w
Headlines
Home » ಬೈಕ್ ಅಪಘಾತ : ಅಪಘಾತವಾದ ಬೈಕ್‌ ಮೈಮೇಲೆ ಬಿದ್ದು ಸವಾರ ಸಾವು

ಬೈಕ್ ಅಪಘಾತ : ಅಪಘಾತವಾದ ಬೈಕ್‌ ಮೈಮೇಲೆ ಬಿದ್ದು ಸವಾರ ಸಾವು

ತೀರ್ಥಹಳ್ಳಿ : ತೂದೂರು ಸಮೀಪ ಗಬಡಿ ರೈಸ್ ಮಿಲ್ ಎದುರು ಬೈಕ್ ಅಪಘಾತವಾಗಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತೂದೂರು ಸಮೀಪ ಗಬಡಿ ರೈಸ್ ಮಿಲ್ ಎದುರು ಇಂದು ಬೆಳಗಿನ ಜಾವ ಈ ಅಪಘಾತವಾಗಿದೆ.

ರಸ್ತೆ ಬದಿಯ ಹೊಂಡಕ್ಕೆ ಬೈಕ್ ಬಿದ್ದಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು 37 ವರ್ಷದ ರವಿನಾಯ್ಕ್ ಎಂದು ಗುರುತಿಸಲಾಗಿದ್ದು, ನಳೀನ್ ಕೊಪ್ಪ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

ರಸ್ತೆ ಬದಿಗೆ ಹೊಂಡದ ಬದಿ ಬಿದ್ದ ರವಿನಾಯ್ಕ್ ಮೇಲೆ ಬೈಕ್ ಬಿದ್ದಿದೆ. ಮಾಳುಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.