Headlines

ಸ್ಮಶಾನದ ಜಾಗ ಒತ್ತುವರಿ : ಮೃತದೇಹ ಇಟ್ಟು ಗ್ರಾಮಸ್ಥರ ಪ್ರತಿಭಟನೆ

ಸೊರಬ : ಸರ್ಕಾರದಿಂದ ಮಂಜೂರಾದ ರುದ್ರಭೂಮಿಯನ್ನು ಅತಿಕ್ರಮಣಕಾರರಿಂದ ತೆರವುಗೊಳಿಸುವಂತೆ ಒತ್ತಾಯಿಸಿ ಊರಿನ ಗ್ರಾಮಸ್ಥರೆಲ್ಲಾ ಸೇರಿ ಮೃತದೇಹವನ್ನು ಇಟ್ಟು ಸೊರಬ ಮುಖ್ಯ ರಸ್ತೆಯಲ್ಲಿ ಪ್ರತಿಭಟಿಸಿದ ಘಟನೆ ನಡೆದಿದೆ.

ತಾಲೂಕಿನ ಹೆಚ್ಚೆ ಗ್ರಾಮದಲ್ಲಿ ಮಂಜೂರಾದ ರುದ್ರಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಿ ಗಡಿ ಗುರುತಿಸುವಂತೆ ಹತ್ತಾರು ಬಾರಿ ಮನವಿ ನೀಡಿದರೂ ಸಂಬಂಧಪಟ್ಟವರು  ಸ್ಪಂದಿಸಿಲ್ಲ ಹಾಗಾಗಿ ಈ ದಿನ ಹೆಚ್ಚೆ ಊರಿನಲ್ಲಿ ನಿಧನರಾದವರ ಮೃತದೇಹವನ್ನು ಸೊರಬ ಪಟ್ಟಣಕ್ಕೆ ತಂದು ಪ್ರತಿಭಟಿಸಿದ್ದಾರೆ.


ಸರ್ಕಾರದಿಂದ 4 ಎಕರೆ ಜಾಗ ಮಂಜೂರಾಗಿದೆ ಆದರೆ ಮಂಜೂರಾದ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ ಹಾಗಾಗಿ ನಾವು ಮೃತದೇಹವನ್ನು ತಾಲೂಕು ಕಛೇರಿಯ ಎದುರು ಇಟ್ಟು ಪ್ರತಿಭಟಿಸಲು ಬಂದಿದ್ದೇವೆ ಎಂದು ಹೆಚ್ಚೆ ಗ್ರಾಮದ ಲಕ್ಷ್ಮಣಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ವಾಕ್ಸಮರ ನಡೆದಿದ್ದು ನಂತರ ಸೊರಬ ತಾಲೂಕ್ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಮನವೊಲಿಸಿ ಕಳುಹಿಸಿದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

ವರದಿ : ವಿಜಯ್ ಗೌಳಿ

Leave a Reply

Your email address will not be published. Required fields are marked *