ಕ್ರೈಂ ಸುದ್ದಿ:
ರಾಮನಸರ ನಾಗದೇವತೆ ಕ್ಷೇತ್ರದಲ್ಲಿ ಷಷ್ಠಿ, ಜಾತ್ರಾ ಮಹೋತ್ಸವ ಸಂಪನ್ನ
ರಾಮನಸರ ನಾಗದೇವತೆ ಕ್ಷೇತ್ರದಲ್ಲಿ ಷಷ್ಠಿ, ಜಾತ್ರಾ ಮಹೋತ್ಸವ ಸಂಪನ್ನ ಹೊಸನಗರ ತಾಲೂಕಿನ ಗರ್ತಿಕೆರೆ ಸಮೀಪದ ರಾಮನಸರ ಶ್ರೀನಾಗದೇವತೆ, ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ಸುಬ್ರಹ್ಮಣ್ಯ ಷಷ್ಠಿ ಮತ್ತು ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶನಿವಾರದಂದು ಗಣಹೋಮ, ಪಂಚ ವಿಂಶತಿ, 108 ಕಲಶಾಭಿಷೇಕ, ಕಲಾತತ್ವ ಅಧಿವಾಸ ಹೋಮ, ಆಶ್ಲೇಷಾ ಬಲಿ ನಡೆಯಿತು. ವೇದಮೂರ್ತಿ ವಿದ್ವಾನ್ ಮುರಳೀಧರ ಕೆದ್ಲಾಯ ಹಾಗೂ ಪ್ರಧಾನ ಅರ್ಚಕ ಸುರೇಶ್ ಭಟ್ ಅವರ ತಂಡ ಪೂಜಾ ವಿಧಿವಿಧಾನಗಳ ನೆರವೇರಿಸಿದರು. ಉಡುಪಿ ಜಿಲ್ಲೆ…
ಲೈಟ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆಗೆ ಮಗುಚಿ ಬಿದ್ದ ಲಾರಿ – ತಪ್ಪಿದ ಭಾರಿ ಅನಾಹುತ
ಲೈಟ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆಗೆ ಮಗುಚಿ ಬಿದ್ದ ಲಾರಿ – ತಪ್ಪಿದ ಭಾರಿ ಅನಾಹುತ ಚಾಲಕನ ನಿಯಂತ್ರಣ ತಪ್ಪಿ ಗೊಬ್ಬರದ ಲಾರಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆಗೆ ಮಗುಚಿ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ 766 ಸಿ ಶಿವಮೊಗ್ಗ ರಸ್ತೆಯ ಶ್ರೀ ಗುರುಶಕ್ತಿ ಆಟೋಮೊಬೈಲ್ಸ್ ಬಳಿ ಹಾನಗಲ್ಲಿನ ಲಾರಿಯೊಂದು ಮಂಗಳೂರಿನಿಂದ ಸೊರಬಕ್ಕೆ ಗೊಬ್ಬರ ತುಂಬಿಕೊಂಡು ತೆರಳುತ್ತಿರುವಾಗ ಸೋಮವಾರ ಬೆಳಗಿನ ಜಾವ 3:00 ರ ಸಮಯದಲ್ಲಿ ಚಾಲಕನ ನಿಯಂತ್ರಣ…
ಚಲಿಸುತಿದ್ದ ಕ್ಯಾಂಟರ್‌ಗೆ ವಿದ್ಯುತ್ ತಂತಿ ತಗುಲಿ ಚಾಲಕ ಸಾವು
ಚಲಿಸುತಿದ್ದ ಕ್ಯಾಂಟರ್‌ಗೆ ವಿದ್ಯುತ್ ತಂತಿ ತಗುಲಿ ಚಾಲಕ ಸಾವು ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ಚಾಲಕ ಮೃತಪಟ್ಟ ಘಟನೆ ಸೊರಬ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ. ಶಿರಾಳಕೊಪ್ಪದ ಮಠದಗದ್ದೆ ನಿವಾಸಿ ಮೊಹಮ್ಮದ್ ಈಶಾಮ್ (32) ಮೃತ ದುರ್ಧೈವಿಯಾಗಿದ್ದಾರೆ. ಡಿ.5ರಂದು ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಿಂದ ಸೊರಬ ತಾಲೂಕಿನ ಸುತ್ತಕೋಟೆಗೆ ತೆರಳುವ ರಸ್ತೆಮಾರ್ಗದಲ್ಲಿ ಸಾಸರಹಳ್ಳಿ ಸಮೀಪ ಜೋತು ಬಿದ್ದ ವಿದ್ಯುತ್ ತಂತಿ ಕ್ಯಾಂಟರ್‌ಗೆ ತಗುಲಿದೆ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ ಎಂದು ಮೃತನ ತಂದೆ ರಿಯಾಜ್ ಅಹ್ಮದ್…
ಶಾಲಾ ಪ್ರವಾಸದ ಬಸ್ ಮಗುಚಿ 45 ಮಕ್ಕಳಿಗೆ ಗಾಯ
