Headlines

ಗಾಂದೀಜಿ ಮತ್ತು ಶಾಸ್ತ್ರೀಜೀಯವರು ತಮ್ಮ ಸರಳ ಸಜ್ಜನಿಕೆಯಿಂದ ಜನಮಾನಸದಲ್ಲಿದ್ದಾರೆ : ಆರ್ ಎನ್ ಮಂಜುನಾಥ್ | Gandhi jayanthi

ರಿಪ್ಪನ್‌ಪೇಟೆ : ಮಹಾತ್ಮಗಾಂಧಿಜೀ ಹಾಗೂ ಲಾಲ್‌ಬಹದ್ದೂರು ಶಾಸ್ತ್ರೀಯವರು ಸರಳ ಸಜ್ಜನಿಕೆಯಿಂದ ಪ್ರಪಂಚದ ಜನಮಾನಸದಲ್ಲಿ ಉಳಿದಿದ್ದಾರೆ.ಅದರೆ ಇಂದಿನ ರಾಜಕಾರಣಿಗಳು ಜಾತಿ ಧರ್ಮ ಹಾಗೂ ಭಷ್ಟಾಚಾರವನ್ನೇ ಅಧಾರವಾಗಿಟ್ಟುಕೊಂಡು ಮುನ್ನಡೆಯುತ್ತಿರುವುದು ನಮ್ಮ ರಾಷ್ಟ ನಾಯಕರುಗಳಿಗೆ ಮಾಡಿದಂತಹ ಅವಮಾನ ಎಂದು ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ ಹೇಳಿದರು.

ಪಟ್ಟಣದ ಗ್ರಾಮ ಪಂಚಾಯ್ತಿಯ ಕುವೆಂಪು ಸಭಾಂಗಣದಲ್ಲಿ ರಾಷ್ಟç ಪಿತ ಮಹಾತ್ಮ ಗಾಂಧಿಜೀ ಹಾಗೂ ಮಾಜಿ ಪ್ರಧಾನಿ ಭಾರತ ರತ್ನ ಲಾಲ್‌ಬಹದ್ದೂರು ಶಾಸ್ತಿಜೀಯವರ ಜನ್ಮ ದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 
ಸಾರ್ವಜನಿಕ ಹಣವನ್ನು ಇಂದಿನ ರಾಜಕಾರಣಿಗಳು ಲೂಟಿ ಹೊಡೆಯಲು ಒಬ್ಬರ ಮೇಲೆ ಒಬ್ಬರು ಪೈಪೂಟಿ ನಡೆಸುತ್ತಿದ್ದು ಸಮಾಜದ ಮುಂದೆ ಬಂದು ನಾನು ಅಭಿವೃದ್ದಿ ಪರ ಜನಪರ ಸಮಾಜ ಸೇವಕ ಎಂಬ ಮುಖವಾಡ ಧರಿಸಿಕೊಂಡು ದೇಶದ ಜನತೆಯನ್ನು ವಂಚಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸ್ವಚ್ಚಭಾರತ ಎಂಬ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ಗಾಂಧಿಜೀಯವರ ಜನ್ಮ ದಿನದಲ್ಲಿ ಸ್ವಚ್ಚತಾ ಅಂದೋಲನ ಮಾಡಿದರೆ ಸಾಲದು ಗ್ರಾಮದಲ್ಲಿನ ಸ್ವಚ್ಚತೆಯ ಬಗ್ಗೆ ಗ್ರಾಮಾಡಳಿತ ಹಾಗೂ ನಾಗರೀಕರು ಒಟ್ಟಾಗಿ ಗಮನ ಹರಿಸಬೇಕು ಆಗ ಮಾತ್ರ ಸ್ವಚ್ಚತೆಯ ಕಾರ್ಯ ನಿರಂತರವಾಗಿ ಮುಂದುವರಿಯುತ್ತದೆ ಎಂದರು.

ನಂತರ ಮಾತನಾಡಿದ ಶಿವಮೊಗ್ಗ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಆರ್.ಎನ್.ಮಂಜಪ್ಪ ಮಾನವ ಜಗತ್ತು ಕಂಡ ಬಹುದೊಡ್ಡ ಇತಿಹಾಸ ಮೂರ್ತಿ ಶ್ರೇಷ್ಟ ಚಿಂತಕ ದಾರ್ಶನಿಕ ರಾಷ್ಟ ಪ್ರೇಮಿ ನುಡಿದಂತೆ ನಡೆದವರು.ಸತ್ಯ ಅಹಿಂಸೆ ಮತ್ತು ಮೌಲ್ಯಾದರ್ಶಗಳ ಸತ್ವದಿಂದಲೇ ಭಾರತಕ್ಕೆ ಸಮರ್ಥ ರಾಜಕೀಯ ಮತ್ತು ಸಾಮಾಜಿಕ ನಾಯಕತ್ವ ನೀಡಿದವರು ಮಹಾತ್ಮ ಗಾಂಧಿಜೀ.ಪ್ರಸ್ತುತ ಸಮಾಜದಲ್ಲಿ ಗಾಂಧಿಜೀಯವರ ಚಿಂತನೆಗಳು ಅದರ್ಶಗಳು ತತ್ವಗಳು ಕಣ್ಮುರೆಯಾಗುತ್ತಿದ್ದು ಇಂದಿನ ಯುವ ಸಮೂಹ ಎತ್ತಸಾಗುತ್ತಿದೆ ಎಂಬುದು ಭಯನಕವಾಗಿ ಕಾಡುತ್ತಿದ್ದು ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮಗಳು ಸಹ ದಾರಿತಪ್ಪುವಂತೆ ಮಾಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಗೈರುಹಾಜರಿ ಎದ್ದು ಕಾಣುತಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಧ್ಯಕ್ಷೆ ಮಂಜುಳ ಕೇತಾರ್ಜಿರಾವ್ ವಹಿಸಿದ್ದರು.

ಪಿಡಿಓ ಜಿ.ಚಂದ್ರಶೇಖರ್ ಗ್ರಾಪಂ ಸದಸ್ಯರಾದ ಸುಂದರೇಶ್,  ಆರ್.ವಿ.ನಿರೂಪ್ ಕುಮಾರ್,ಆರ್,ಪ್ರಕಾಶಪಾಲೇಕರ್, ವಿನೋಧ,ಅನುಪಮ,ಅಶ್ವಿನಿ ರವಿಶಂಕರ,ವನಮಾಲ,ದೀಪಾಸುದೀರ್, ಧನಲಕ್ಷಿö್ಮ,ಜಿ.ಡಿ.ಮಲ್ಲಿಕಾರ್ಜುನ,ಗಣಪತಿ, ಮುಖಂಡರಾದ ಆರ್ ಟಿ ಗೋಪಾಲ್‌ ,ಆರ್ ರಾಘವೇಂದ್ರ ಹಸನಬ್ಬ, ಕುಕ್ಕಳಲೇ ಈಶ್ವರ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯ್ತಿ ಸಿಬ್ಬಂದಿವರ್ಗ ಹಾಜರಿದ್ದು ನಂತರ ಸ್ವಚ್ಚತಾ ಕಾರ್ಯದೊಂದಿಗೆ ಶ್ರಮದಾನ ಮಾಡಿದರು. 

Leave a Reply

Your email address will not be published. Required fields are marked *