರ್ಶ ಹುಂಚದಕಟ್ಟೆ, ಪೂರ್ಣೇಶ್ ಕೆಳಕೆರೆ ಸೇರಿ ಹಲವರು ಉಪಸ್ಥಿತರಿದ್ದರು.
ವರದಿ : ಅಕ್ಷಯ್ ಕುಮಾರ್