ಶಿವಮೊಗ್ಗ : ವಿನೋಬಾನಗರದ ಪೊಲೀಸರು ಖಡಕ್ ಕಾರ್ಯಾಚರಣೆ ನಡೆಸಿ ಡಕಾಯಿತಿ ನಡೆಸಲು ಹೊಂಚು ಹಾಕಿ ಕುಳಿತಿದ್ದ ಯುವಕರನ್ನು ಬಂಧಿಸಿದ್ದಾರೆ.
ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹೋಗುವ ಚಾನೆಲ್ ಬಳಿ ಡಕಾಯಿತಿ ನಡೆಸಲು ಹೊಂಚು ಹಾಕಿ ಕುಳಿತಿದ್ದ ಐವರು ಹುಡುಗರು ಮಾರಕಾಸ್ತ್ರಗಳನ್ನ ಹಿಡಿದು ಕಾದುಕುಳಿತಿದ್ದರು. ಈ ಮಾಹಿತಿ ಪಡೆದ ವಿನೋಬ ನಗರ ಪೊಲೀಸರ ತಂಡ ಖಡಕ್ ದಾಳಿ ನಡೆಸಿದೆ.
ವಿನೋಬ ನಗರ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಕುರಿ ನೇತೃತ್ವದಲ್ಲಿ , ಸಿಬ್ಬಂದಿಗಳಾದ ಧನಂಜಯ್ ಹೆಚ್ ಸಿ, ಮಲ್ಲಪ್ಪ ಸಿಪಿಸಿ, ಧನರಾಜ್ ಸಿಪಿಸಿ, ರಾಜು ಕೆ.ಆರ್ ಸಿಪಿಸಿಯನ್ನೊಳಗೊಂಡ ತಂಡ ಖಡಕ್ ದಾಳಿ ನಡೆಸಿದೆ.
ಡಕಾಯಿತಿಗೆ ಹೊಂಚು ಹಾಕಿದ್ದ ಸಂಜಯ್ (22), ಸಚಿನ್ ಕುಮಾರ್ (19), ಪ್ರೀತಮ್ ,ಸಂಜು ನನ್ನು ಪೊಲೀಸರು ಬಂಧಿಸಿದ್ದಾರೆ.ದಾಳಿ ವೇಳೆ ಓರ್ವ ಪರಾರಿಯಾಗಿದ್ದಾನೆ.
ಈ ವೇಳೆ ಸಂಜಯ್ ಬಳಿ ಮಾರಕಾಸ್ತ್ರ ಪತ್ತೆಯಾಗಿದೆ. ಸಚಿನ್ ಬಳಿ ಖಾರದ ಪುಡಿ ಪತ್ತೆಯಾಗಿದೆ. ಪ್ರೀಥಮ್ ಮತ್ತು ಸಂಜಯ್ ಬಳಿ ಎರಡು ಕಬ್ಬಿಣದ ರಾಡು ಪತ್ತೆಯಾಗಿದೆ.
ಈ ನಾಲ್ವರು ಕಟ್ಟಡ ಕಾರ್ಮಿಕರಾಗಿದ್ದು,ಡಕಾಯಿತಿಗೆ ಬಳಸಿದ ಸ್ಪ್ಲೆಂಡರ್ ಬೈಕ್ ನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಓಡಿ ಹೋದ ಯುವಕನನ್ನ ಹೊಸಮನೆ ಸೇವಂತ್ ಎನ್ನಲಾಗಿದೆ.
ಐವರ ಮೇಲೆ ಸುಮೋಟೊ ಪ್ರಕರಣ ದಾಖಲಾಗಿದೆ.