ಶಾಲಾ ಪ್ರವಾಸದ ಬಸ್ ಮಗುಚಿ 45 ಮಕ್ಕಳಿಗೆ ಗಾಯ ದಾಂಡೇಲಿ: ದಾಂಡೇಲಿಗೆ ಪ್ರವಾಸಕ್ಕೆಂದು ಬಂದಿದ್ದ ಶಾಲಾ ಮಕ್ಕಳಲ್ಲಿದ್ದ ಖಾಸಗಿ ಬಸ್ ಮಾರ್ಗದ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ರವಿವಾರ ನಡೆದಿದೆ. ಗಣೇಶಗುಡಿಯಲ್ಲಿ ಪ್ರವಾಸ ಮುಗಿಸಿಕೊಂಡು ದಾಂಡೇಲಿಗೆ ವಾಪಸ ಬರುತ್ತಿದ್ದಾಗ ಎದುರಿನಿಂದ ಬಂದ ಕಾರನ್ನು ತಪ್ಪಿಸಲು ಹೋದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಗಟಾರಿಗೆ ಉರುಳಿ ಬಿದ್ದ ಪರಿಣಾಮವಾಗಿ ಬಸ್ ನಲ್ಲಿ ಇದ್ದ 45 ಮಕ್ಕಳಿಗೆ ಗಾಯಗಳಾಗಿವೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ…
ಬೇಲಿ ಹಾಕುವ ವಿಚಾರ – ಕೊಡಲಿಯಿಂದ ಹಲ್ಲೆ
ಬೇಲಿ ಹಾಕುವ ವಿಚಾರ – ಕೊಡಲಿಯಿಂದ ಹಲ್ಲೆ ಸೊರಬ : ತಾಲೂಕಿನ ಆನವಟ್ಟಿ ಗ್ರಾಮದ ತಿಮ್ಮಾಪುರ ಗ್ರಾಮದಲ್ಲಿ ಖಾಲಿ ನಿವೇಶನಕ್ಕೆ ಬೇಲಿ ಹಾಕುವ ವಿಚಾರದಲ್ಲಿ ಮಾರಾಮಾರಿ ನಡೆದ ಬಗ್ಗೆ ವರದಿಯಾಗಿದೆ. ಅಣ್ಣಪ್ಪ (58) ಎನ್ನುವವರ ಪಕ್ಕದ ಮನೆಯ ರಿಜ್ವಾನ್ ಎಂಬಾತ ಕೊಡಲಿಯಿಂದ ಹಲ್ಲೆ ನಡೆಸಿ ಅಣ್ಣಪ್ಪ ದಂಪತಿಗಳಿಗೆ ಅವಾಚ್ಯ ಶಬ್ದ ಮತ್ತು ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ರಿಜ್ವಾನ್, ಸಹೋದರ ಕರೀಮುಲ್ಲಾ, ರುಕ್ಸನಾ ಮತ್ತು ಶಬಾನಾ ವಿರುದ್ಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಣ್ಣಪ್ಪನವರ…
ಆನ್ ಲೈನ್ ನಲ್ಲಿ ಕೆಲಸ ನಂಬಿ 8 ಲಕ್ಷ ಕಳೆದುಕೊಂಡ ಮಹಿಳೆ
ಆನ್ ಲೈನ್ ನಲ್ಲಿ ಜಾಬ್ ನಂಬಿ 8 ಲಕ್ಷ ಕಳೆದುಕೊಂಡ ಮಹಿಳೆ ಶಿವಮೊಹ್ಗ: ಪಾರ್ಟ್ ಟೈಮ್ ಜಾಬ್ ಆಫರ್ ನಂಬಿ 8 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಶಿವಮೊಗ್ಗದ ಮಹಿಳೆಯೊಬ್ಬರು ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇಲ್ಲಿನ ನಿವಾಸಿಯೊಬ್ಬರು ಜಾಹೀರಾತು ಒಂದರಲ್ಲಿದ್ದ ನಂಬರ್‌ಗೆ ವಾಟ್ಸಪ್ ಮಾಡಿದ್ದರು. ಬಳಿಕ ಅಲ್ಲಿ ನೀಡಿದ ವಿವರಗಳನ್ನ ಫಾಲೋ ಮಾಡಿದರು. ಬಳಿಕ ವಾಟ್ಸಾಪ್‌ನಲ್ಲಿ ತಾವು ಕಳುಹಿಸುವ ವಿಡಿಯೋಗಳಿಗೆ ಲೈಕ್ ಮಾಡಿ, ಸ್ಕ್ರೀನ್ ಶಾಟ್ ಕಳುಹಿಸುವಂತೆ ಇನ್ನೊಂದು…
ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರ ಸ್ಥಿತಿ ಗಂಭೀರ
ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರ ಸ್ಥಿತಿ ಗಂಭೀರ ತೀರ್ಥಹಳ್ಳಿ : ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಮಂಡಗದ್ದೆ ಬಳಿ ನಡೆದಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತಿದ್ದ ಮಾರುತಿ ಆಲ್ಟೊ ಕಾರು ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆಗೆ ಹೋಗುತಿದ್ದ ಟಿವಿಎಸ್ ಅಪ್ಪಚ್ಚಿ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬೈಕ್ ನಲ್ಲಿದ್ದ ಇಬ್ಬರು ಪ್ರಯಾಣಿಕರಿದ್ದು ಒಬ್ಬರ ಕಾಲು ಮುರಿತವಾಗಿದ್ದರೆ ಇನ್ನೊಬ್ಬರ ಬೆನ್ನು ಮೂಳೆಗೆ ಗಂಭೀರ ಗಾಯವಾಗಿದ್ದು ಇಬ್ಬರನ್ನು…
