ಸಾಗರ : ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಎಸ್.ಎನ್ ನಗರ ಹೊಸಬಡಾವಣೆಯಲ್ಲಿ ಭಾನುವಾರ ನಡೆದಿದೆ.
ನಾಗರಾಜ್(23) ಆತ್ಮಹತ್ಯೆ ಮಾಡಿಕೊಂಡ ಯುವಕ.
ಗ್ಯಾಸ್ ಬಂಕ್ ನಲ್ಲಿ ಕರ್ತವ್ಯ ನಿರ್ವಹಿಸುವ ನಾಗರಾಜ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎರಡು ದಿನಗಳ ಹಿಂದೆಯಷ್ಟೇ ಸ್ನೇಹಿತರೊಂದಿಗೆ ನಾಗರಾಜ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾನೆ.
ಮೃತ ನಾಗರಾಜನ ತಾಯಿ ತೀರಿಕೊಂಡು ನಾಳೆಗೆ ಒಂದು ವರ್ಷ ಆಗಲಿದೆ.
ಮನೆಯಲ್ಲಿ ಒಬ್ಬಂಟಿ ಆಗಿದ್ದ ನಾಗರಾಜ್ ತಾಯಿಯ ಅಗಲಿಕೆಯಿಂದ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ.
ಸಾಗರ ಪೇಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ,ಸ್ಥಳಕ್ಕೆ ಪ್ರೊಬೆಷನರಿ ಡಿವೈಎಸ್ಪಿ ಅಶ್ವಿನಿ,ಗೋವರ್ಧನ್,ಎಎಸ್ಐ ಹಾಲಪ್ಪ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.