ಮಾರಾಟದ ಉದ್ದೇಶಕ್ಕಾಗಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಬಜರಂಗದಳದ ಕಾರ್ಯಕರ್ತರು ರಕ್ಷಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ಇಂದು ನಡೆದಿದೆ.
ಹೊಸನಗರ ಕಡೆಯಿಂದ ಶಿರಾಳಕೊಪ್ಪದ ಕಡೆಗೆ ಅಶೋಕ್ ಲೈಲೆಂಡ್ ದೋಸ್ತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರು ಎತ್ತಿನ ಹೋರಿ ಹಾಗೂ ಒಂದು ಎಮ್ಮೆ ಕರುವನ್ನು ಭಜರಂಗದಳದ ಕಾರ್ಯಕರ್ತರು ರಸ್ತೆಗೆ ಅಡ್ಡಗಟ್ಟಿ ವಶಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಂದು ಬೆಳಿಗ್ಗೆ ಕೆಎ 17 ಎಎ 0196 ವಾಹನದಲ್ಲಿ ಸುಮಾರು ಆರು ಎತ್ತಿನಹೋರಿ ಹಾಗೂ ಒಂದು ಎಮ್ಮೆ ಕರುವನ್ನು ತುಂಬಿಕೊಂಡು ಹೊಸನಗರ ಕಡೆಯಿಂದ ಶಿರಾಳಕೊಪ್ಪದ ಕಡೆಗೆ ರಭಸವಾಗಿ ಹೋಗುತ್ತಿರುವುದನ್ನು ಗಮನಿಸಿದ ಬಜರಂಗ ದಳದ ಕಾರ್ಯಕರ್ತರು ವಾಹನವನ್ನು ಅಡ್ಡಗಟ್ಟಿದಾಗ ವಾಹನದಲ್ಲಿರುವ ಚಾಲಕ ಹಾಗೂ ಇನ್ನೊಬ್ಬರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ವಾಹನದಲ್ಲಿ ಅವೈಜ್ಞಾನಿಕವಾಗಿ ಜಾನುವಾರುಗಳನ್ನು ಕಟ್ಟಿರುವುದನ್ನು ನೋಡಿ ಅಕ್ರಮ ಗೋವು ಸಾಗಾಟ ಎಂದು ಗಮನಕ್ಕೆ ಬಂದು ಕೂಡಲೇ ವಾಹನ ಸಹಿತ ಹೊಸನಗರ ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದಾರೆ.
ಈ ಸಂಧರ್ಭದಲ್ಲಿ ಬಜರಂಗದಳದ ಕಾರ್ಯಕರ್ತರಾದ ಬಟ್ಟೆಮಲ್ಲಪ್ಪದ ಅಭಿ, ವಿನಯ್, ಗುರುರಾಜ್, ಸಾಗರ್, ಶಶಿ, ರಮೀತಾ ಹಾಗೂ ವಿಜೇತ್ ರವರು ಇದ್ದರು.
ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.