ರಿಪ್ಪನ್‌ಪೇಟೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು
ರಿಪ್ಪನ್‌ಪೇಟೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ದಿನ ಎರಡು ಮನೆಯಲ್ಲಿ ಸರಣಿ ಕಳ್ಳತನವಾಗಿರುವ (Theft Case) ಘಟನೆ ಜರುಗಿದೆ. ಘಟನೆ 1 ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ತಳಲೆ ಸಮೀಪದ ಕಗ್ಗಲಿ ಗ್ರಾಮದ ನ.30 ರಂದು ಅಶೋಕ್ ಎನ್ ಎಂಬುವವರ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಬೀರುವಿನಲ್ಲಿ ಇದ್ದ 24 ಗ್ರಾಂ ಬಂಗಾರ, 15 ಸಾವಿರ ನಗದು, 85 ಗ್ರಾಂ ಬೆಳ್ಳಿ ಅನ್ನು…
ಪತ್ರಕರ್ತನಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆ – ಹಣಕ್ಕಾಗಿ ಬೇಡಿಕೆ
ಪತ್ರಕರ್ತನಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆ – ಹಣಕ್ಕಾಗಿ ಬೇಡಿಕೆ ಶಿವಮೊಗ್ಗ : ಪತ್ರಕರ್ತರೊಬ್ಬರಿಗೆ ಸ್ಕ್ಯಾಮ್ ಕಾಲ್‌ವೊಂದು ಬಂದಿದ್ದು ತಾವು ದೆಹಲಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ನಿಮ್ಮ ಆಧಾರ್ ನಂಬರ್ ಮೂಲಕ ದೆಹಲಿಯಲ್ಲಿ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡಲಾಗಿದೆ. ಅದರ ಮೂಲಕ ನರೇಶ್ ಗೋಯಲ್ ಮನಿಲ್ಯಾಂಡರಿಂಗ್ ಕೇಸ್‌ನಲ್ಲಿ ಅಕ್ರಮವಾಗಿ ಹಣವರ್ಗಾವಣೆ ಮಾಡಲಾಗಿದೆ ಎಂದು ಹೆದರಿಸಿದ್ದಾರೆ. ಅಷ್ಟೆಅಲ್ಲದೆ, ಪ್ರಕರಣದಲ್ಲಿ ನಿಮ್ಮ ತಪ್ಪಿಲ್ಲವಾದರೆ, ತಮ್ಮ UPI ನಂಬರ್‌ಗೆ ಲಕ್ಷ ರೂಪಾಯಿ ತಕ್ಷಣವೇ ಹಾಕಬೇಕು ಎಂದು ಹೆದರಿಸಿದ್ದು, ಅರೆಸ್ಟ್…
ವಿವಾಹಿತ ಮಹಿಳೆಯ ಬಲಾತ್ಕಾರಕ್ಕೆ ಯತ್ನ – ಪಂಚಾಯತಿ ಕರೆದು ಪತಿಯ ಮೇಲೆ ಹಲ್ಲೆ – ಐವರ ಮೇಲೆ FIR
ವಿವಾಹಿತ ಮಹಿಳೆಯ ಬಲಾತ್ಕಾರಕ್ಕೆ ಯತ್ನ – ಪಂಚಾಯತಿ ಕರೆದು ಪತಿಯ ಮೇಲೆ ಹಲ್ಲೆ – ಐವರ ಮೇಲೆ FIR ಶಿರಾಳಕೊಪ್ಪ: ವಿವಾಹಿತ ಮಹಿಳೆಯ ಮೇಲೆ ಕಣ್ಣು ಹಾಕಿ ಆಕೆಯ ಬಲತ್ಕಾರಕ್ಕೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಪಂಚಾಯತಿ ನಡೆಸಿದ ಪತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿರಾಳಕೊಪ್ಪದ ರಾಗಿಕೊಪ್ಪದಲ್ಲಿ ನಡೆದಿದೆ. 30 ವರ್ಷದ ವಿವಾಹಿತ ಮಹಿಳೆಯ ಪತಿ ಕೆಲಸದ ಮೇಲೆ ದೆಹಲಿಗೆ ಹೋಗುತ್ತಿದ್ದು 15 ದಿನಗಳವರೆಗೆ ಮನೆಗೆ ಬರುತ್ತಿರಲಿಲ್ಲ. ಇದನ್ನು ದುರುಪಯೋಗ ಪಡಿಸಿಕೊಳ್ಳುವ ಯೋಜನೆಯಲ್ಲಿದ್ದ ಎದುರಿನ ಮನೆಯ ೩೮…